Saturday 31 December 2011

WISH U HAPPY NEW YEAR 2012



click here 4 more MOHAMMAD AYAN



click here 4 more MANGALOREANSFORU

WISH U VERY HAPPY NEW YEAR 2012



click here 4 moreMOHAMMAD AYAN

ABU AYAN
New year glitter comments, animated newyear gif scraps, happy new year wishes

MANGALOREANSFORU

MANGALOREANSFORU
New year glitter comments, animated newyear gif scraps, happy new year wishes

MANGALOREANSFORU

MOHAMMAD AYAN
New year glitter comments, animated newyear gif scraps, happy new year wishes

WISH U HAPPY NEW YEAR MANGALOREANSFORU

WISH YOU HAPPY NEW YEAR 2012



More MANGALOREANSFORU WISH U GOOD BYE 2011 WELCOME 2012
scrap orkut

WISH U HAPPY NEW YEAR MANGALOREANSFORU
scrap for orkut

WISH U HAPPY NEW YEAR MANGALOREANS

WISH U HAPPY NEW YEAR 2012


orkut scraps

WELCOME OUR WORLD HAPPY NEW YEAR 2012

Thursday 29 December 2011

Why this karavali di trailer-2 karavali friends puttur

GUYS MAKE SMALL FAVOUR FOR ME

Dear loving my friends, i request u all, please do little favour for me, one of our member Mr. Prasanth Sheety's sister want win more 50 points, today last day,
please click the link and vote her, 
if your love me i hope sure u guy's vote her picture 
Abu Ayan.
click this link vote now, Please
http://www.facebook.com/photo.php?fbid=309220249110577&set=at.308069469225655.79567.146849542014316.783774887&type=1&theater

Wednesday 28 December 2011

MANGALOREANSFORU GUY'S PLEASE SUPPORT BHAVISHYA SHETTY (click the link and like her image)

ಬಂಟ್ವಾಳ ನಗರ ಪಂಚಾಯತ್ ಮಾಜಿ ಉಪಾಧ್ಯಕ್ಷ ಎ.ಕೆ. ಅಬೂಸಾಲಿ ನಿಧನ


Posted on  by ಅಬ್ದುಲ್ ಹಮೀದ್ ಸಿ.ಹೆಚ್, ಕಾವು, ಪುತ್ತೂರು.

ಬಂಟ್ವಾಳ : ಬಂಟ್ವಾಳ ನಗರ ಪಂಚಾಯತ್ ಮಾಜಿ ಉಪಾಧ್ಯಕ್ಷ, ಶಾಂತಿಅಂಗಡಿ ನಿವಾಸಿ ಎ.ಕೆ. ಅಬೂಸಾಲಿ (52) ಅವರು ಅಲ್ಪ ಕಾಲದ ಅನಾರೋಗ್ಯದಿಂದ ಮಂಗಳವಾರ ಮುಂಜಾನೆ ಸ್ವಗೃಹದಲ್ಲಿ ನಿಧನರಾದರು.
ಚಾಂದ್ ಇಲೆಕ್ಟ್ರಿಕಲ್ಸ್‌ನ ಗುತ್ತಿಗೆದಾರರಾಗಿದ್ದ ಇವರು ಶಾಂತಿಅಂಗಡಿ ಮುಸ್ಲಿಂ ಯಂಗ್‌ಮೆನ್ಸ್ ಎಸೋಸಿಯೇಶನ್ ಇದರ ಅಧ್ಯಕ್ಷರಾಗಿ, ಮಿತ್ತಬೈಲು ಜುಮಾ ಮಸೀದಿ ಉಪಾಧ್ಯಕ್ಷರಾಗಿ ಜಮೀಯ್ಯತುಲ್ ಫಲಾಹ್ ಬಂಟ್ವಾಳ ತಾಲೂಕು ಘಟಕದ ಕಾರ್ಯಕಾರಿ ಸಮಿತಿ ಸದಸ್ಯರಾಗಿ ಸೇವೆ ಸಲ್ಲಿಸಿದ್ದು, ಅವರು ಧಾರ್ಮಿಕ ಹಾಗೂ ಸಾಮಾಜಿಕ ಕ್ಷೇತ್ರದಲ್ಲಿ ಸಕ್ರಿಯರಾಗಿದ್ದರು.
ಮೃತರು ಪತ್ನಿ, ಇಬ್ಬರು ಪುತ್ರರು, ಮೂವರು ಪುತ್ರಿಯರು ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. ಮೃತರ ಮನೆಗೆ ತೆರಳಿದ ಸಮಸ್ತ ಕೇಂದ್ರ ಮುಶಾವರ ಸದಸ್ಯರಾದ ಶೈಖುನಾ ಕೆ.ಪಿ. ಅಬ್ದುಲ್ ಜಬ್ಬಾರ್ ಮುಸ್ಲಿಯಾರ್ ಪ್ರಾರ್ಥನೆ ಸಲ್ಲಿಸಿದರು. ಬಂಟ್ವಾಳ ತಾಲೂಕು ಜಮೀಯ್ಯತುಲ್ ಫಲಾಹ್ ಹಾಗೂ ಮಿತ್ತಬೈಲು ಜುಮಾ ಮಸೀದಿ ಅಧ್ಯಕ್ಷ ಎಸ್.ಎಂ. ಮುಹಮ್ಮದ್ ಅಲಿ ಶಾಂತಿಅಂಗಡಿ ಇವರ ನಿಧನಕ್ಕೆ ತೀವ್ರ ಸಂತಾಪ ಸೂಚಿಸಿದ್ದಾರೆ.
- ಪಿ.ಎಂ.ಎ. ಪಾಣೆಮಂಗಳೂರು. (ವರದಿಗಾರರು, ವಿ ಕೆ ನ್ಯೂಸ್).

ಅಣ್ಣಾ ತಂಡಿ ಕೆ ವಜಾಹ್ ಸೆ ನಹೀ ಫಂಡ್ ಕೆ ವಜಾಹ್ ಸೆ ಮುಂಬೈ ಗಯೇ ಹೈ ಎಂದ ದಿಗ್ವಿಜಯ್ ಸಿಂಗ್


Posted on  by ಅಶ್ರಫ್ ಮಂಜ್ರಾಬಾದ್, ಸಕಲೇಶಪುರ

ನವದೆಹಲಿ : ಅಣ್ಣಾ ಹಜಾರೆ ಮತ್ತು ತಂಡ ದೆಹಲಿಯಲ್ಲಿನ ಚಳಿಯ ಕಾರಣದಿಂದ ದೆಹಲಿಯ ಬದಲು ಮುಂಬೈನಲ್ಲಿ ಉಪವಾಸ ಸತ್ಯಾಗ್ರಹ ಹಮ್ಮಿಕೊಂಡಿರುವುದರ ಬಗ್ಗೆ ವ್ಯಂಗ್ಯವಾಡಿರುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ದ್ವಿಗ್ವಿಜಯ್ ಸಿಂಗ್ ಅಣ್ಣಾ ತಂಡ ಚಳಿಗೆ ಹೆದರಿ ಮುಂಬೈಗೆ ಹೋಗಿಲ್ಲ , ಬದಲಾಗಿ ಫಂಡ್ ಕಲೆಕ್ಷನ್ ಮಾಡಲು ಮುಂಬೈನಲ್ಲಿ ಉಪವಾಸ ಸತ್ಯಾಗ್ರಹದ ನಾಟಕವಾಡುತ್ತಿದೆ ಎಂದು ಹೇಳಿದ್ದಾರೆ. ವಯಸ್ಸಾದ ಅಣ್ಣಾ ಹಜಾರೆಯವರನ್ನು ಉಪವಾಸ ಕೂರಿಸಿ ಅಣ್ಣಾ ತಂಡದ ನಾಲ್ವರು ಸದಸ್ಯರು ಹೊಟ್ಟೆತುಂಬಾ ತಿನ್ನುತ್ತಿದ್ದಾರೆ . ಈ ಆಂದೋಲನ ಸಂಪೂರ್ಣ ರಾಜಕೀಯ ಪ್ರೇರಿತವಾಗಿದ್ದು ಕಾಂಗ್ರೆಸ್ ಹಾಗೂ ಕೇಂದ್ರ ಸರ್ಕಾರವನ್ನು ಗುರಿಯಾಗಿಸಿ ನಡೆಸಲಾಗುತ್ತಿದೆ ಎಂದಿದ್ದಾರೆ .
ಕೇಂದ್ರ ಸರ್ಕಾರ ಲೋಕಪಾಲ್ ಮಸೂದೆ ಜಾರಿಗೆ ತರುತ್ತಿದ್ದು ಅದರಲ್ಲಿ ಅಣ್ಣಾ ತಂಡದ ಬೇಡಿಕೆಯಂತೆ ಪ್ರಧಾನ ಮಂತ್ರಿಯವರನ್ನು ಕೆಲವು ಶರತ್ತುಗಳ  ಆಧಾರದ ಮೇಲೆ ಲೋಕಪಾಲ  ವ್ಯಾಪ್ತಿಗೆ ಸೇರಿಸಲಾಗಿದೆ. ಹೀಗಿದ್ದೂ ಅಣ್ಣಾ ಹಜಾರೆ ಲೋಕಪಾಲ್ ವಿರೋಧಿಗಳ ವಿರುದ್ಧ ಹೋರಾಟ ಮಾಡುವ ಬದಲು ಲೋಕಪಾಲ್ ಜಾರಿಗೆ ಹೊರಟಿರುವ ಕೇಂದ್ರ ಸರ್ಕಾರದ ವಿರುದ್ಧ ಹೋರಾಟ ಮಾಡುತ್ತಿದ್ದಾರೆ ಎಂದು ಅವರು  ಅಪಾದಿಸಿದ್ದಾರೆ .

Tuesday 27 December 2011

BHAVISHYA SHETTY .. GUY'Z CLICK THE LINK AND LIKE THIS IMAGE

Jana Gana Mana - National Anthem 100 years history

ವಿಜಯ್ ಮಲ್ಯರ ಹಾರೋ ಹಕ್ಕಿಗೆ ಗುಡ್ ಬೈ ಹೇಳಿದ ೩೬ ಗಗನಸಖಿಯರು


Posted on  by ಕೆ.ಎಂ. ಮಹಮ್ಮದ್ ಅನ್ಸಾರ್ ಬೆಳ್ಳಾರೆ (ಅಲ್ಫಾ).

ಬೆಂಗಳೂರು: ತೀವ್ರ ಅರ್ಥಿಕ ತೊಂದರೆಯಿಂದ ಅನುಭವಿಸುತ್ತಿರುವ ಮದ್ಯ  ದೊರೆ ವಿಜಯ್ ಮಲ್ಯ ಒಡೆತನದ ಕಿಂಗ್ ಫಿಷರ್  ಏರ್ ಲೈನ್ಸ್ ೩೬ ಮಂದಿ ಗಗನಸಖಿಯರು ಗುಡ್ ಬೈ  ಹೇಳಿ ಸರಕಾರಿ ಕೆಲಸದ ಕಡೆ  ಹೊರಟಿದ್ದಾರೆ. ಸರಿಯಾದ ವೇತನ ನೀಡುತ್ತಿಲ್ಲ, ಕಿಂಗ್ ಫಿಷರ್ ಒಮ್ಮಿಂದೊಮ್ಮೆಗೆ  ಅರ್ಥಿಕ  ಬಿಕ್ಕಟ್ಟು ಅನುಭವಿಸುತ್ತಿರುದನ್ನ ಕಂಡ ಗಗನಸಖಿಯರು ತಮ್ಮ ಸುರಕ್ಷತೆಯ ದ್ರಿಷ್ಟಿಯಿಂದ  ಕಿಂಗ್ ಫಿಷರ್ ತೊರೆದಿದ್ದಾರೆ ಎಂದು ಕೇಳಿ ಬರುತ್ತಿದೆ.
ಕಿಂಗ್ ಫಿಷರ್ ತೊರೆದ ಕೆಲವು ಗಗನಸಖಿಯರು ಸರಕಾರಿ ಕೆಲಸದ ಕಡೆಗೆ ಮುಖ ಮಾಡಿದರೆ ಇನ್ನು ಕೆಲವರು ಏರ್ ಇಂಡಿಯಾ ಕಡೆ ಮುಖ ಮಾಡಿದ್ದಾರೆ ಎಂದು ತಿಳಿದುಬಂದಿದೆ. ತೀವ್ರ ಹಿನ್ನಡೆ  ಅನುಭವಿಸುತ್ತಿರುವ  ವಿಜಯ್ ಮಲ್ಯ ಅವರಿಗೆ ಇನ್ನೊಂದು ಹೊಡೆತ ಬಿದ್ದಂತಾಗಿದೆ.
-ನಿತಿನ್ ರೈ ಕುಕ್ಕುವಳ್ಳಿ (ವರದಿಗಾರರು ವಿಕೆ ನ್ಯೂಸ್ )

Saturday 24 December 2011

Is wishing Merry Christmas forbidden (HARAM) in Islam by Dr Zakir Naik

ದುಬೈನಲ್ಲಿ ಚಿನ್ನಾಭರಣ ಮಳಿಗೆಯ ಹಣ ಅಪಹರಣ ಪ್ರಕರಣ , ಕಾಸರಗೋಡಿನಲ್ಲಿ ಮನೆಯ ಮೇಲೆ ಪೋಲಿಸ್ ದಾಳಿ


Posted on  by ಅಶ್ರಫ್ ಮಂಜ್ರಾಬಾದ್, ಸಕಲೇಶಪುರ

Demo Picture
ಕಾಸರಗೋಡು : ದುಬೈನ ಖ್ಯಾತ ಚಿನ್ನಾಭರಣ  ಮಳಿಗೆಯೊಂದರ ಹಣ ಅಪಹರಣದ ಪ್ರಕರಣದ ಸಂಶಯಿತ ಆರೋಪಿಯ ಮನೆಯ ಮೇಲೆ ಪೊಲೀಸರು ದಾಳಿ ನಡೆಸಿದ್ದಾರೆ . ಜಗತ್ತಿನ ವಿವಿಧೆಡೆ ಶಾಖೆಗಳನ್ನು ಹೊಂದಿರುವ ಈ ಚಿನ್ನಾಭರಣ ಸಂಸ್ಥೆಯ ದುಬೈ ಶಾಖೆಯಿಂದ ಬ್ಯಾಂಕಿಗೆ ಕಟ್ಟಲು ಕೊಟ್ಟಿದ್ದ ಒಂದೂವರೆ ಕೋಟಿ ರೂಪಾಯಿಗಳಷ್ಟು ಹಣದೊಂದಿಗೆ ಅಲ್ಲಿನ ಸೇಲ್ಸ್ ಮ್ಯಾನ್ ಪರಾರಿಯಾಗಿದ್ದ . ಆತ ಕಾಸರಗೋಡಿನ ಪಲ್ಳಂ ರಸ್ತೆಯಲ್ಲಿರುವ ತನ್ನ ಮನೆಗೆ ಬಂದಿದ್ದಾನೆ ಎಂಬ  ಮಾಹಿತಿಯ ಹಿನ್ನಲೆಯಲ್ಲಿ ಪೊಲೀಸರು ದಾಳಿ ಈ ದಾಳಿ ನಡೆಸಿದರು .

ಆದರೆ ದಾಳಿಯ ವೇಳೆ ಆರೋಪಿಯ ಪತ್ತೆಯಾಗಲಿಲ್ಲ ಎನ್ನಲಾಗಿದೆ. ದುಬೈನಿಂದ ಒಂದೂವರೆ ಕೋಟಿ ರೂಪಾಯಿ ಹಣದೊಂದಿಗೆ ಸೇಲ್ಸ್ ಮ್ಯಾನ್ ಭಾರತಕ್ಕೆ ಪರಾರಿಯಾಗಿದ್ದಾನೆ ಎಂಬ ದೂರಿನ ಹಿನ್ನಲೆಯಲ್ಲಿ ಈ ದಾಳಿ ನಡೆದಿದೆ .

ರಾಜಕೀಯ ಪ್ರವೇಶ ಮಾಡಲಿರುವ ಕುಮಾರ ಪುತ್ರ ನಿಖಿಲ್ ..?


Posted on  by ಕೆ.ಎಂ. ಮಹಮ್ಮದ್ ಅನ್ಸಾರ್ ಬೆಳ್ಳಾರೆ (ಅಲ್ಫಾ).

ಬೆಂಗಳೂರು : ಮಾಜಿ ಪ್ರದಾನ ಮಂತ್ರಿ ದೇವೇಗೌಡರ ಮೊಮ್ಮಗ ಮಾಜಿ ಮುಖ್ಯಮಂತ್ರಿ ಕುಮಾರ ಸ್ವಾಮಿ ಅವರ ಪುತ್ರ ನಿಖಿಲ್ ಗೌಡ ರಾಜಕೀಯ ಪ್ರವೇಶಕ್ಕೆ ಸಿದ್ದತೆಗಳು ನಡೆಯುತ್ತಿವೆ ಎಂದು ಜೆ ಡಿ ಎಸ್ ಮೂಲಗಳಿಂದ ತಿಳಿದು ಬಂದಿದೆ. ನಿಖಿಲ್ ಗೌಡ ಸದ್ಯ ತನ್ನ ಒಡೆತನದ “ಕಸ್ತೂರಿ” ವಾಹಿನಿಯನ್ನು ನೋಡಿ ಕೊಳ್ಳುತ್ತಿದ್ದು ಮುಂದಿನ    ದಿನಗಳಲ್ಲಿ ರಾಮನಗರ ದಲ್ಲಿ ತನ್ನ ರಾಜಕೀಯ ಜೀವನವನ್ನ ಆರಂಭಿಸಲಿರುವ ಸುದ್ದಿಗಳು ಕೇಳಿಬರುತ್ತಿವೆ.
ಇದಕ್ಕೆ ಸಾಕ್ಷಿಯಗುವಂತೆ ಕುಮಾರ ಸ್ವಾಮಿ ಹುಟ್ಟು ಹಬ್ಬದ ದಿನ ಕನಕಪುರದಲ್ಲಿ ನಿಖಿಲ್ ಗೆ ಅದ್ದೂರಿ ಸ್ವಾಗತ ನೀಡಲಾಗಿದೆ. ತಂದೆಯ ಜೋತೆ ಆಗಮಿಸಿದ ನಿಖಿಲ್ ಗೌಡರಿಗೆ ಘೋಷಣೆಗಳ ಮೂಲಕ ಸ್ವಾಗತ ಕೋರಿದ ಜನ ನಿಖಿಲ್ ರಾಜಕೀಯ ಪ್ರವೆಶಕ್ಕೊಸ್ಕರ ವೇದಿಕೆ ಸಿದ್ದಪದಿಸುತ್ತಿರುದಕ್ಕೆ ಮುನ್ನುಡಿಯಾಗಿ ಈ ಕಾರ್ಯಕ್ರಮ ನಡೆಸಲಾಗಿತ್ತು ಅನ್ನೋದು ಕೇಳಿ ಬರುತ್ತಿದೆ. ರಾಮ ನಗರದಲ್ಲಿ ಯೋಗೇಶ್ವರ್ ಪ್ರಬಲವಾಗಿ ಬೆಳೆಯುತಿದ್ದು ಅವರ ವಿರುದ್ದ ಸ್ಪರ್ದಿಸಲು ಸೂಕ್ತ ಸ್ಪರ್ಧಿ ಅಗತ್ಯ ಇರುದರಿಂದ ಗೌಡ ರ ಕುಡಿ ಇಲ್ಲಿ ತನ್ನ ಛಾಪನ್ನು ಮೂಡಿಸಿ ಯೋಗೇಶ್ವರ್ ಅವರಿಗೆ ಎದುರಾಳಿಯಾಗ ಬಲ್ಲರು ಎನ್ನೋ ಲೆಕ್ಕಾಚಾರ ಗೌಡರ ತಲೆಯಲ್ಲಿ ಓಡುತ್ತಿದೆ.
ಪುತ್ರನ ರಾಜಕೀಯ ಪ್ರವೇಶದ ಬಗ್ಗೆ ಕುಮಾರ ಸ್ವಾಮಿಯನ್ನು ಪ್ರಶ್ನಿಸಿದರೆ “ನಮ್ಮ ಕುಟುಂಬದ ಎಲ್ಲಾ ಆಗುಹೋಗು ಗಳನ್ನೂ ತಂದೆ ನಿರ್ಧರಿಸಲಿದ್ದಾರೆ. ಅವರು ತನ್ನ ಮೊಮ್ಮಗನ ರಾಜಕೀಯ ಪ್ರವೇಶದ ಬಗ್ಗೆ ಯಾವುದೇ ತೀರ್ಮಾನ ಕೈಗೊಂಡಿಲ್ಲ ” ಎಂದು ಹೇಳಿದ್ದು … ದೇವೇಗೌಡ ರೇ ಮೊಮ್ಮಗನ ರಾಜಕೀಯ ಪ್ರವೇಶವನ್ನು ಅತೀ ಶೀಘ್ರದಲ್ಲಿ ಘೋಷಣೆ ಮಾಡಲಿದ್ದಾರೆ ಅನ್ನೋ ಮಾತುಗಳು ಜೋರಾಗಿ ಕೇಳಿ ಬರುತ್ತಿದೆ.
- ನಿತಿನ್ ರೈ ಕುಕ್ಕುವಳ್ಳಿ (ವರದಿಗಾರರು ವಿಕೆ ನ್ಯೂಸ್)

ಭಾಷೆಯ ಪರಿವೇ ಇಲ್ಲದ ಗಾನ ಕೋಗಿಲೆ ಶ್ರೇಯ ಗೋಶಾಲ್


Posted on  by ವಿಶ್ವ ಕನ್ನಡಿಗ ನ್ಯೂಸ್

 
 ಭಾರತೀಯ ಚಿತ್ರರಂಗದ  ಇತಿಹಾಸದಲ್ಲಿ  ನಾವು  ಅನೇಕ ಮಂದಿ  ಹಿನ್ನೆಲೆ ಗಾಯಕ  ಗಾಯಕಿಯರನ್ನು   ನೋಡಿದ್ದೇವೆ  .  ಆ ಅನೇಕ ಗಾಯಕಿಯರಲ್ಲಿ  ಇತ್ತೀಚಿನ ದಿನಗಳಲ್ಲಿ ಎಲ್ಲರ  ಮನಸ್ಸನ್ನ  ತನ್ನ ಮಧುರ  ಕಂಠ  ದಿಂದ  ಸೆಳೆದ  ಗಾಯಕಿ  ಶ್ರೇಯ ಗೋಶಾಲ್ . ಯಾವುದೇ ಭಾಷೆಯ  ಹಾಡನ್ನು  ಆ ಹಾಡಿನ, ಆ ಭಾಷಾ ಸಾಹಿತ್ಯಕ್ಕೆ  ಯಾವುದೇ  ಕೊರತೆ  ಆಗದ  ರೀತಿಯಲ್ಲಿ  ಹಾಡುವ ಈ ಗಾಯಕಿ  ಯುವಜನರು ಹಾಗೂ  ಎಲ್ಲಾ  ವರ್ಗದ  ಸಂಗೀತ ಪ್ರಿಯರ ಮನಸ್ಸನ್ನ  ಗೆದ್ದಂತಹ  ಮಹಾನ್ ಗಾಯಕಿ .
ಶ್ರೇಯ ಗೋಶಾಲ್  ಹುಟ್ಟಿದ್ದು  ೧೨ ಮಾರ್ಚ್ ೧೯೮೪ ರಂದು   ಭಾರತದ  ಪ್ರೇಕ್ಷಣಿಯ ಸ್ಥಳವಾದ  ರಾಜಸ್ತಾನದಲ್ಲಿ . ಶ್ರೇಯ ಗೋಶಾಲ್  ಬೆಂಗಾಲಿ  ಬ್ರಾಹ್ಮಣ  ಕುಟುಂಬಕ್ಕೆ ಸೇರಿದವಳು  ,ತನ್ನ ವಿದ್ಯಾಭ್ಯಾಸವನ್ನ  ಮುಂಬೈನಲ್ಲಿ  ಮುಗಿಸಿದ ಶ್ರೇಯ  ಓದಿನಲ್ಲೂ ಮುಂದಿದ್ದಂತಹ ಹುಡುಗಿ . ತನ್ನ ಚಿಕ್ಕ ವಯಸ್ಸಿನಲ್ಲೇ ಹಿಂದುಸ್ತಾನಿ  ಸಂಗೀತ  ಕಲಿತಿದ್ದ  ಗೋಶಾಲ್  ಅವರ   ಜೀವನ  ಬದಲಿಸಿದ  ಕಾರ್ಯಕ್ರಮ  ಸ  ರೀ ಗ ಮ   ಕಾರ್ಯಕ್ರಮ, ಜಿ  ಟಿವಿ   ಯಲ್ಲಿ ಪ್ರಸಾರಗೊಂಡ  ಸೋನು ನಿಗಮ್ ನಡೆಸಿ ಕೊಟ್ಟ ಈ  ಕಾರ್ಯಕ್ರಮದಲ್ಲಿ   ಸ್ಪರ್ಧಿಯಾಗಿ  ಪಾಲ್ಗೊಂಡ  ಶ್ರೇಯ  ತನ್ನ ಮಧುರ ಕಂಠದಿಂದ  ಈ ಸ್ಪರ್ಧೆಯನ್ನು ಗೆದ್ದು  ಚಿತ್ರ ರಂಗದ ಪ್ರವೇಶವನ್ನ  ಮಾಡಿದಂತಹವಳು.   ಯಾರ ಬೆಂಬಲ ವಿಲ್ಲದೆ ಸ್ವತಹ  ತನ್ನ  ಸಾಧನೆ  ಯಿಂದಲೇ  ಮೇಲೆ ಬಂದಂತಹ  ಛಲಗಾತಿ .. ಸಂಜಯ್ ಲಿಲಾ ಬನ್ಸಾಲಿ  ಅವರ  ದೇವದಾಸ್  ಚಿತ್ರದ ಹಾಡಿನ ಮೂಲಕ  ಚಿತ್ರರಂಗ ಪ್ರವೇಶಿಸಿದ  ಶ್ರೇಯ  ಆ ನಂತರ ಹಿಂದೆ ತಿರುಗಿ ನೋಡಲೇ ಇಲ್ಲ .
ಕೇವಲ ಹಿಂದಿ  ಅಲ್ಲದೇ   ಕನ್ನಡ , ಮಲಿಯಾಳಂ ,ಗುಜರಾತಿ ,ತಮಿಳ್ ಬೆಂಗಾಲಿ  ಸೇರಿದಂತೆ ಅನೇಕ ತನ್ನದಲ್ಲದ  ಭಾಷೆಯಲ್ಲಿ ಹಾಡಿ ಅನೇಕ  ಪ್ರಶಸ್ತಿಗಳನ್ನ  ಪಡೆದಂತಹ  ಗಾಯಕಿ ಶ್ರೇಯ . ತನ್ನ ಚೊಚ್ಚಲ ಚಿತ್ರವಾದ ದೇವದಾಸ್  ಚಿತ್ರಕ್ಕೆ  ಫಿಲಂ ಫಾರ್ ಪ್ರಶಸ್ತಿ ಪಡೆದ   ಶ್ರೇಯ ಗೋಶಾಲ್   ಅ  ನಂತರ  ಜಿಸ್ಮ್ , ಗುರು ,ಸಿಂಗ್ ಇಸ್ ಕಿಂಗ್  ತಮಿಳ್  ಚಿತ್ರ ಸಿಲ್ಲುನ ಒರು  ಕಾದ್ಹಲ್  ಹಾಗು ಕನ್ನಡದ ಮುಸ್ಸಂಜೆ ಮಾತು  ಚಿತ್ರದ “ಏನೋ ಒಂದತರ  ತರ ” ಚಿತ್ರದ ಹಾಡಿಗೆ  ಫಿಲಂ ಫಾರ್ ಪಡೆದಿದ್ದಾರೆ.. ಕನ್ನಡದ ಭಾವ  ಗಿತೆಗಳನ್ನ  ಹಾಡಿ ಎಲ್ಲರ ಗಮನ  ಸೆಳೆದಿರುವ  ಶ್ರೇಯ  ಲ   ಭಾಷಾ  ಸಾಮರ್ಥ್ಯ  ಎಲ್ಲರನ್ನು ಸೆಳೆಯುತ್ತದೆ  .ಇತ್ತಿಚಿನ  ದಿನಗಳಲ್ಲಿ ಅತಿ ಹೆಚ್ಚು ಸಂಬಾವನೆ  ಪಡೆಯುತ್ತಿರುವ  ಶ್ರೇಯ ಗೋಶಾಲ್ ಯಾವುದೇ ಕಾರ್ಯಕ್ರಮಕ್ಕೆ ಹೋದರೂ   ಅತ್ಯಂತ ಸರಳ ಉಡುಪಿನಲ್ಲಿ ಅಂದರೆ  ಭಾರತೀಯ ಸಂಸ್ಕೃತಿಯ  ಉಡುಪುಗಳನ್ನ ಧರಿಸಿ  ಹೋಗುವು ದು ಶ್ರೇಯ ಅವರ  ವಿಶೇಷತೆ .
ಹಲವು  ಟಿವಿ  ಕಾರ್ಯಕ್ರಮದಲ್ಲಿ  ತೀರ್ಪು ಗಾರರಾಗಿ ಪಾಲ್ಗೊಂಡು  ಹೊಸ ಪ್ರತಿಬೆಗಳ ಹುಡುಕಾಟದಲ್ಲಿ  ಸದಾ ತನ್ನನ್ನ  ತೊಡಗಿಸಿ ಕೊಂಡಿರುವ ಶ್ರೇಯ  ಯುವ ಜನತೆಗೆ ಮಾದರಿಯಾಗಿದ್ದಾಳೆ ..ದೇಶ ವಿದೇಶದಲ್ಲಿ  ಕಾರ್ಯಕ್ರಮಗಳನ್ನ ನೀಡುತ್ತ  ಭಾರತದ ಹಾಡುಗಳನ್ನು  ವಿದೇಶಕ್ಕೂ   ಪಸರಿಸಿದ ಕೀರ್ತಿ  ಶ್ರೇಯ ಅವರಿ ಗೆ ಸೇರುತ್ತದೆ  .ಚಿಕ್ಕ ವಯಸೀನಲ್ಲೇ ಇಷ್ಟೊಂದು ಸಾಧನೆ   ಮಾಡಿರುವ ಶ್ರೆಯ  ಹೆಸರು  ಭಾರತೀಯ ಸಂಗೀತ ಲೋಕದಲ್ಲಿ  ಅಜರಾಮರವಾಗಿ  ರಾರಾಜಿಸೋದರಲ್ಲಿ  ಯಾವುದೇ  ಸಂಶಯವಿಲ್ಲ … ಶ್ರೇಯ ಗೋಶಾಲ್  ಇನ್ನಷ್ಟು  ಸಾಧನೆಯನ್ನ  ಮಾಡಿ  ಇನ್ನಷ್ಟು  ಹಾಡುಗಳನ್ನ  ಸಂಗೀತ ಪ್ರಿಯರಿಗೆ ನೀಡಲಿ ಅನ್ನೋದು ನಮ್ಮೆಲ್ಲರ  ಹಾರೈಕೆ ..
ನಿತಿನ್ ರೈ ಕುಕ್ಕುವಳ್ಳಿ ( ವರದಿಗಾರರು .ವಿಕೆ ನ್ಯೂಸ್)

ಬಂಟ್ವಾಳ : ಮಿತ್ತಬೈಲು ಮಸೀದಿ ಮಿನಾರಕ್ಕೆ ಶಂಕುಸ್ಥಾಪನೆ


Posted on  by ಅಶ್ರಫ್ ಮಂಜ್ರಾಬಾದ್, ಸಕಲೇಶಪುರ

ಬಂಟ್ವಾಳ : ತಾಲೂಕಿನ ಬಿ.ಸಿ.ರೋಡು ಸಮೀಪದ ಮಿತ್ತಬೈಲು ಜುಮಾ ಮಸೀದಿಯಲ್ಲಿ ಸುಮಾರು ೨೦ ಲಕ್ಷ ರೂಪಾಯಿ ವೆಚ್ಚದಲ್ಲಿ ನಿರ್ಮಾಣಗೊಳ್ಳುವ ಮಿನಾರ ಹಾಗೂ ಕುಬ್ಬಾದ ಶಂಕುಸ್ಥಾಪನೆ ಶುಕ್ರವಾರ ನೆರವೇರಿತು. ಶೈಖುನಾ ಕೆ.ಪಿ. ಅಬ್ದುಲ್ ಜಬ್ಬಾರ್ ಮುಸ್ಲಿಯಾರ್ ಶಂಕುಸ್ಥಾಪನೆ ನೆರವೇರಿಸಿದರು. ಮೌಲಾನಾ ಅಬ್ದುಲ್ ರಝಾಕ್ ಮಲೇಶ್ಯಾ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಮಸೀದಿ ಖತೀಬ್ ಖಲೀಲುರ್ರಹ್ಮಾನ್ ದಾರಿಮಿ, ಮುದರ್ರಿಸ್ ಹಮೀದ್ ದಾರಿಮಿ, ಮಸೀದಿ ಅಧ್ಯಕ್ಷ ಎಸ್.ಎಂ. ಮುಹಮ್ಮದಾಲಿ ಶಾಂತಿಅಂಗಡಿ, ಕಾರ್ಯದರ್ಶಿ ಎಸ್. ಹಬೀಬುಲ್ಲಾ ಮೊದಲಾದವರು ಉಪಸ್ಥಿತರಿದ್ದರು.
- ಪಿ.ಎಂ.ಎ ಪಾಣೆಮಂಗಳೂರು ( ವರದಿಗಾರರು .ವಿಕೆ ನ್ಯೂಸ್)

Celebrating Ramadan at the White House

Thursday 22 December 2011

Why This Kolaveri Di MANGALOREAN WORLD

ಭಾರತ ರತ್ನ ಪ್ರಶಸ್ತಿ ಸಚಿನ್ ಗೆ ನೀಡಬಾರದು – ಮಹಮ್ಮದ್ ಅಝರುದ್ದೀನ್


Posted on  by ಕೆ.ಎಂ. ಮಹಮ್ಮದ್ ಅನ್ಸಾರ್ ಬೆಳ್ಳಾರೆ (ಅಲ್ಫಾ).

ಹೊಸದಿಲ್ಲಿ; ಭಾರತ ರತ್ನ ಪ್ರಶಸ್ತಿಯನ್ನು ಸ್ವೀಕರಿಸಲು  ಹಾಕಿ ದಂತ ಕಥೆ  ಧ್ಯಾನ್ ಚಂದ್  ಹಾಗು ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ಇಬ್ಬರು ಅರ್ಹರು. ಆದರೆ ಸಚಿರ್ ಈ ಪ್ರಶಸ್ತಿಯನ್ನು ಸ್ವೀಕರಿಸುವ  ಮೊದಲು ಧ್ಯಾನ್ ಚಂದ್ ಸ್ವೀಕರಿಸಿರಬೇಕು. ಆದರಿಂದ ಸಚಿನ್ ಗೆ ಈ ಪ್ರಶಸ್ತಿಯನ್ನು ದ್ಯಾನ್ ಚಂದ್ ಸ್ವೀಕರಿಸಿದ ನಂತರ ನೀಡುವುದು ಒಳಿತು,  ಎಂದು ಭಾರತ ಕ್ರಿಕೆಟ್ ತಂಡ ದ ಮಾಜಿ ಕಪ್ತಾನ ಹೊಸದಿಲ್ಲಿ ನಡೆದ ಸಭೆಯಲ್ಲಿ  ಸಮೀತಿ ಗೆ ಸಲಹೆ ನೀಡಿದರು.

ಬಂಟ್ವಾಳ : ಪರ್ಲಿಯ ವೈದ್ಯರ ಮನೆಗೆ ಕನ್ನ ಹಾಕಿದ ಕಳ್ಳರು


Posted on  by ಅಬ್ದುಲ್ ಹಮೀದ್ ಸಿ.ಹೆಚ್, ಕಾವು, ಪುತ್ತೂರು.

ಬಂಟ್ವಾಳ : ತಾಲೂಕಿನ ಪರ್ಲಿಯ ಸಮೀಪದ ವೈದ್ಯರ ಮನೆಯೊಂದಕ್ಕೆ ಹಾಡುಹಗಲೇ ನುಗ್ಗಿದ ಕಳ್ಳರು ಚಿನ್ನಾಭರಣ ದೋಚಿ ಪರಾರಿಯಾಗಿದ್ದಾರೆ.
ಮಂಗಳೂರಿನ ವೆನ್ಲಾಕ್ ಸರಕಾರಿ ಆಸ್ಪತ್ರೆಯಲ್ಲಿ ವೈದ್ಯರಾಗಿರುವ ಡಾ. ಸಿಕಂದರ್ ಪಾಷಾ ಅವರ ಪರ್ಲಿಯದಲ್ಲಿರುವ ಮನೆಯಲ್ಲಿ ಈ ಕಳವು ಕೃತ್ಯ ನಡೆದಿದೆ. ಎಂದಿನಂತೆ ತಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸಿ ಸಿಕಂದರ್ ಪಾಷಾ ದಂಪತಿ ತಮ್ಮ ಕೆಲಸಕ್ಕಾಗಿ ಮಂಗಳೂರಿಗೆ ತೆರಳಿದ್ದ ವೇಳೆಯಲ್ಲಿ ಈ ಘಟನೆ ಸಂಭವಿಸಿದೆ. ಸಂಜೆಯ ವೇಳೆ ಶಾಲೆ ಬಿಟ್ಟು ಮಕ್ಕಳು ಮನೆಗೆ ಬಂದ ಸಂದರ್ಭ ಮನೆ ಕಿಟಕಿ ಬಾಗಿಲು ತರೆದಿದ್ದು, ತಕ್ಷಣ ಮಕ್ಕಳು ಹೆತ್ತವರಿಗೆ ವಿಷಯ ತಿಳಿಸಿದ್ದಾರೆ. ಮಕ್ಕಳ ಮಾಹಿತಿಯಂತೆ ಡಾ. ಸಿಕಂದರ್ ಪಾಷಾ ಮನೆಗೆ ಬಂದಾಗ ಮನೆಯ ಮುಂಭಾಗದ ಕಿಟಕಿ ಬಾಗಲು ತೆರೆದಿದ್ದು, ಮುಖ್ಯ ಬಾಗಿಲ ಚಿಲಕ ಭದ್ರವಾಗಿತ್ತು. ಮನೆಯ ಹಿಂಭಾಗದ ಬಾಗಿಲು ತೆರೆದಿದ್ದು, ಸಾಮಾಗ್ರಿಗಳೆಲ್ಲವೂ ಚೆಲ್ಲಾಪಿಲ್ಲಿಯಾಗಿದ್ದವು. ಹಿಂದಿನಿಂದ ಒಳ ನುಗ್ಗಿದ ಕಳ್ಳರು ಮನೆಯೊಳಗಿನ ಕಪಾಟು ಜಾಲಾಡಿ ಅದರಲ್ಲಿದ್ದ ಹತ್ತು ಗ್ರಾಂ ತೂಕದ ಕರಿಮಣಿ ಸೇರಿದಂತೆ ಒಟ್ಟು ಮೂವತ್ತು ಗ್ರಾಂ ಚಿನ್ನಾಭರಣವನ್ನು ದೋಚಿದ್ದಾರೆ. ಕಳವಾದ ಚಿನ್ನಾಭರಣಗಳ ಒಟ್ಟು ಮೌಲ್ಯ ೪೮ ಸಾವಿರ ರೂಪಾಯಿಗಳೆಂದು ಅಂದಾಜಿಸಲಾಗಿದೆ.
ಹಾಡುಹಗಲೇ ಕಳವು ನಡೆದಿದ್ದರೂ ಘಟನೆಯ ಬಗ್ಗೆ ಸ್ಥಳೀಯರಿಗೆ ಯಾವುದೇ ರೀತಿಯ ಸಂಶಯ ಮೂಡಿ ಬಂದಿಲ್ಲ. ಈ ಬಗ್ಗೆ ಶಂಶಯಿತರನ್ನು ವಶಕ್ಕೆ ತೆಗದುಕೊಂಡ ಬಂಟ್ವಾಳ ನಗರ ಪೊಲೀಸರು ತನಿಖೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.
ಘಟನಾ ಸ್ಥಳಕ್ಕೆ ಜಿಲ್ಲಾ ಎಸ್.ಪಿ. ಲಾಬೂರಾಂ ಭೇಟಿ ನೀಡಿದ್ದು, ತನಿಖೆಗೆ ಮಾರ್ಗದರ್ಶನ ನೀಡಿದ್ದಾರೆ. ಡಿ.ವೈ.ಎಸ್.ಪಿ., ಬಂಟ್ವಾಳ ವೃತ್ತ ನಿರೀಕ್ಷಕ ಅನಿಲ್ ಎಸ್. ಕುಲಕರ್ಣಿ, ಬಂಟ್ವಾಳ ನಗರ ಠಾಣಾಧಿಕಾರಿ ಶೇಖರ್ ಸ್ಥಳಕ್ಕೆ ಭೇಟಿ ನೀಡಿದ್ದು, ಶ್ವಾನದಳ, ಬೆರಳಚ್ಚು ತಜ್ಞರನ್ನು ಘಟನಾ ಸ್ಥಳಕ್ಕೆ ಕರೆಸಲಾಗಿದೆ. ಬಂಟ್ವಾಳ ನಗರ ಠಾಣಾ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಮುಂದುವರಿಸಿದ್ದಾರೆ.
- ಪಿ.ಎಂ.ಎ. ಪಾಣೆಮಂಗಳೂರು. (ವರದಿಗಾರರು, ವಿ ಕೆ ನ್ಯೂಸ್)

FAN OF THE WEEK MANGALOREANSFORU IS Badr Km Soorinje CONGRATULATION DEAR


MANGALOREANSFORU fan of the week is...



Badr Km Soorinje

Congratulations!
How you can get picked as the next fan of the week:
  • Comment on our posts
  • Like a recent wall post
  • Post interesting stuff on our page's wall
The more you interact with our page, the better chances you'll have to get picked!

Wednesday 21 December 2011

ಅಲಂಕಾರ ಪ್ರಿಯ




ಏನು ಹೇಳಲಿ.. ಗೆಳತಿ
ಹೇಗೆ ಬಣ್ಣಿಸಲಿ ನನ್ನೊಡತಿ..

ಹಸಿ ಹೆರಳನು ಆರಿಸುತ ನಿಂತೆ
ನೀ ಎಳೆ ಬಿಸಿಲಲಿ..
ಅಲಂಕಾರ ಪ್ರಿಯೆ ನೀನು,
ಕನ್ನಡಿ ಮುಂದೆ ನಿಲ್ಲಲು ಒಳಗೆ ಬಂದೆ.
ನಿನ್ನೊಲುಮೆಯ ತುಂಟ ನಾನು,
ನಿನ್ನ ಅಲಂಕಾರ ನೋಡಲು ಹಿಂದೆಯೇ ಬಂದೆ.

ನೀನಾಗಿದ್ದೆ ಬಾದಾಮಿ ಬಣ್ಣದ,
ನೀಲಿ ಅಂಚಿನ ಸೀರೆಯ ನೀರೆ.
ಅದ ಕಂಡೆ ಇರಬೇಕು .. ಮನದಲಿ
ಹರಿದಿದೆ ಪ್ರೀತಿ ಭಾವದ ರಸಧಾರೆ.
ನಿನ್ನ ಗುಲಾಬಿಯಂತ ತುಟಿಗಳನು
ಇನ್ನೂ ಕೆಂಪಾಗಿಸಿದೆ ಲಿಪ್ ಸ್ಟಿಕ್ ಹಚ್ಚಿ.
ನನ್ನ ಮನ ನಲಿದಿತ್ತು.. ಖುಷಿ ಹೆಚ್ಚಿ.

ಮ್ಯಾಚಿಂಗ್ ನೆಪದಲ್ಲಿ ಉಗುರುಗಳಿಗೂ
ನೀಲಿ ಬಣ್ಣದ ನೈಲ್ ಪಾಲಿಶ್ ತೀಡಿ.
ಸೂಜಿಗಲ್ಲಿನಂತೆ ಸೆಳೆದಿದೆ ನನ್ನನು ನಿನ್ನ
ಕಣ್ಣಂಚಲಿ ತೀಡಿದ ಕಾಡಿಗೆಯ ಮೋಡಿ.
ದೇವರು ಹೆಣ್ಣಿಗೆಂದೆ ಸೌಂದರ್ಯ ಕೊಟ್ಟ.
ಗಂಡಿಗೆ ಸೌಂದರ್ಯ ಸವಿವ ರಸಿಕತೆಯ ಕೊಟ್ಟ.

ನಾ ಅವಳ ಅಂದಕೆ ಸೋತು
ಕೆನ್ನೆಗೊಂದು ಮುತ್ತು ಕೊಟ್ಟು ಬಿಟ್ಟೆ.
ಮೇಕಪ್ ಹಾಳಾಯಿತೆಂದು ಅವಳ ಚಂಡಿ
ಅವತಾರಕ್ಕೆ ಹೆದರಿ ಅಲ್ಲಿಂದ ಹೊರಟುಬಿಟ್ಟೆ.

WISH U HAPPY ANNIVERSARY


"Eleven Hints for Life"


"Eleven Hints for Life"

1. It hurts to love someone and not be loved in return.
But what is more painful is to love someone and never
find the courage to let that person know how you feel.

2. A sad thing in life is when you meet someone who
means a lot to you, only to find out in the end that it was
never meant to be and you just have to let go.

3. The best kind of friend is the kind you can sit on a
porch swing with, never say a word, and then walk away
feeling like it was the best conversation you've ever had.

4. It's true that we don't know what we've got until we lose
it, but it's also true that we don't know what we've been
missing until it arrives.

5. It takes only a minute to get a crush on someone, an
hour to like someone, and a day to love someone-but it
takes a lifetime to forget someone.

6. Don't go for looks, they can deceive. Don't go for wealth,
even that fades away. Go for someone who makes you
smile because it takes only a smile to make a dark day
seem bright.

7. Dream what you want to dream, go where you want to go,
be what you want to be. Because you have only one life and
one chance to do all the things you want to do.

8. Always put yourself in the other's shoes. If you feel that it
hurts you, it probably hurts the person too.

9. A careless word may kindle strife. A cruel word may wreck
a life. A timely word may level stress. But a loving word may
heal and bless.

10. The happiest of people don't necessarily have the best
of everything they just make the most of everything that comes
along their way.

11. Love begins with a smile, grows with a kiss, ends with
a tear. When you were born, you were crying and everyone
around you was smiling. Live your life so that when you die,
you're the one smiling and everyone around you is crying.

Monday 19 December 2011

ಧಿಡೀರ್ ಪ್ರತ್ಯಕ್ಷ ಗೊಂಡ ವೀಣಾ ಮಲಿಕ್……!!


Posted on  by ಕೆ.ಎಂ. ಮಹಮ್ಮದ್ ಅನ್ಸಾರ್ ಬೆಳ್ಳಾರೆ (ಅಲ್ಫಾ).

ಪಾಕಿಸ್ತಾನ ಮೂಲದ ಬಾಲಿವುಡ್ ನಟಿ ಹಾಗು ರೂಪದರ್ಶಿ ವೀಣಾ ಮಲಿಕ್ ಮುಂಬೈನಿಂದ ಕಾಣೆಯಾಗಿದ್ದಾರೆ, ಅನ್ನೋ ಸುದ್ದಿ ಕಾಡ್ಗಿಚ್ಚಿನಂತೆ ಹರಡಿದ ಸಂಧರ್ಭದಲ್ಲೇ  ಮುಂಬೈನ ಮಾದ್ಯಮ ವರದಿಯೊಂದು ವೀಣಾ ಮಲಿಕ್ ಮುಂಬೈನಲ್ಲೇ ಇದ್ದಾರೆ ಅನ್ನೋ ವರದಿಯನ್ನು ನೀಡಿದೆ. ತನ್ನ ಮೂಲ ಹೆಸರಾದ ಝಾಹಿದ ಹೆಸರಿನಲ್ಲಿ ವೀಣಾ ಮುಂಬೈ ನ ಪ್ರತಿಷ್ಟಿತ ಹೋಟೆಲ್ ಒಂದರಲ್ಲಿ ರೂಂ ಪಡೆದುಕೊಂಡಿರುದನ್ನು ಧೃಡ ಪಡಿಸಿದೆ.
ಫ್ಯಾಶನ್ ಮ್ಯಾಗಝಿನ  ಫೋಟೋ ಶೂಟ್ ಗಾಗಿ ೪೫ ದಿನಗಳ ವೀಸಾ ಪಡೆದಿರುವ ವೀಣಾ ೨ ದಿನದಲ್ಲಿ ತನ್ನ ವೀಸಾ ಕೊನೆಗೊಳ್ಳಲಿದೆ ಎಂದು ತಿಳಿಯುತ್ತಿದ್ದಂತೆ ತನ್ನ ಗೆಳೆಯ ಬಾಲಿವುಡ್ ನಟ ಅಶ್ಮಿತ್ ಪಠೇಲ ಜೊತೆ ವಾಘ ಗಡಿಯ ವಲಸೆ ಅಧಿಕಾರಿ ಗಳನ್ನ ಭೇಟಿ ಮಾಡಿ ಬಂದಿದ್ದಾಳೆ. ವೀಣಾ ತನ್ನ ಮಾನೇಜರ್ ಜೊತೆ ಏನೂ ಮಾಹಿತಿ  ಹೇಳದೆ ತನ್ನ ಗೆಳೆಯ ಅಶ್ಮಿತ್ ಜೊತೆ ಹೋಗಿದ್ದು . ಇದನ್ನು ಅರಿಯದ  ವೀಣಾ ಮ್ಯಾನೇಜರ್ ಮುಂಬೈನ ಪೊಲೀಸರಿಗೆ ವೀಣಾ ಕನ್ಮರೆಯಾಗಿದ್ದಾಳೆ ಅನ್ನೋ ದೂರು ನೀಡಿದ್ದರು.ಇತ್ತೀಚಿಗೆ ಪತ್ರಿಕೆಯೊಂದರ ಮುಖ ಪುಟಕ್ಕೆ ನಗ್ನ ಭಂಗಿಯ ಫೂಸ್ ನೀಡಿದ್ದು ಪಾಕಿಸ್ತಾನ  ತುಂಬಾ ವಿವಾದಾಕ್ಕೆ ಎಡೆಮಾಡಿ ಕೊಟ್ಟಿತ್ತು.
-ನಿತಿನ್ ರೈ ಕುಕ್ಕುವಳ್ಳಿ (ವರದಿಗಾರರು ವಿಕೆ ನ್ಯೂಸ್ )

ನ್ಯೂ ಇಯರ್ ಪಾರ್ಟಿಗಾಗಿ ಹಾಟ್ ಬೆಡಗಿ ಮಲ್ಲಿಗೆ ಹರಿಯುತ್ತಿದೆ ಹಣದ ಹೊಳೆ


Posted on  by ವಿಶ್ವ ಕನ್ನಡಿಗ ನ್ಯೂಸ್

ಮುಂಬೈ : ಹೊಸ ವರ್ಷದ ಸಿದ್ಧತೆಗಾಗಿ ದೇಶಾದ್ಯಂತ ಮಹಾನಗರಗಳಲ್ಲಿ ಭರ್ಜರಿ ಸಿದ್ಧತೆಗಳು ಆರಂಭಗೊಂಡಿವೆ . ಸಪ್ತತಾರಾ ,ಪಂಚತಾರಾ ಹೋಟೆಲುಗಳು ಐಶಾರಾಮಿ ಕ್ಲಬ್ ಗಳು ಈಗಾಗಲೇ ಹೊಸ ವರ್ಷದ ಪಾರ್ಟಿಗಾಗಿ ಹಲವು ನಟಿಯರನ್ನು ಬುಕ್ ಮಾಡಿವೆ. ಆದರೆ ಕತ್ರಿನಾ ಕೈಫ್ , ಪ್ರಿಯಾಂಕಾ ಚೋಪ್ರಾ , ಸೋನಾಕ್ಷಿ ಸಿನ್ಹಾ ಸೇರಿದಂತೆ ಹಲವು ನಟಿಯರು ಈ ವರ್ಷದ ಪಾರ್ಟಿಯಲ್ಲಿ ಪಾಲ್ಗೊಳ್ಳಲು ನಿರಾಕರಿಸಿರುವುದರ ಭರ್ಜರಿ ಲಾಭ ಬಾಲಿವುಡ್ ಹಾಟ್ ಬೆಡಗಿ ಮಲ್ಲಿಕಾ ಶೆರಾವತ್ ಪಾಲಿಗಾಗಿದೆ . ತಮ್ಮ ಕಾರ್ಯಕ್ರಮಕ್ಕೆ ಮಲ್ಲಿಕಾ ಭರ್ಜರಿ ಚಾರ್ಜ್ ಅನ್ನು ಮಾಡಿದ್ದಾರೆ . ಮಲ್ಲಿಕಾ ಶೆರಾವತ್ ಈ ಬಾರಿಯ ಪಾರ್ಟಿಯಲ್ಲಿ ಪಾಲ್ಗೊಳ್ಳಲು ಮಾಡಿರುವ ಚಾರ್ಜ್ ಪ್ರಕಾರ  ಪ್ರತೀ ಪ್ರತೀ ನಿಮಿಷಕ್ಕೆ ಆಕೆಗೆ ನಾಲ್ಕು ಲಕ್ಷ ರೂಪಾಯಿ ಸಿಗಲಿದೆ ಎನ್ನಲಾಗಿದೆ.
ಚಾಲಾಕಿ ಮಲ್ಲಿಕಾ ಹಿರಿಯ ನಟಿಯರ ಹೊಸವರ್ಷದ ಪಾರ್ಟಿಯಲ್ಲಿ ಪಾಲ್ಗೊಳ್ಳುವುದಿಲ್ಲ ಎನ್ನುವ ನಿರ್ಧಾರದ ಭರಪೂರ ಲಾಭ ಪಡೆದಿದ್ದು ಈ ಕಾರಕ್ಕಾಗಿಯೇ ಇದೀಗ ವಿದೇಶದಿಂದ ಸ್ವದೇಶಕ್ಕೆ ಬಂದಿದ್ದಾಳೆ. ತಮ್ಮ ಸಂಭಾವನೆಯ ಶೇಕಡಾ ಎಪ್ಪತ್ತೈದು ರಷ್ಟು ಹಣವನ್ನು ಮಲ್ಲಿಕಾ ಈಗಾಗಲೇ ಅಡ್ವಾನ್ಸ್ ಆಗಿ ಪಡೆದಿದ್ದಾಳೆ ಎಂದು ಆಕೆಯ ಆಪ್ತ ಮೂಲಗಳು ಹೇಳುತ್ತಿವೆ. ಟಯೂಲಿಪ್ ಸ್ಟಾರ್ ಹೋಟೆಲಿನಲ್ಲಿ ಮಲ್ಲಿಕಾ ನ್ಯೂ ಇಯರ್ ಪಾರ್ಟಿ ಏರ್ಪಾಡಾಗಿದ್ದರೆ ಹೋಟೆಲ್ ಸಹಾರಾ ಸ್ಟಾರ್ ನಲ್ಲಿ ಜಾಕೆಲಿನ್ ಫೆರ್ನಾಂಡಿಸ್ ನೇಹಾ ದೂಪಿಯಾ , ಕಂಟ್ರಿ ಕ್ಲಬ್ ನಲ್ಲಿ ವಿವೇಕ್ ಒಬೆರಾಯ್ , ಸೋಫಿ ಚೌಧರಿ , ತನುಶ್ರೀ ದತ್ತಾ , ಸಯಾಲಿ ಭಗತ್ ಪಾರ್ಟಿಗಳು ಏರ್ಪಾಡಾಗಿವೆ . ರಣವೀರ್ ಸಿಂಗ್ ಮತ್ತು ಡಯಾನಾ ಹೇಡನ್ ಅಂಬಿ ವ್ಯಾಲಿಯಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ .

ಗಂಡ ಯುಎಇ ಯಿಂದ ಬಂದವನೇ ಹೆಂಡತಿಯ ಕೈ ಬೆರಳುಗಳನ್ನು ಕತ್ತರಿಸಿದ !


Posted on  by ಅಶ್ರಫ್ ಮಂಜ್ರಾಬಾದ್, ಸಕಲೇಶಪುರ

ಢಾಕಾ : ಯುಎಇ ಯಲ್ಲಿ ಕೆಲಸ ನಿರ್ವಹಿಸುತ್ತಿದ್ದ ಬಾಂಗ್ಲಾದೇಶಿ ಯುವಕನೊಬ್ಬ ತನ್ನೂರಿಗೆ ಬಂದವನೇ ಮನೆಯಲ್ಲಿದ್ದ ತನ್ನ ಪತ್ನಿಯ ಕೈಬೆರಳುಗಳನ್ನು ಕತ್ತರಿಸಿ ಹಾಕಿದ ಹೃದಯ ವಿದ್ರಾವಕ ಘಟನೆ ನಡೆದಿದೆ. ಇಷ್ಟಕ್ಕೆಲ್ಲಾ ಕಾರಣ ಆಕೆ ಆತನ ಅನುಮತಿ ನಿರಾಕರಿಸಿ ವಿದ್ಯಾಭ್ಯಾಸ ಕಲಿಯಲು ಕಾಲೇಜಿಗೆ ಹೋದದ್ದು ! ರಫೀಕ್ ಇಸ್ಲಾಂ ಎಂಬ ಈ ಪಾಪಿ ಗಂಡ ಯುಎಇ ಯಲ್ಲಿ ಕೆಲಸ ನಿರ್ವಹಿಸುತ್ತಿದ್ದು ಕೇವಲ ಎಂಟನೇ ತರಗತಿ ವರೆಗೆ ಓದಿದ್ದ . ಈತನ ಪತ್ನಿ ಹವ್ವಾ ಅಖ್ತರ್ ಕಾಲೇಜು ವಿದ್ಯಾಭ್ಯಾಸ ಮಾಡಿದ್ದು ತನ್ನ ಡಿಗ್ರಿ ಪೂರ್ತಿಗೊಳಿಸಲು ಬಯಸಿದ್ದಳು . ಆದರೆ ಈತ ಅದಕ್ಕೆ ಅನುಮತಿ ನೀಡಿರಲಿಲ್ಲ. ಈತನ ಅನುಮತಿ ಧಿಕ್ಕರಿಸಿ ಆಕೆ ಕಾಲೇಜಿಗೆ ಹೋಗಲು ಪ್ರಾರಂಭಿಸಿದಳು . ಇದರಿಂದ ಆಕ್ರೋಶಗೊಂಡ ಈತ ಊರಿಗೆ ಬಂದವನೇ ಆಕೆಯ ಕೈಗಳನ್ನು ಕಟ್ಟಿ ಹಾಕಿ ಬಾಯಿಗೆ ಬಟ್ಟೆ ತುರುಕಿ ಆಕೆಯ ಬಲಗೈಯ ಐದು ಬೆರಳುಗಳನ್ನು ಕತ್ತರಿಸಿದ್ದಾನೆ.
ಇದೀಗ ಢಾಕಾ ಪೊಲೀಸರು ಈ ಪಾತಕಿ ಗಂಡನನ್ನು ಬಂಧಿಸಿದ್ದು ವಿಚಾರಣೆ ಆರಂಭಿಸಿದ್ದಾರೆ. ತನಗಿಂತ ತನ್ನ ಹೆಂಡತಿ ಹೆಚ್ಚು ಕಲಿಯುವುದರ ಬಗ್ಗೆ ತನಗಿದ್ದ ಅಸೂಯೆಯ ಕಾರಣ ತಾನು ಕೃತ್ಯ ಮಾಡಿದ್ದಾಗಿ ಆತ ಹೇಳಿರುವುದಾಗಿ ಢಾಕಾ ಪೋಲಿಸ್ ಅಧಿಕಾರಿ ಮೊಹಮ್ಮದ್ ಸಲಾಹುದ್ದೀನ್ ಹೇಳಿದ್ದಾರೆ. ಈ ಕೃತ್ಯಕ್ಕೆ ಈತನಿಗೆ ಜೀವಾವಧಿ ಶಿಕ್ಷೆ ಆಗುವ ಸಾಧ್ಯತೆ ಇದೆ ಎಂದೂ ಅವರು ಹೇಳಿದ್ದಾರೆ . ಇದೀಗ ಹುಡುಗಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದು ತನ್ನ ತವರು ಮನೆಗೆ ಹೋಗಿದ್ದಾಳೆ . ತನ್ನ ಬಲಗೈ ಕತ್ತರಿಸಿದ್ದರೂ ನಾನು ನನ್ನ ಇನ್ನೊಂದು ಕೈ ಬಳಸಿ ನನ್ನ ಪದವಿ ಪೂರ್ತಿ ಗೊಳಿಸುತ್ತೇನೆ  ಎಂದು ಆಕೆ ಹೇಳಿಕೊಂಡಿದ್ದಾಳೆ

Sunday 18 December 2011

WELCOME MANGALOREANSFORU WEBSITE

ENJOY WITH MANGALORE PEOPLE, WATCH LIVE CRICKET, AND WATCH SUVARNA NEWS KANNADA 24X7

MANGALOREANSFORU

Saturday 17 December 2011

Will Google+ Replace Facebook?


I frequently get questions like these: “Is Google+ going to kill facebook like Facebook killed MySpace?”
The answer is “no” but not because Google+ isn’t going to be hugely successful.
Services, technologies and companies never kill or replace each other. Some companies just don’t keep up with customer demand, stop innovating and then might fade away. Television never really replaced radio because radio had its uses and was a solid technology. The Internet never replaced television for the same reasons.
Facebook didn’t just replace MySpace because it was better but mostly because MySpace was much worse, and didn’t seem to do much about it. The only one to blame for the decline of MySpace is MySpace itself. You don’t lose 300 million members without making a few enemies.
There is enough room for several social networks. Facebook, LinkedIn and Google can coexist just fine just like two bars in the same street don’t have to kill or replace each other to survive.
Will Google+replace Facebook?

No, but maybe Facebook will fall on its sword and give Google+ a chance to take its place.

Facebook NOT shutting down March 15


(Mashable-- There's a silly rumor exploding on the Internet this weekend, alleging that Facebook is shutting down on March 15 because CEO Mark Zuckerberg "wants his old life back," and desires to "put an end to all the madness."
We have official confirmation from Facebook Director of Corporate Communications Larry Yu that the rumor is false.
We asked him via e-mail if Facebook was shutting down on March 15, to which he responded, "The answer is no, so please help us put an end to this silliness."
He added, "We didn't get the memo about shutting down and there's lots to do, so we'll just keep cranking away like always."
Let's think about this for a minute. Would Facebook decide to shut down the company just a few days after announcing a round of funding, consisting of $450 million from Goldman Sachs and $50 million from Russian investment firm Digital Sky Technologies, on a valuation of $50 billion?
The spurious report was started by a site to which we refuse to link, known for its reports of impending attacks of alien spaceships and false reports of a Michelle Obama pregnancy.
The fact that this absurd hoax spread so efficiently makes us wonder: Will people believe anything?

ಆಸ್ಟ್ರೇಲಿಯ ಮಾಜಿ ನಾಯಕನ ಕ್ರಿಕೆಟ್ ಜೀವನ ತುಗೊಯ್ಯಲೆಯಲ್ಲಿ..?


Posted on  by ಕೆ.ಎಂ. ಮಹಮ್ಮದ್ ಅನ್ಸಾರ್ ಬೆಳ್ಳಾರೆ (ಅಲ್ಫಾ).

ತನಗೆ ಯಾವೊಬ್ಬ ಆಟಗಾರನು ಮುಖ್ಯ ಅಲ್ಲ. ಒಬ್ಬ ಆಟಗಾರ ನನ್ನ ತಂಡ ಅವಲಂಬಿಸಿಲ್ಲ ಅನ್ನೋದನ್ನ ಅದೆಷ್ಟೋ ಬಾರಿ ಆಸ್ಟ್ರೇಲಿಯ ಕ್ರಿಕೆಟ್ ಮಂಡಳಿ ಸಾರಿ ಹೇಳಿದೆ. ವಿಶ್ವ ಕಪ್ ಗೆದ್ದ ನಾಯಕ ಸ್ಟಿವ್ ವೋ ಅವರನ್ನೇ ಏಕ ಏಕಿ ತಂಡದಿಂದ ಹೊರ ಹಾಕಿದ್ದೆ ಇದಕ್ಕೊಂದು ದೊಡ್ಡ ಸಾಕ್ಷಿ .!!
 ಹಾಗೆ ಆಸ್ಟ್ರೇಲಿಯ ಕಂಡ ಅತ್ಯುತ್ತಮ ಆಟಗಾರರಿಗೂ ಇದೇ ದಾರಿಯನ್ನು ಆಸ್ಟ್ರೇಲಿಯ ಕ್ರಿಕೆಟ್ ಮಂಡಳಿ ತೋರಿಸಿದೆ. ಈಗ ಆಸ್ಟ್ರೇಲಿಯ ಮಾಜಿ ನಾಯಕ ವಿಶ್ವ ಕಪ್ ಗೆದ್ದ ನಾಯಕ ರಿಕ್ಕಿ ಪಾಂಟಿಂಗ್ ಕೂಡ ತಂಡದಿಂದ ಗೇಟ್ ಪಾಸ್ ಆಗಲಿದ್ದಾರೆ ಅನ್ನೂ ಸುದ್ದಿಗಳು ಕೇಳಿಬರುತ್ತಿವೆ. ಭಾರತ ವಿರುದ್ದ ಸರಣಿ ಗೆ ಪಾಂಟಿಂಗ್ ನೇಮಕ ಗೊಂಡಿದ್ದರು ಇದು ಮಂಡಳಿ ನಿರ್ಧಾರವಲ್ಲ , ಆಸ್ಟ್ರೇಲಿಯ ತರಬೇತುದಾರ ಮಿಕ್ಕಿ ಅರ್ಥರ್ ಅವರ ನಿರ್ಧಾರ, ಎಂದು ಆಸ್ಟ್ರೇಲಿಯ ಪತ್ರಿಕೆಗಳು ವರದಿ ಮಾಡಿವೆ.
 ಪಾಂಟಿಂಗ್ ವಿರುದ್ದ ಆಸ್ಟ್ರೇಲಿಯದ ಅನೇಕ ಮಾಜಿ ನಾಯಕರು ದ್ವನಿ ಎತ್ತಲು ಪ್ರಾರಂಬಿಸಿದ್ದಾರೆ. “ಪಾಂಟಿಂಗ್ ಉತ್ತಮ ಆಟಗಾರ ಆದರೆ ಇತ್ತಿಚಿನ ದಿನಗಳಲ್ಲಿ ಅವರ ಬ್ಯಾಟ್ ಚಲಿಸುತ್ತಿಲ್ಲ ತಾವಾಗಿಯೇ ನಿವೃತ್ತಿ ಗೊಶಿಸಿದರೆ ಉತ್ತಮ ಎನ್ನೋ ಮಾತುಗಳನ್ನು ಶೇನ್ ವಾರ್ನ್ ಅವರು ಹೇಳಿದ್ದು  ಪಾಂಟಿಂಗ್ ಕ್ರಿಕೆಟ್ ಆಸ್ಟ್ರೇಲಿಯ ಕ್ಕೆ ಬೇಡವಾಗಿದ್ದಾರೆ ಎಂಬುವುದಕ್ಕೆ ಈ ಮಾತೇ ಸಾಕ್ಷಿ.
ತಂಡ ಪ್ರವೇಶಿಸಲು ಯುವ ಆಟಗಾರರ ದಂಡೆ ಕಾಯುತ್ತಿರುವ ಈ ಸಂದರ್ಭದಲ್ಲಿ ಪಾಂಟಿಂಗ್ ತಂಡದಲ್ಲಿ ಗಟ್ಟಿಯಾಗಿ ಬೇರುರಿದ್ದು ತಂಡಕ್ಕೆ ಸಂಕಟವಾಗಿ ಪರಿಣಮಿಸಿದೆ ಎಂದು ಮಾಜಿ ನಾಯಕ ಅಲನ್ ಬಾರ್ಡರ್ ಹೇಳಿದ್ದಾರೆ .. ಇದನೆಲ್ಲ ನೋಡುವಾಗ ಪಾಂಟಿಂಗ್ ಭಾರತ ವಿರುದ್ದ ಟೆಸ್ಟ್ ಪಂದ್ಯದಲ್ಲಿ ಉತ್ತಮ ಪ್ರದರ್ಶನ ನೀಡದಿದ್ದರೆ ಕ್ರಿಕೆಟ್ ಆಸ್ಟ್ರೇಲಿಯ ಪಾಂಟಿಂಗ್ ಗೆ ಮನೆಯ ದಾರಿ ತೋರಿಸುದು ನಿಶ್ಚಿತ ವಾಗಿದೆ.
- ನಿತಿನ್ ರೈ ಕುಕ್ಕುವಳ್ಳಿ (ವರದಿಗಾರರು ವಿ ಕೆ ನ್ಯೂಸ್)

ಗಗನಕ್ಕೇರಿದ “ಡರ್ಟಿ” ಹುಡುಗಿಯ ಸಂಭಾವನೆ..!!


ಗಗನಕ್ಕೇರಿದ “ಡರ್ಟಿ” ಹುಡುಗಿಯ ಸಂಭಾವನೆ..!!

ಮುಂಬಯಿ:  ಇತ್ತಿಚೆಗೆ ಬಿಡುಗಡೆ ಗೊಂಡು ಯಶಸ್ಸು ಕಂಡ “ಡರ್ಟಿ ಪಿಕ್ಚರ್  ” ಚಿತ್ರದ ನಾಯಕಿ ಬಂಗಾಳಿ ಬೆಡಗಿ ವಿದ್ಯಾ ಬಾಲನ್ ಅವರ ಸಂಬಾವನೆ ಆಕಾಶದೆತ್ತರಕ್ಕೆ  ತಲುಪಿದೆ . “ಡರ್ಟಿ ಪಿಕ್ಚರ್  ” ಯಶಸ್ಸು ಆಗುತಿದ್ದಂತೆ ಬಾಲನ್ ಮನೆಯ ಮುಂದೆ ನಿರ್ಮಾಪಕರು ಸಾಲುಗಟ್ಟಿ ನಿಂತಿದ್ದು, ಡರ್ಟಿ ಹುಡುಗಿ ಸಂಬಾವನೆಯನ್ನ ದುಪ್ಪಟ್ಟು ಗೊಳಿಸಿದ್ದಾರೆ. ಸಿಲ್ಕ್ ಸ್ಮಿತಾ ಅವರ ಜೀವನದ ಕಥೆಯನ್ನ್ನು  ಒಳಗೊಂಡ “ಡರ್ಟಿ ಪಿಕ್ಚರ್  ” ವಿದ್ಯಾ ಜೀವನಕ್ಕೆ ಹೊಸ ತಿರುವನ್ನೇ ನೀಡಿದೆ.
ಚಿತ್ರದಲ್ಲಿ ಸಿಲ್ಕ್ ಪಾತ್ರವನ್ನ ಅಭಿನಯಿಸಿದ  ವಿದ್ಯಾ ಬಾಲನ್ ಸಿಲ್ಕ್ ಪಾತ್ರಕ್ಕೆ  ಜೀವವನ್ನು  ತುಂಬಿದ್ದರು.  ಕೆಲವರ ಪ್ರಕಾರ ವಿದ್ಯಾ ಬಾಲನ್ ಅವರ ಸಂಭಾವನೆ  ಸಲ್ಮಾನ್ ಖಾನ್ , ಶಾರುಕ್ ಖಾನ್ ಅಮೀರ್ ಖಾನ್ ಅವರ ಮಟ್ಟದಲ್ಲಿ ಹೋಗುತ್ತಿದೆಯಂತೆ..!! ನಾಯಕಿ ಪ್ರದಾನ ಚಿತ್ರ ಈ ಮಟ್ಟದಲ್ಲಿ ಯಶಸ್ಸು ಕಂಡಿರೋದು ಸಂತೋಷ ಆಗಿದೆ, ಎಂದು ನಿನ್ನೆ ಮುಂಬೈ ನಲ್ಲಿ ನಡೆದ ಸಮಾರಂಭವೊಂದರಲ್ಲಿ ಮಾತನಾಡುತ್ತ ವಿದ್ಯಾ ಬಾಲನ್ ತನ್ನ ಸಂಬ್ರಮವನ್ನ ಹಂಚಿಕೊಂಡಿದ್ದಾರೆ.
ತನ್ನ ಮುಂದಿನ ಚಿತ್ರ ಮದುರ್ ಬಂದಾರ್ಕರ್ ಅವರ  “ಹೀರೋಯಿನ್  ” ಚಿತ್ರದಲ್ಲಿ ನಟಿಸುತ್ತಿರುವ ವಿದ್ಯಾ ಇನ್ನೊಂದು ಗೆಲುವಿನ ನಿರೀಕ್ಷೆಯಲ್ಲಿದ್ದಾರೆ.. ಅಂತು ಬಂಗಾಳಿ ಹುಡುಗಿ “ಖಾನ್ ” ಗಳಿಗೆ ಸರಿಸಾಟಿಯಾಗಿ ಸಂಭಾವನೆ  ಪಡೆಯಿತ್ತಿರುವುದು, ನಾಯಕಿ ಕೂಡ ಬಾಲಿವುಡ್ ನಲ್ಲಿ ಕೋಟಿ ಬೆಲೆ ಬಾಳಬಹುದು ಎನ್ನೋದನ್ನ ತೋರಿಸಿದ್ದಾರೆ.
- ನಿತಿನ್ ರೈ ಕುಕ್ಕುವಳ್ಳಿ (ವರದಿಗಾರರು ವಿ ಕೆ ನ್ಯೂಸ್)


SEND FREE SMS TO INDIA,

http://site2sms.com/user/dashboard.asp

GUY'S LOG ON YOUR INDIAN MOBILE NO#

ನೆರವಾಗಿ…….ಹೀಗೊಂದು ವಿಜ್ಞಾಪನೆ,


ನೆರವಾಗಿ…….ಹೀಗೊಂದು ವಿಜ್ಞಾಪನೆ,

ಬಂಟ್ವಾಳ : ಸುಖ-ದುಃಖ, ಸಂತೋಷ-ಸಂಕಷ್ಟಗಳು ಮಾನವ ಜೀವನದ ಎರಡು ಮುಖಗಳು. ಬದುಕಿನಲ್ಲಿ ಏಳು-ಬೀಳುಗಳು ಸಾಮಾನ್ಯ. ಕೆಲವೊಮ್ಮೆ ಬದುಕಿನ ಸಂಕಷ್ಟಗಳು ಬಂದು ಹೋದರೆ, ಇನ್ನು ಕೆಲವೊಮ್ಮೆ ಜೀವನ ಸಂಕಷ್ಟಗಳು ಕುಟುಂಬದ ಇಡೀ ಬದುಕನ್ನೇ ತಲ್ಲಣಗೊಳಿಸುತ್ತವೆ. ಬಡತನ ಹಾಗೂ ಕಾಯಿಲೆ ಒಟ್ಟೊಟ್ಟಾಗಿ ಒಂದು ಕುಟುಂಬವನ್ನು ಬಾಧಿಸುತ್ತಿರುವ ಕರುಣಾಜನಕ ಕಥೆ ಇಲ್ಲಿದೆ.
ದಕ್ಷಿಣ ಕನ್ನಡ ಜಿಲ್ಲೆಯ, ಬಂಟ್ವಾಳ ತಾಲೂಕಿನ ಮಂಚಿ ಗ್ರಾಮದ ಮಂಚಿ ಸೈಟ್ ಎಂಬಲ್ಲಿಯ ನಿವಾಸಿ ಅಬ್ದುಲ್ ಖಾದರ್ ಎಂಬವರ ಹನ್ನೆರಡು ವರ್ಷದ ಬಾಲಕ ಸನಾವುದ್ದೀನ್ ಎಂಬಾತ ಕಿಡ್ನಿ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದು, ಈತನ ಚಿಕಿತ್ಸೆಗಾಗಿ ಈಗಾಗಲೇ ಸುಮಾರು ಹನ್ನೆರಡು ಲಕ್ಷ ರೂಪಾಯಿಗಳಿಗೂ ಅಧಿಕ ಮೊತ್ತವನ್ನು ವ್ಯಯಿಸಿದ ಈತನ ಪಾಲಕರು ಕಂಗಾಲಾಗಿದ್ದಾರೆ. ಮಾರಕ ರೋಗದಿಂದ ಬಳಲುತ್ತಿರುವ ಕರುಳ ಕುಡಿ ಒಂದೆಡೆಯಾದರೆ ಮತ್ತೊಂದೆಡೆ ಕಿತ್ತು ತಿನ್ನುತ್ತಿರುವ ಬಡತನ ಈ ಕುಟುಂಬದ ನೆಮ್ಮದಿಯನ್ನೇ ಅಲುಗಾಡಿಸಿದೆ.
ಚಿಕ್ಕ ವಯಸ್ಸಿನಲ್ಲೊಮ್ಮೆ ಬಾಲಕ ಸನಾವುದ್ದೀನ್ ಮೂತ್ರ ಸಂಬಂಧಿ ಸಮಸ್ಯೆಗೆ ಒಳಗಾಗಿದ್ದು, ಆ ಸಂದರ್ಭದಲ್ಲಿ ಚಿಕಿತ್ಸೆಗಾಗಿ ವೈದ್ಯರನ್ನು ಸಂಪರ್ಕಿಸಿದಾಗ ಬಾಲಕ ಕಿಡ್ನಿ ಸಂಬಂಧಿ ಕಾಯಿಲೆಯಿಂದ ಬಳಲುತ್ತಿರುವುದು ದೃಢಪಟ್ಟಿರುತ್ತದೆ. ಈಗಾಗಲೇ ಮೂರು ಶಸ್ತ್ರ ಚಿಕಿತ್ಸೆಗಳನ್ನು ಪೂರೈಸಿರುವ ಬಾಲಕ ಸನಾವುದ್ದೀನ್‌ನ ವೈದ್ಯಕೀಯ ಚಿಕಿತ್ಸೆಗೆ ಅಪಾರ ಮೊತ್ತದ ಹಣಕಾಸು ವ್ಯಯಿಸಲಾಗಿದೆ. ಇದೀಗ ಬಾಲಕನಿಗೆ ಬೆಂಗಳೂರಿನ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ನೀಡಲು ವೈದ್ಯರು ಸಲಹೆ ನೀಡಿದ್ದು, ಚಿಕಿತ್ಸಾ ವೆಚ್ಚ ಸುಮಾರು ೩-೪ ಲಕ್ಷ ರೂಪಾಯಿಯಷ್ಟು ತಗಲಬಹುದು ಎಂದು ತಿಳಿಸಿರುತ್ತಾರೆ.
ಕಾಯಿಲೆ ಪೀಡಿತ ಬಾಲಕ ಸನಾವುದ್ದೀನ್ ಸೇರಿದಂತೆ ಅಬ್ದುಲ್ ಖಾದರ್‌ರಿಗೆ ನಾಲ್ಕು ಮಂದಿ ಗಂಡು ಹಾಗೂ ಇಬ್ಬರು ಹೆಣ್ಣು ಮಕ್ಕಳಿದ್ದು, ಎಲ್ಲರೂ ಅಪ್ರಾಪ್ತ ವಯಸ್ಕರಾಗಿದ್ದು, ಸಣ್ಣ ತರಗತಿಗಳಲ್ಲಿ ವಿದ್ಯಾಭ್ಯಾಸವನ್ನು ಮಾಡುತ್ತಿದ್ದಾರೆ. ಅಬ್ದುಲ್ ಖಾದರ್ ಅವರ ಕೂಲಿ ವೃತ್ತಿಯಿಂದ ಬರುವ ಅಲ್ಪ ಪ್ರಮಾಣದ ಕೂಲಿ ವೇತನ ಮಾತ್ರ ಕುಟುಂಬ ಪಾಲನೆಗಿರುವ ಏಕಮಾತ್ರ ಆದಾಯವಾಗಿದ್ದು, ಇತರ ಯಾವುದೇ ಆದಾಯವೂ ಇವರ ಪಾಲಿಗಿರುವುದಿಲ್ಲ. ಕುಟುಂಬ ಪೋಷಣೆಯ ಜೊತೆಗೆ ಮಕ್ಕಳ ವಿದ್ಯಾಭ್ಯಾಸವನ್ನು ನಿಭಾಯಿಸಬೇಕಾದ ಸಂಕಷ್ಟಮಯ ಪರಿಸ್ಥಿತಿಯಲ್ಲಿ ಪುತ್ರ ಸನಾವುದ್ದೀನ್‌ಗೆ ಬಾಧಿಸಿರುವ ಕಿಡ್ನಿ ಕಾಯಿಲೆ ಅಬ್ದುಲ್ ಖಾದರ್ ಕುಟುಂಬದ ಮೇಲೆ ದುಃಖದ ಕರಾಳ ಹಸ್ತವನ್ನೇ ಚಾಚಿದೆ. ಈಗಾಗಲೇ ಸಹೃದಯಿ ದಾನಿಗಳ ನೆರವಿನಿಂದ ಹಾಗೂ ಅಲ್ಲಲ್ಲಿ ಸಾಲ ಮಾಡಿ ಮಗನಿಗೆ ಮೂರು ಶಸ್ತ್ರ ಚಿಕಿತ್ಸೆ ಸೇರಿದಂತೆ ವೈದ್ಯಕೀಯ ಚಿಕಿತ್ಸೆ ಒದಗಿಸಿ ಕಂಗಾಲಾಗಿರುವ ಅಬ್ದುಲ್ ಖಾದರ್ ಇದೀಗ ಮತ್ತೆ ಮಗನ ಚಿಕಿತ್ಸೆಗಾಗಿ ಹಣ ಹೊಂದಿಸುವ ಬಗ್ಗೆ ತೀವ್ರ ಚಿಂತಿತರಾಗಿರುತ್ತಾರೆ.
ಮಂಚಿ ಶಾಲೆಯಲ್ಲಿ ಆರನೇ ತರಗತಿಯಲ್ಲಿ ವಿದ್ಯಾಭ್ಯಾಸವನ್ನು ಮಾಡುತ್ತಿರುವ ಬಾಲಕ ಸನಾವುದ್ದೀನ್ ತನ್ನೆಲ್ಲ ಸಹಪಾಠಿಗಳಂತೆ ಸುಂದರ ಭವಿಷ್ಯದ ಕನಸುಗಳನ್ನು ಹೊತ್ತಿದ್ದು, ಅದಕ್ಕಾಗಿ ಬಾಲಕನ ಕಿಡ್ನಿ ಕಾಯಿಲೆಗೆ ತುರ್ತು ಚಿಕಿತ್ಸೆ ಅತ್ಯಾವಶ್ಯಕವಾಗಿದೆ. ಬಾಲಕ ಸನಾವುದ್ದೀನ್‌ಗೆ ಚಿಕಿತ್ಸೆ ನೀಡಿ ಪುಟಾಣಿಯ ಬಾಳನ್ನು ಬೆಳಗುವ ಅದಮ್ಯ ಬಯಕೆ ಪಾಲಕರಿಗಿದ್ದರೂ ಕುಟುಂಬವನ್ನು ಕಾಡುತ್ತಿರುವ ಬಡತನ ಎಲ್ಲದಕ್ಕೂ ತಣ್ಣೀರೆರಚುವ ಸಾಧ್ಯತೆಯಿದೆ. ಇದೀಗ ಕರುಳ ಕುಡಿಯ ಬಾಳನ್ನು ಬೆಳಗಿಸುವ ಇರಾದೆಯಲ್ಲಿರುವ ಅಬ್ದುಲ್ ಖಾದರ್ ಮಾನೀಯತೆಯ ಮಿಡಿತವಿರುವ, ಬಡವರ ಕಷ್ಟಗಳಿಗೆ ಸ್ಪಂದಿಸುವ ಹೃದಯವಂತಿಕೆ ಇರುವ ದಾನಿಗಳ ಆರ್ಥಿಕ ಸಹಕಾರವನ್ನು ಅಸಹಾಯಕತೆಯ ಕಣ್ಗಳಿಂದ ನಿರೀಕ್ಷಿಸುತ್ತಿದ್ದಾರೆ.
ತನ್ನ ಕೂಲಿ ವೃತ್ತಿಯಿಂದ ಬರುವ ಏಕಮಾತ್ರ ಆದಾಯವನ್ನು ಹೊಂದಿ, ಸಂಸಾರ ಪಾಲನೆ, ಮಕ್ಕಳ ವಿದ್ಯಾಭ್ಯಾಸದ ಹೊಣೆ ಹಾಗೂ ಪುತ್ರನ ಕಾಯಿಲೆಗೆ ಚಿಕಿತ್ಸೆ ನೀಡಬೇಕಾದ ಭಾರವಾದ ಜವಾಬ್ದಾರಿಯನ್ನು ನಿಭಾಯಿಸಬೇಕಾದ ಅಬ್ದುಲ್ ಖಾದರ್ ಕುಟುಂಬ ಬದುಕಿನ ಸಂತೋಷದಿಂದ ಕ್ಷಣ ಕ್ಷಣಕ್ಕೂ ಹಿಮ್ಮುಖವಾಗಿ ಚಲಿಸುತ್ತಿದೆ. ಬದುಕಿನ ಸಂತೋಷವನ್ನು ಕಳೆದುಕೊಳ್ಳುತ್ತಿರುವ ಬಾಲಕ ಸನಾವುದ್ದೀನ್ ಹಾಗೂ ಆತನ ಕುಟುಂಬಕ್ಕೆ ಸಾಂತ್ವನದ ಸಿಂಚನಗೈಯುವುದು ಉಳ್ಳವರ ಕರ್ತವ್ಯವಲ್ಲವೇ?

ಈ ನಿಟ್ಟಿನಲ್ಲಿ ಬಡವರ ಸಂಕಷ್ಟಗಳಿಗೆ ಮಿಡಿಯುವ ಉದಾರತೆಯ ಹೃದಯವಂತಿಕೆ ಇರುವವರು ಅಬ್ದುಲ್ ಖಾದರ್ ಅವರ ಕರ್ನಾಟಕ ಬ್ಯಾಂಕ್ ಮಂಚಿ ಶಾಖೆಯ ಉಳಿತಾಯ ಖಾತೆ ಸಂಖ್ಯೆ : 9025 ಗೆ ತಮ್ಮ ಉದಾರತೆಯನ್ನು ಜಮೆ ಮಾಡಬಹುದು ಅಥವಾ ಈ ಬಗ್ಗೆ ಹೆಚ್ಚಿನ ಮಾಹಿತಿಗಳಿಗಾಗಿ ದೂರವಾಣಿ ಸಂಖ್ಯೆ 7760731869 ಗೆ ಸಂಪರ್ಕಿಸಬಹುದು.

- ಪಿ.ಎಂ.ಎ. ಪಾಣೆಮಂಗಳೂರು. (ವರದಿಗಾರರು, ವಿ ಕೆ ನ್ಯೂಸ್).