Saturday, 17 December 2011

ಗಗನಕ್ಕೇರಿದ “ಡರ್ಟಿ” ಹುಡುಗಿಯ ಸಂಭಾವನೆ..!!


ಗಗನಕ್ಕೇರಿದ “ಡರ್ಟಿ” ಹುಡುಗಿಯ ಸಂಭಾವನೆ..!!

ಮುಂಬಯಿ:  ಇತ್ತಿಚೆಗೆ ಬಿಡುಗಡೆ ಗೊಂಡು ಯಶಸ್ಸು ಕಂಡ “ಡರ್ಟಿ ಪಿಕ್ಚರ್  ” ಚಿತ್ರದ ನಾಯಕಿ ಬಂಗಾಳಿ ಬೆಡಗಿ ವಿದ್ಯಾ ಬಾಲನ್ ಅವರ ಸಂಬಾವನೆ ಆಕಾಶದೆತ್ತರಕ್ಕೆ  ತಲುಪಿದೆ . “ಡರ್ಟಿ ಪಿಕ್ಚರ್  ” ಯಶಸ್ಸು ಆಗುತಿದ್ದಂತೆ ಬಾಲನ್ ಮನೆಯ ಮುಂದೆ ನಿರ್ಮಾಪಕರು ಸಾಲುಗಟ್ಟಿ ನಿಂತಿದ್ದು, ಡರ್ಟಿ ಹುಡುಗಿ ಸಂಬಾವನೆಯನ್ನ ದುಪ್ಪಟ್ಟು ಗೊಳಿಸಿದ್ದಾರೆ. ಸಿಲ್ಕ್ ಸ್ಮಿತಾ ಅವರ ಜೀವನದ ಕಥೆಯನ್ನ್ನು  ಒಳಗೊಂಡ “ಡರ್ಟಿ ಪಿಕ್ಚರ್  ” ವಿದ್ಯಾ ಜೀವನಕ್ಕೆ ಹೊಸ ತಿರುವನ್ನೇ ನೀಡಿದೆ.
ಚಿತ್ರದಲ್ಲಿ ಸಿಲ್ಕ್ ಪಾತ್ರವನ್ನ ಅಭಿನಯಿಸಿದ  ವಿದ್ಯಾ ಬಾಲನ್ ಸಿಲ್ಕ್ ಪಾತ್ರಕ್ಕೆ  ಜೀವವನ್ನು  ತುಂಬಿದ್ದರು.  ಕೆಲವರ ಪ್ರಕಾರ ವಿದ್ಯಾ ಬಾಲನ್ ಅವರ ಸಂಭಾವನೆ  ಸಲ್ಮಾನ್ ಖಾನ್ , ಶಾರುಕ್ ಖಾನ್ ಅಮೀರ್ ಖಾನ್ ಅವರ ಮಟ್ಟದಲ್ಲಿ ಹೋಗುತ್ತಿದೆಯಂತೆ..!! ನಾಯಕಿ ಪ್ರದಾನ ಚಿತ್ರ ಈ ಮಟ್ಟದಲ್ಲಿ ಯಶಸ್ಸು ಕಂಡಿರೋದು ಸಂತೋಷ ಆಗಿದೆ, ಎಂದು ನಿನ್ನೆ ಮುಂಬೈ ನಲ್ಲಿ ನಡೆದ ಸಮಾರಂಭವೊಂದರಲ್ಲಿ ಮಾತನಾಡುತ್ತ ವಿದ್ಯಾ ಬಾಲನ್ ತನ್ನ ಸಂಬ್ರಮವನ್ನ ಹಂಚಿಕೊಂಡಿದ್ದಾರೆ.
ತನ್ನ ಮುಂದಿನ ಚಿತ್ರ ಮದುರ್ ಬಂದಾರ್ಕರ್ ಅವರ  “ಹೀರೋಯಿನ್  ” ಚಿತ್ರದಲ್ಲಿ ನಟಿಸುತ್ತಿರುವ ವಿದ್ಯಾ ಇನ್ನೊಂದು ಗೆಲುವಿನ ನಿರೀಕ್ಷೆಯಲ್ಲಿದ್ದಾರೆ.. ಅಂತು ಬಂಗಾಳಿ ಹುಡುಗಿ “ಖಾನ್ ” ಗಳಿಗೆ ಸರಿಸಾಟಿಯಾಗಿ ಸಂಭಾವನೆ  ಪಡೆಯಿತ್ತಿರುವುದು, ನಾಯಕಿ ಕೂಡ ಬಾಲಿವುಡ್ ನಲ್ಲಿ ಕೋಟಿ ಬೆಲೆ ಬಾಳಬಹುದು ಎನ್ನೋದನ್ನ ತೋರಿಸಿದ್ದಾರೆ.
- ನಿತಿನ್ ರೈ ಕುಕ್ಕುವಳ್ಳಿ (ವರದಿಗಾರರು ವಿ ಕೆ ನ್ಯೂಸ್)


No comments:

Post a Comment