Saturday, 17 December 2011

ಆಸ್ಟ್ರೇಲಿಯ ಮಾಜಿ ನಾಯಕನ ಕ್ರಿಕೆಟ್ ಜೀವನ ತುಗೊಯ್ಯಲೆಯಲ್ಲಿ..?


Posted on  by ಕೆ.ಎಂ. ಮಹಮ್ಮದ್ ಅನ್ಸಾರ್ ಬೆಳ್ಳಾರೆ (ಅಲ್ಫಾ).

ತನಗೆ ಯಾವೊಬ್ಬ ಆಟಗಾರನು ಮುಖ್ಯ ಅಲ್ಲ. ಒಬ್ಬ ಆಟಗಾರ ನನ್ನ ತಂಡ ಅವಲಂಬಿಸಿಲ್ಲ ಅನ್ನೋದನ್ನ ಅದೆಷ್ಟೋ ಬಾರಿ ಆಸ್ಟ್ರೇಲಿಯ ಕ್ರಿಕೆಟ್ ಮಂಡಳಿ ಸಾರಿ ಹೇಳಿದೆ. ವಿಶ್ವ ಕಪ್ ಗೆದ್ದ ನಾಯಕ ಸ್ಟಿವ್ ವೋ ಅವರನ್ನೇ ಏಕ ಏಕಿ ತಂಡದಿಂದ ಹೊರ ಹಾಕಿದ್ದೆ ಇದಕ್ಕೊಂದು ದೊಡ್ಡ ಸಾಕ್ಷಿ .!!
 ಹಾಗೆ ಆಸ್ಟ್ರೇಲಿಯ ಕಂಡ ಅತ್ಯುತ್ತಮ ಆಟಗಾರರಿಗೂ ಇದೇ ದಾರಿಯನ್ನು ಆಸ್ಟ್ರೇಲಿಯ ಕ್ರಿಕೆಟ್ ಮಂಡಳಿ ತೋರಿಸಿದೆ. ಈಗ ಆಸ್ಟ್ರೇಲಿಯ ಮಾಜಿ ನಾಯಕ ವಿಶ್ವ ಕಪ್ ಗೆದ್ದ ನಾಯಕ ರಿಕ್ಕಿ ಪಾಂಟಿಂಗ್ ಕೂಡ ತಂಡದಿಂದ ಗೇಟ್ ಪಾಸ್ ಆಗಲಿದ್ದಾರೆ ಅನ್ನೂ ಸುದ್ದಿಗಳು ಕೇಳಿಬರುತ್ತಿವೆ. ಭಾರತ ವಿರುದ್ದ ಸರಣಿ ಗೆ ಪಾಂಟಿಂಗ್ ನೇಮಕ ಗೊಂಡಿದ್ದರು ಇದು ಮಂಡಳಿ ನಿರ್ಧಾರವಲ್ಲ , ಆಸ್ಟ್ರೇಲಿಯ ತರಬೇತುದಾರ ಮಿಕ್ಕಿ ಅರ್ಥರ್ ಅವರ ನಿರ್ಧಾರ, ಎಂದು ಆಸ್ಟ್ರೇಲಿಯ ಪತ್ರಿಕೆಗಳು ವರದಿ ಮಾಡಿವೆ.
 ಪಾಂಟಿಂಗ್ ವಿರುದ್ದ ಆಸ್ಟ್ರೇಲಿಯದ ಅನೇಕ ಮಾಜಿ ನಾಯಕರು ದ್ವನಿ ಎತ್ತಲು ಪ್ರಾರಂಬಿಸಿದ್ದಾರೆ. “ಪಾಂಟಿಂಗ್ ಉತ್ತಮ ಆಟಗಾರ ಆದರೆ ಇತ್ತಿಚಿನ ದಿನಗಳಲ್ಲಿ ಅವರ ಬ್ಯಾಟ್ ಚಲಿಸುತ್ತಿಲ್ಲ ತಾವಾಗಿಯೇ ನಿವೃತ್ತಿ ಗೊಶಿಸಿದರೆ ಉತ್ತಮ ಎನ್ನೋ ಮಾತುಗಳನ್ನು ಶೇನ್ ವಾರ್ನ್ ಅವರು ಹೇಳಿದ್ದು  ಪಾಂಟಿಂಗ್ ಕ್ರಿಕೆಟ್ ಆಸ್ಟ್ರೇಲಿಯ ಕ್ಕೆ ಬೇಡವಾಗಿದ್ದಾರೆ ಎಂಬುವುದಕ್ಕೆ ಈ ಮಾತೇ ಸಾಕ್ಷಿ.
ತಂಡ ಪ್ರವೇಶಿಸಲು ಯುವ ಆಟಗಾರರ ದಂಡೆ ಕಾಯುತ್ತಿರುವ ಈ ಸಂದರ್ಭದಲ್ಲಿ ಪಾಂಟಿಂಗ್ ತಂಡದಲ್ಲಿ ಗಟ್ಟಿಯಾಗಿ ಬೇರುರಿದ್ದು ತಂಡಕ್ಕೆ ಸಂಕಟವಾಗಿ ಪರಿಣಮಿಸಿದೆ ಎಂದು ಮಾಜಿ ನಾಯಕ ಅಲನ್ ಬಾರ್ಡರ್ ಹೇಳಿದ್ದಾರೆ .. ಇದನೆಲ್ಲ ನೋಡುವಾಗ ಪಾಂಟಿಂಗ್ ಭಾರತ ವಿರುದ್ದ ಟೆಸ್ಟ್ ಪಂದ್ಯದಲ್ಲಿ ಉತ್ತಮ ಪ್ರದರ್ಶನ ನೀಡದಿದ್ದರೆ ಕ್ರಿಕೆಟ್ ಆಸ್ಟ್ರೇಲಿಯ ಪಾಂಟಿಂಗ್ ಗೆ ಮನೆಯ ದಾರಿ ತೋರಿಸುದು ನಿಶ್ಚಿತ ವಾಗಿದೆ.
- ನಿತಿನ್ ರೈ ಕುಕ್ಕುವಳ್ಳಿ (ವರದಿಗಾರರು ವಿ ಕೆ ನ್ಯೂಸ್)

No comments:

Post a Comment