Posted on December 28, 2011 by ಅಶ್ರಫ್ ಮಂಜ್ರಾಬಾದ್, ಸಕಲೇಶಪುರ
ನವದೆಹಲಿ : ಅಣ್ಣಾ ಹಜಾರೆ ಮತ್ತು ತಂಡ ದೆಹಲಿಯಲ್ಲಿನ ಚಳಿಯ ಕಾರಣದಿಂದ ದೆಹಲಿಯ ಬದಲು ಮುಂಬೈನಲ್ಲಿ ಉಪವಾಸ ಸತ್ಯಾಗ್ರಹ ಹಮ್ಮಿಕೊಂಡಿರುವುದರ ಬಗ್ಗೆ ವ್ಯಂಗ್ಯವಾಡಿರುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ದ್ವಿಗ್ವಿಜಯ್ ಸಿಂಗ್ ಅಣ್ಣಾ ತಂಡ ಚಳಿಗೆ ಹೆದರಿ ಮುಂಬೈಗೆ ಹೋಗಿಲ್ಲ , ಬದಲಾಗಿ ಫಂಡ್ ಕಲೆಕ್ಷನ್ ಮಾಡಲು ಮುಂಬೈನಲ್ಲಿ ಉಪವಾಸ ಸತ್ಯಾಗ್ರಹದ ನಾಟಕವಾಡುತ್ತಿದೆ ಎಂದು ಹೇಳಿದ್ದಾರೆ. ವಯಸ್ಸಾದ ಅಣ್ಣಾ ಹಜಾರೆಯವರನ್ನು ಉಪವಾಸ ಕೂರಿಸಿ ಅಣ್ಣಾ ತಂಡದ ನಾಲ್ವರು ಸದಸ್ಯರು ಹೊಟ್ಟೆತುಂಬಾ ತಿನ್ನುತ್ತಿದ್ದಾರೆ . ಈ ಆಂದೋಲನ ಸಂಪೂರ್ಣ ರಾಜಕೀಯ ಪ್ರೇರಿತವಾಗಿದ್ದು ಕಾಂಗ್ರೆಸ್ ಹಾಗೂ ಕೇಂದ್ರ ಸರ್ಕಾರವನ್ನು ಗುರಿಯಾಗಿಸಿ ನಡೆಸಲಾಗುತ್ತಿದೆ ಎಂದಿದ್ದಾರೆ .
ಕೇಂದ್ರ ಸರ್ಕಾರ ಲೋಕಪಾಲ್ ಮಸೂದೆ ಜಾರಿಗೆ ತರುತ್ತಿದ್ದು ಅದರಲ್ಲಿ ಅಣ್ಣಾ ತಂಡದ ಬೇಡಿಕೆಯಂತೆ ಪ್ರಧಾನ ಮಂತ್ರಿಯವರನ್ನು ಕೆಲವು ಶರತ್ತುಗಳ ಆಧಾರದ ಮೇಲೆ ಲೋಕಪಾಲ ವ್ಯಾಪ್ತಿಗೆ ಸೇರಿಸಲಾಗಿದೆ. ಹೀಗಿದ್ದೂ ಅಣ್ಣಾ ಹಜಾರೆ ಲೋಕಪಾಲ್ ವಿರೋಧಿಗಳ ವಿರುದ್ಧ ಹೋರಾಟ ಮಾಡುವ ಬದಲು ಲೋಕಪಾಲ್ ಜಾರಿಗೆ ಹೊರಟಿರುವ ಕೇಂದ್ರ ಸರ್ಕಾರದ ವಿರುದ್ಧ ಹೋರಾಟ ಮಾಡುತ್ತಿದ್ದಾರೆ ಎಂದು ಅವರು ಅಪಾದಿಸಿದ್ದಾರೆ .
No comments:
Post a Comment