Monday, 19 December 2011

ಧಿಡೀರ್ ಪ್ರತ್ಯಕ್ಷ ಗೊಂಡ ವೀಣಾ ಮಲಿಕ್……!!


Posted on  by ಕೆ.ಎಂ. ಮಹಮ್ಮದ್ ಅನ್ಸಾರ್ ಬೆಳ್ಳಾರೆ (ಅಲ್ಫಾ).

ಪಾಕಿಸ್ತಾನ ಮೂಲದ ಬಾಲಿವುಡ್ ನಟಿ ಹಾಗು ರೂಪದರ್ಶಿ ವೀಣಾ ಮಲಿಕ್ ಮುಂಬೈನಿಂದ ಕಾಣೆಯಾಗಿದ್ದಾರೆ, ಅನ್ನೋ ಸುದ್ದಿ ಕಾಡ್ಗಿಚ್ಚಿನಂತೆ ಹರಡಿದ ಸಂಧರ್ಭದಲ್ಲೇ  ಮುಂಬೈನ ಮಾದ್ಯಮ ವರದಿಯೊಂದು ವೀಣಾ ಮಲಿಕ್ ಮುಂಬೈನಲ್ಲೇ ಇದ್ದಾರೆ ಅನ್ನೋ ವರದಿಯನ್ನು ನೀಡಿದೆ. ತನ್ನ ಮೂಲ ಹೆಸರಾದ ಝಾಹಿದ ಹೆಸರಿನಲ್ಲಿ ವೀಣಾ ಮುಂಬೈ ನ ಪ್ರತಿಷ್ಟಿತ ಹೋಟೆಲ್ ಒಂದರಲ್ಲಿ ರೂಂ ಪಡೆದುಕೊಂಡಿರುದನ್ನು ಧೃಡ ಪಡಿಸಿದೆ.
ಫ್ಯಾಶನ್ ಮ್ಯಾಗಝಿನ  ಫೋಟೋ ಶೂಟ್ ಗಾಗಿ ೪೫ ದಿನಗಳ ವೀಸಾ ಪಡೆದಿರುವ ವೀಣಾ ೨ ದಿನದಲ್ಲಿ ತನ್ನ ವೀಸಾ ಕೊನೆಗೊಳ್ಳಲಿದೆ ಎಂದು ತಿಳಿಯುತ್ತಿದ್ದಂತೆ ತನ್ನ ಗೆಳೆಯ ಬಾಲಿವುಡ್ ನಟ ಅಶ್ಮಿತ್ ಪಠೇಲ ಜೊತೆ ವಾಘ ಗಡಿಯ ವಲಸೆ ಅಧಿಕಾರಿ ಗಳನ್ನ ಭೇಟಿ ಮಾಡಿ ಬಂದಿದ್ದಾಳೆ. ವೀಣಾ ತನ್ನ ಮಾನೇಜರ್ ಜೊತೆ ಏನೂ ಮಾಹಿತಿ  ಹೇಳದೆ ತನ್ನ ಗೆಳೆಯ ಅಶ್ಮಿತ್ ಜೊತೆ ಹೋಗಿದ್ದು . ಇದನ್ನು ಅರಿಯದ  ವೀಣಾ ಮ್ಯಾನೇಜರ್ ಮುಂಬೈನ ಪೊಲೀಸರಿಗೆ ವೀಣಾ ಕನ್ಮರೆಯಾಗಿದ್ದಾಳೆ ಅನ್ನೋ ದೂರು ನೀಡಿದ್ದರು.ಇತ್ತೀಚಿಗೆ ಪತ್ರಿಕೆಯೊಂದರ ಮುಖ ಪುಟಕ್ಕೆ ನಗ್ನ ಭಂಗಿಯ ಫೂಸ್ ನೀಡಿದ್ದು ಪಾಕಿಸ್ತಾನ  ತುಂಬಾ ವಿವಾದಾಕ್ಕೆ ಎಡೆಮಾಡಿ ಕೊಟ್ಟಿತ್ತು.
-ನಿತಿನ್ ರೈ ಕುಕ್ಕುವಳ್ಳಿ (ವರದಿಗಾರರು ವಿಕೆ ನ್ಯೂಸ್ )

No comments:

Post a Comment