Posted on December 19, 2011 by ವಿಶ್ವ ಕನ್ನಡಿಗ ನ್ಯೂಸ್
ಮುಂಬೈ : ಹೊಸ ವರ್ಷದ ಸಿದ್ಧತೆಗಾಗಿ ದೇಶಾದ್ಯಂತ ಮಹಾನಗರಗಳಲ್ಲಿ ಭರ್ಜರಿ ಸಿದ್ಧತೆಗಳು ಆರಂಭಗೊಂಡಿವೆ . ಸಪ್ತತಾರಾ ,ಪಂಚತಾರಾ ಹೋಟೆಲುಗಳು ಐಶಾರಾಮಿ ಕ್ಲಬ್ ಗಳು ಈಗಾಗಲೇ ಹೊಸ ವರ್ಷದ ಪಾರ್ಟಿಗಾಗಿ ಹಲವು ನಟಿಯರನ್ನು ಬುಕ್ ಮಾಡಿವೆ. ಆದರೆ ಕತ್ರಿನಾ ಕೈಫ್ , ಪ್ರಿಯಾಂಕಾ ಚೋಪ್ರಾ , ಸೋನಾಕ್ಷಿ ಸಿನ್ಹಾ ಸೇರಿದಂತೆ ಹಲವು ನಟಿಯರು ಈ ವರ್ಷದ ಪಾರ್ಟಿಯಲ್ಲಿ ಪಾಲ್ಗೊಳ್ಳಲು ನಿರಾಕರಿಸಿರುವುದರ ಭರ್ಜರಿ ಲಾಭ ಬಾಲಿವುಡ್ ಹಾಟ್ ಬೆಡಗಿ ಮಲ್ಲಿಕಾ ಶೆರಾವತ್ ಪಾಲಿಗಾಗಿದೆ . ತಮ್ಮ ಕಾರ್ಯಕ್ರಮಕ್ಕೆ ಮಲ್ಲಿಕಾ ಭರ್ಜರಿ ಚಾರ್ಜ್ ಅನ್ನು ಮಾಡಿದ್ದಾರೆ . ಮಲ್ಲಿಕಾ ಶೆರಾವತ್ ಈ ಬಾರಿಯ ಪಾರ್ಟಿಯಲ್ಲಿ ಪಾಲ್ಗೊಳ್ಳಲು ಮಾಡಿರುವ ಚಾರ್ಜ್ ಪ್ರಕಾರ ಪ್ರತೀ ಪ್ರತೀ ನಿಮಿಷಕ್ಕೆ ಆಕೆಗೆ ನಾಲ್ಕು ಲಕ್ಷ ರೂಪಾಯಿ ಸಿಗಲಿದೆ ಎನ್ನಲಾಗಿದೆ.
ಚಾಲಾಕಿ ಮಲ್ಲಿಕಾ ಹಿರಿಯ ನಟಿಯರ ಹೊಸವರ್ಷದ ಪಾರ್ಟಿಯಲ್ಲಿ ಪಾಲ್ಗೊಳ್ಳುವುದಿಲ್ಲ ಎನ್ನುವ ನಿರ್ಧಾರದ ಭರಪೂರ ಲಾಭ ಪಡೆದಿದ್ದು ಈ ಕಾರಕ್ಕಾಗಿಯೇ ಇದೀಗ ವಿದೇಶದಿಂದ ಸ್ವದೇಶಕ್ಕೆ ಬಂದಿದ್ದಾಳೆ. ತಮ್ಮ ಸಂಭಾವನೆಯ ಶೇಕಡಾ ಎಪ್ಪತ್ತೈದು ರಷ್ಟು ಹಣವನ್ನು ಮಲ್ಲಿಕಾ ಈಗಾಗಲೇ ಅಡ್ವಾನ್ಸ್ ಆಗಿ ಪಡೆದಿದ್ದಾಳೆ ಎಂದು ಆಕೆಯ ಆಪ್ತ ಮೂಲಗಳು ಹೇಳುತ್ತಿವೆ. ಟಯೂಲಿಪ್ ಸ್ಟಾರ್ ಹೋಟೆಲಿನಲ್ಲಿ ಮಲ್ಲಿಕಾ ನ್ಯೂ ಇಯರ್ ಪಾರ್ಟಿ ಏರ್ಪಾಡಾಗಿದ್ದರೆ ಹೋಟೆಲ್ ಸಹಾರಾ ಸ್ಟಾರ್ ನಲ್ಲಿ ಜಾಕೆಲಿನ್ ಫೆರ್ನಾಂಡಿಸ್ ನೇಹಾ ದೂಪಿಯಾ , ಕಂಟ್ರಿ ಕ್ಲಬ್ ನಲ್ಲಿ ವಿವೇಕ್ ಒಬೆರಾಯ್ , ಸೋಫಿ ಚೌಧರಿ , ತನುಶ್ರೀ ದತ್ತಾ , ಸಯಾಲಿ ಭಗತ್ ಪಾರ್ಟಿಗಳು ಏರ್ಪಾಡಾಗಿವೆ . ರಣವೀರ್ ಸಿಂಗ್ ಮತ್ತು ಡಯಾನಾ ಹೇಡನ್ ಅಂಬಿ ವ್ಯಾಲಿಯಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ .
No comments:
Post a Comment