Monday, 19 December 2011

ಗಂಡ ಯುಎಇ ಯಿಂದ ಬಂದವನೇ ಹೆಂಡತಿಯ ಕೈ ಬೆರಳುಗಳನ್ನು ಕತ್ತರಿಸಿದ !


Posted on  by ಅಶ್ರಫ್ ಮಂಜ್ರಾಬಾದ್, ಸಕಲೇಶಪುರ

ಢಾಕಾ : ಯುಎಇ ಯಲ್ಲಿ ಕೆಲಸ ನಿರ್ವಹಿಸುತ್ತಿದ್ದ ಬಾಂಗ್ಲಾದೇಶಿ ಯುವಕನೊಬ್ಬ ತನ್ನೂರಿಗೆ ಬಂದವನೇ ಮನೆಯಲ್ಲಿದ್ದ ತನ್ನ ಪತ್ನಿಯ ಕೈಬೆರಳುಗಳನ್ನು ಕತ್ತರಿಸಿ ಹಾಕಿದ ಹೃದಯ ವಿದ್ರಾವಕ ಘಟನೆ ನಡೆದಿದೆ. ಇಷ್ಟಕ್ಕೆಲ್ಲಾ ಕಾರಣ ಆಕೆ ಆತನ ಅನುಮತಿ ನಿರಾಕರಿಸಿ ವಿದ್ಯಾಭ್ಯಾಸ ಕಲಿಯಲು ಕಾಲೇಜಿಗೆ ಹೋದದ್ದು ! ರಫೀಕ್ ಇಸ್ಲಾಂ ಎಂಬ ಈ ಪಾಪಿ ಗಂಡ ಯುಎಇ ಯಲ್ಲಿ ಕೆಲಸ ನಿರ್ವಹಿಸುತ್ತಿದ್ದು ಕೇವಲ ಎಂಟನೇ ತರಗತಿ ವರೆಗೆ ಓದಿದ್ದ . ಈತನ ಪತ್ನಿ ಹವ್ವಾ ಅಖ್ತರ್ ಕಾಲೇಜು ವಿದ್ಯಾಭ್ಯಾಸ ಮಾಡಿದ್ದು ತನ್ನ ಡಿಗ್ರಿ ಪೂರ್ತಿಗೊಳಿಸಲು ಬಯಸಿದ್ದಳು . ಆದರೆ ಈತ ಅದಕ್ಕೆ ಅನುಮತಿ ನೀಡಿರಲಿಲ್ಲ. ಈತನ ಅನುಮತಿ ಧಿಕ್ಕರಿಸಿ ಆಕೆ ಕಾಲೇಜಿಗೆ ಹೋಗಲು ಪ್ರಾರಂಭಿಸಿದಳು . ಇದರಿಂದ ಆಕ್ರೋಶಗೊಂಡ ಈತ ಊರಿಗೆ ಬಂದವನೇ ಆಕೆಯ ಕೈಗಳನ್ನು ಕಟ್ಟಿ ಹಾಕಿ ಬಾಯಿಗೆ ಬಟ್ಟೆ ತುರುಕಿ ಆಕೆಯ ಬಲಗೈಯ ಐದು ಬೆರಳುಗಳನ್ನು ಕತ್ತರಿಸಿದ್ದಾನೆ.
ಇದೀಗ ಢಾಕಾ ಪೊಲೀಸರು ಈ ಪಾತಕಿ ಗಂಡನನ್ನು ಬಂಧಿಸಿದ್ದು ವಿಚಾರಣೆ ಆರಂಭಿಸಿದ್ದಾರೆ. ತನಗಿಂತ ತನ್ನ ಹೆಂಡತಿ ಹೆಚ್ಚು ಕಲಿಯುವುದರ ಬಗ್ಗೆ ತನಗಿದ್ದ ಅಸೂಯೆಯ ಕಾರಣ ತಾನು ಕೃತ್ಯ ಮಾಡಿದ್ದಾಗಿ ಆತ ಹೇಳಿರುವುದಾಗಿ ಢಾಕಾ ಪೋಲಿಸ್ ಅಧಿಕಾರಿ ಮೊಹಮ್ಮದ್ ಸಲಾಹುದ್ದೀನ್ ಹೇಳಿದ್ದಾರೆ. ಈ ಕೃತ್ಯಕ್ಕೆ ಈತನಿಗೆ ಜೀವಾವಧಿ ಶಿಕ್ಷೆ ಆಗುವ ಸಾಧ್ಯತೆ ಇದೆ ಎಂದೂ ಅವರು ಹೇಳಿದ್ದಾರೆ . ಇದೀಗ ಹುಡುಗಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದು ತನ್ನ ತವರು ಮನೆಗೆ ಹೋಗಿದ್ದಾಳೆ . ತನ್ನ ಬಲಗೈ ಕತ್ತರಿಸಿದ್ದರೂ ನಾನು ನನ್ನ ಇನ್ನೊಂದು ಕೈ ಬಳಸಿ ನನ್ನ ಪದವಿ ಪೂರ್ತಿ ಗೊಳಿಸುತ್ತೇನೆ  ಎಂದು ಆಕೆ ಹೇಳಿಕೊಂಡಿದ್ದಾಳೆ

No comments:

Post a Comment