Posted on December 23, 2011 by ಕೆ.ಎಂ. ಮಹಮ್ಮದ್ ಅನ್ಸಾರ್ ಬೆಳ್ಳಾರೆ (ಅಲ್ಫಾ).
ಬೆಂಗಳೂರು : ಮಾಜಿ ಪ್ರದಾನ ಮಂತ್ರಿ ದೇವೇಗೌಡರ ಮೊಮ್ಮಗ ಮಾಜಿ ಮುಖ್ಯಮಂತ್ರಿ ಕುಮಾರ ಸ್ವಾಮಿ ಅವರ ಪುತ್ರ ನಿಖಿಲ್ ಗೌಡ ರಾಜಕೀಯ ಪ್ರವೇಶಕ್ಕೆ ಸಿದ್ದತೆಗಳು ನಡೆಯುತ್ತಿವೆ ಎಂದು ಜೆ ಡಿ ಎಸ್ ಮೂಲಗಳಿಂದ ತಿಳಿದು ಬಂದಿದೆ. ನಿಖಿಲ್ ಗೌಡ ಸದ್ಯ ತನ್ನ ಒಡೆತನದ “ಕಸ್ತೂರಿ” ವಾಹಿನಿಯನ್ನು ನೋಡಿ ಕೊಳ್ಳುತ್ತಿದ್ದು ಮುಂದಿನ ದಿನಗಳಲ್ಲಿ ರಾಮನಗರ ದಲ್ಲಿ ತನ್ನ ರಾಜಕೀಯ ಜೀವನವನ್ನ ಆರಂಭಿಸಲಿರುವ ಸುದ್ದಿಗಳು ಕೇಳಿಬರುತ್ತಿವೆ.
ಇದಕ್ಕೆ ಸಾಕ್ಷಿಯಗುವಂತೆ ಕುಮಾರ ಸ್ವಾಮಿ ಹುಟ್ಟು ಹಬ್ಬದ ದಿನ ಕನಕಪುರದಲ್ಲಿ ನಿಖಿಲ್ ಗೆ ಅದ್ದೂರಿ ಸ್ವಾಗತ ನೀಡಲಾಗಿದೆ. ತಂದೆಯ ಜೋತೆ ಆಗಮಿಸಿದ ನಿಖಿಲ್ ಗೌಡರಿಗೆ ಘೋಷಣೆಗಳ ಮೂಲಕ ಸ್ವಾಗತ ಕೋರಿದ ಜನ ನಿಖಿಲ್ ರಾಜಕೀಯ ಪ್ರವೆಶಕ್ಕೊಸ್ಕರ ವೇದಿಕೆ ಸಿದ್ದಪದಿಸುತ್ತಿರುದಕ್ಕೆ ಮುನ್ನುಡಿಯಾಗಿ ಈ ಕಾರ್ಯಕ್ರಮ ನಡೆಸಲಾಗಿತ್ತು ಅನ್ನೋದು ಕೇಳಿ ಬರುತ್ತಿದೆ. ರಾಮ ನಗರದಲ್ಲಿ ಯೋಗೇಶ್ವರ್ ಪ್ರಬಲವಾಗಿ ಬೆಳೆಯುತಿದ್ದು ಅವರ ವಿರುದ್ದ ಸ್ಪರ್ದಿಸಲು ಸೂಕ್ತ ಸ್ಪರ್ಧಿ ಅಗತ್ಯ ಇರುದರಿಂದ ಗೌಡ ರ ಕುಡಿ ಇಲ್ಲಿ ತನ್ನ ಛಾಪನ್ನು ಮೂಡಿಸಿ ಯೋಗೇಶ್ವರ್ ಅವರಿಗೆ ಎದುರಾಳಿಯಾಗ ಬಲ್ಲರು ಎನ್ನೋ ಲೆಕ್ಕಾಚಾರ ಗೌಡರ ತಲೆಯಲ್ಲಿ ಓಡುತ್ತಿದೆ.
ಪುತ್ರನ ರಾಜಕೀಯ ಪ್ರವೇಶದ ಬಗ್ಗೆ ಕುಮಾರ ಸ್ವಾಮಿಯನ್ನು ಪ್ರಶ್ನಿಸಿದರೆ “ನಮ್ಮ ಕುಟುಂಬದ ಎಲ್ಲಾ ಆಗುಹೋಗು ಗಳನ್ನೂ ತಂದೆ ನಿರ್ಧರಿಸಲಿದ್ದಾರೆ. ಅವರು ತನ್ನ ಮೊಮ್ಮಗನ ರಾಜಕೀಯ ಪ್ರವೇಶದ ಬಗ್ಗೆ ಯಾವುದೇ ತೀರ್ಮಾನ ಕೈಗೊಂಡಿಲ್ಲ ” ಎಂದು ಹೇಳಿದ್ದು … ದೇವೇಗೌಡ ರೇ ಮೊಮ್ಮಗನ ರಾಜಕೀಯ ಪ್ರವೇಶವನ್ನು ಅತೀ ಶೀಘ್ರದಲ್ಲಿ ಘೋಷಣೆ ಮಾಡಲಿದ್ದಾರೆ ಅನ್ನೋ ಮಾತುಗಳು ಜೋರಾಗಿ ಕೇಳಿ ಬರುತ್ತಿದೆ.
- ನಿತಿನ್ ರೈ ಕುಕ್ಕುವಳ್ಳಿ (ವರದಿಗಾರರು ವಿಕೆ ನ್ಯೂಸ್)
No comments:
Post a Comment