Saturday, 24 December 2011

ಭಾಷೆಯ ಪರಿವೇ ಇಲ್ಲದ ಗಾನ ಕೋಗಿಲೆ ಶ್ರೇಯ ಗೋಶಾಲ್


Posted on  by ವಿಶ್ವ ಕನ್ನಡಿಗ ನ್ಯೂಸ್

 
 ಭಾರತೀಯ ಚಿತ್ರರಂಗದ  ಇತಿಹಾಸದಲ್ಲಿ  ನಾವು  ಅನೇಕ ಮಂದಿ  ಹಿನ್ನೆಲೆ ಗಾಯಕ  ಗಾಯಕಿಯರನ್ನು   ನೋಡಿದ್ದೇವೆ  .  ಆ ಅನೇಕ ಗಾಯಕಿಯರಲ್ಲಿ  ಇತ್ತೀಚಿನ ದಿನಗಳಲ್ಲಿ ಎಲ್ಲರ  ಮನಸ್ಸನ್ನ  ತನ್ನ ಮಧುರ  ಕಂಠ  ದಿಂದ  ಸೆಳೆದ  ಗಾಯಕಿ  ಶ್ರೇಯ ಗೋಶಾಲ್ . ಯಾವುದೇ ಭಾಷೆಯ  ಹಾಡನ್ನು  ಆ ಹಾಡಿನ, ಆ ಭಾಷಾ ಸಾಹಿತ್ಯಕ್ಕೆ  ಯಾವುದೇ  ಕೊರತೆ  ಆಗದ  ರೀತಿಯಲ್ಲಿ  ಹಾಡುವ ಈ ಗಾಯಕಿ  ಯುವಜನರು ಹಾಗೂ  ಎಲ್ಲಾ  ವರ್ಗದ  ಸಂಗೀತ ಪ್ರಿಯರ ಮನಸ್ಸನ್ನ  ಗೆದ್ದಂತಹ  ಮಹಾನ್ ಗಾಯಕಿ .
ಶ್ರೇಯ ಗೋಶಾಲ್  ಹುಟ್ಟಿದ್ದು  ೧೨ ಮಾರ್ಚ್ ೧೯೮೪ ರಂದು   ಭಾರತದ  ಪ್ರೇಕ್ಷಣಿಯ ಸ್ಥಳವಾದ  ರಾಜಸ್ತಾನದಲ್ಲಿ . ಶ್ರೇಯ ಗೋಶಾಲ್  ಬೆಂಗಾಲಿ  ಬ್ರಾಹ್ಮಣ  ಕುಟುಂಬಕ್ಕೆ ಸೇರಿದವಳು  ,ತನ್ನ ವಿದ್ಯಾಭ್ಯಾಸವನ್ನ  ಮುಂಬೈನಲ್ಲಿ  ಮುಗಿಸಿದ ಶ್ರೇಯ  ಓದಿನಲ್ಲೂ ಮುಂದಿದ್ದಂತಹ ಹುಡುಗಿ . ತನ್ನ ಚಿಕ್ಕ ವಯಸ್ಸಿನಲ್ಲೇ ಹಿಂದುಸ್ತಾನಿ  ಸಂಗೀತ  ಕಲಿತಿದ್ದ  ಗೋಶಾಲ್  ಅವರ   ಜೀವನ  ಬದಲಿಸಿದ  ಕಾರ್ಯಕ್ರಮ  ಸ  ರೀ ಗ ಮ   ಕಾರ್ಯಕ್ರಮ, ಜಿ  ಟಿವಿ   ಯಲ್ಲಿ ಪ್ರಸಾರಗೊಂಡ  ಸೋನು ನಿಗಮ್ ನಡೆಸಿ ಕೊಟ್ಟ ಈ  ಕಾರ್ಯಕ್ರಮದಲ್ಲಿ   ಸ್ಪರ್ಧಿಯಾಗಿ  ಪಾಲ್ಗೊಂಡ  ಶ್ರೇಯ  ತನ್ನ ಮಧುರ ಕಂಠದಿಂದ  ಈ ಸ್ಪರ್ಧೆಯನ್ನು ಗೆದ್ದು  ಚಿತ್ರ ರಂಗದ ಪ್ರವೇಶವನ್ನ  ಮಾಡಿದಂತಹವಳು.   ಯಾರ ಬೆಂಬಲ ವಿಲ್ಲದೆ ಸ್ವತಹ  ತನ್ನ  ಸಾಧನೆ  ಯಿಂದಲೇ  ಮೇಲೆ ಬಂದಂತಹ  ಛಲಗಾತಿ .. ಸಂಜಯ್ ಲಿಲಾ ಬನ್ಸಾಲಿ  ಅವರ  ದೇವದಾಸ್  ಚಿತ್ರದ ಹಾಡಿನ ಮೂಲಕ  ಚಿತ್ರರಂಗ ಪ್ರವೇಶಿಸಿದ  ಶ್ರೇಯ  ಆ ನಂತರ ಹಿಂದೆ ತಿರುಗಿ ನೋಡಲೇ ಇಲ್ಲ .
ಕೇವಲ ಹಿಂದಿ  ಅಲ್ಲದೇ   ಕನ್ನಡ , ಮಲಿಯಾಳಂ ,ಗುಜರಾತಿ ,ತಮಿಳ್ ಬೆಂಗಾಲಿ  ಸೇರಿದಂತೆ ಅನೇಕ ತನ್ನದಲ್ಲದ  ಭಾಷೆಯಲ್ಲಿ ಹಾಡಿ ಅನೇಕ  ಪ್ರಶಸ್ತಿಗಳನ್ನ  ಪಡೆದಂತಹ  ಗಾಯಕಿ ಶ್ರೇಯ . ತನ್ನ ಚೊಚ್ಚಲ ಚಿತ್ರವಾದ ದೇವದಾಸ್  ಚಿತ್ರಕ್ಕೆ  ಫಿಲಂ ಫಾರ್ ಪ್ರಶಸ್ತಿ ಪಡೆದ   ಶ್ರೇಯ ಗೋಶಾಲ್   ಅ  ನಂತರ  ಜಿಸ್ಮ್ , ಗುರು ,ಸಿಂಗ್ ಇಸ್ ಕಿಂಗ್  ತಮಿಳ್  ಚಿತ್ರ ಸಿಲ್ಲುನ ಒರು  ಕಾದ್ಹಲ್  ಹಾಗು ಕನ್ನಡದ ಮುಸ್ಸಂಜೆ ಮಾತು  ಚಿತ್ರದ “ಏನೋ ಒಂದತರ  ತರ ” ಚಿತ್ರದ ಹಾಡಿಗೆ  ಫಿಲಂ ಫಾರ್ ಪಡೆದಿದ್ದಾರೆ.. ಕನ್ನಡದ ಭಾವ  ಗಿತೆಗಳನ್ನ  ಹಾಡಿ ಎಲ್ಲರ ಗಮನ  ಸೆಳೆದಿರುವ  ಶ್ರೇಯ  ಲ   ಭಾಷಾ  ಸಾಮರ್ಥ್ಯ  ಎಲ್ಲರನ್ನು ಸೆಳೆಯುತ್ತದೆ  .ಇತ್ತಿಚಿನ  ದಿನಗಳಲ್ಲಿ ಅತಿ ಹೆಚ್ಚು ಸಂಬಾವನೆ  ಪಡೆಯುತ್ತಿರುವ  ಶ್ರೇಯ ಗೋಶಾಲ್ ಯಾವುದೇ ಕಾರ್ಯಕ್ರಮಕ್ಕೆ ಹೋದರೂ   ಅತ್ಯಂತ ಸರಳ ಉಡುಪಿನಲ್ಲಿ ಅಂದರೆ  ಭಾರತೀಯ ಸಂಸ್ಕೃತಿಯ  ಉಡುಪುಗಳನ್ನ ಧರಿಸಿ  ಹೋಗುವು ದು ಶ್ರೇಯ ಅವರ  ವಿಶೇಷತೆ .
ಹಲವು  ಟಿವಿ  ಕಾರ್ಯಕ್ರಮದಲ್ಲಿ  ತೀರ್ಪು ಗಾರರಾಗಿ ಪಾಲ್ಗೊಂಡು  ಹೊಸ ಪ್ರತಿಬೆಗಳ ಹುಡುಕಾಟದಲ್ಲಿ  ಸದಾ ತನ್ನನ್ನ  ತೊಡಗಿಸಿ ಕೊಂಡಿರುವ ಶ್ರೇಯ  ಯುವ ಜನತೆಗೆ ಮಾದರಿಯಾಗಿದ್ದಾಳೆ ..ದೇಶ ವಿದೇಶದಲ್ಲಿ  ಕಾರ್ಯಕ್ರಮಗಳನ್ನ ನೀಡುತ್ತ  ಭಾರತದ ಹಾಡುಗಳನ್ನು  ವಿದೇಶಕ್ಕೂ   ಪಸರಿಸಿದ ಕೀರ್ತಿ  ಶ್ರೇಯ ಅವರಿ ಗೆ ಸೇರುತ್ತದೆ  .ಚಿಕ್ಕ ವಯಸೀನಲ್ಲೇ ಇಷ್ಟೊಂದು ಸಾಧನೆ   ಮಾಡಿರುವ ಶ್ರೆಯ  ಹೆಸರು  ಭಾರತೀಯ ಸಂಗೀತ ಲೋಕದಲ್ಲಿ  ಅಜರಾಮರವಾಗಿ  ರಾರಾಜಿಸೋದರಲ್ಲಿ  ಯಾವುದೇ  ಸಂಶಯವಿಲ್ಲ … ಶ್ರೇಯ ಗೋಶಾಲ್  ಇನ್ನಷ್ಟು  ಸಾಧನೆಯನ್ನ  ಮಾಡಿ  ಇನ್ನಷ್ಟು  ಹಾಡುಗಳನ್ನ  ಸಂಗೀತ ಪ್ರಿಯರಿಗೆ ನೀಡಲಿ ಅನ್ನೋದು ನಮ್ಮೆಲ್ಲರ  ಹಾರೈಕೆ ..
ನಿತಿನ್ ರೈ ಕುಕ್ಕುವಳ್ಳಿ ( ವರದಿಗಾರರು .ವಿಕೆ ನ್ಯೂಸ್)

No comments:

Post a Comment