Posted on December 23, 2011 by ಅಶ್ರಫ್ ಮಂಜ್ರಾಬಾದ್, ಸಕಲೇಶಪುರ
ಬಂಟ್ವಾಳ : ತಾಲೂಕಿನ ಬಿ.ಸಿ.ರೋಡು ಸಮೀಪದ ಮಿತ್ತಬೈಲು ಜುಮಾ ಮಸೀದಿಯಲ್ಲಿ ಸುಮಾರು ೨೦ ಲಕ್ಷ ರೂಪಾಯಿ ವೆಚ್ಚದಲ್ಲಿ ನಿರ್ಮಾಣಗೊಳ್ಳುವ ಮಿನಾರ ಹಾಗೂ ಕುಬ್ಬಾದ ಶಂಕುಸ್ಥಾಪನೆ ಶುಕ್ರವಾರ ನೆರವೇರಿತು. ಶೈಖುನಾ ಕೆ.ಪಿ. ಅಬ್ದುಲ್ ಜಬ್ಬಾರ್ ಮುಸ್ಲಿಯಾರ್ ಶಂಕುಸ್ಥಾಪನೆ ನೆರವೇರಿಸಿದರು. ಮೌಲಾನಾ ಅಬ್ದುಲ್ ರಝಾಕ್ ಮಲೇಶ್ಯಾ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಮಸೀದಿ ಖತೀಬ್ ಖಲೀಲುರ್ರಹ್ಮಾನ್ ದಾರಿಮಿ, ಮುದರ್ರಿಸ್ ಹಮೀದ್ ದಾರಿಮಿ, ಮಸೀದಿ ಅಧ್ಯಕ್ಷ ಎಸ್.ಎಂ. ಮುಹಮ್ಮದಾಲಿ ಶಾಂತಿಅಂಗಡಿ, ಕಾರ್ಯದರ್ಶಿ ಎಸ್. ಹಬೀಬುಲ್ಲಾ ಮೊದಲಾದವರು ಉಪಸ್ಥಿತರಿದ್ದರು.
- ಪಿ.ಎಂ.ಎ ಪಾಣೆಮಂಗಳೂರು ( ವರದಿಗಾರರು .ವಿಕೆ ನ್ಯೂಸ್)
No comments:
Post a Comment