Posted on January 7, 2012 by ರಫೀಕ್ ದಲ್ಕಾಜೆ,ಕೋಲ್ಪೆ
ಸಿಂಧಗಿ: ಬಿಜಾಪುರದ ಸಿಂಧಗಿಯ ಮಿನಿ ಸೌಧದ ಮುಂದೆ ಪಾಕಿಸ್ಥಾನದ ಧ್ವಜ ಹಾರಿಸಿದವರು ಆರ್.ಎಸ್.ಎಸ್ ನವರು ಶ್ರೀರಾಮ ಸೇನೆಯವರಲ್ಲ ಎಂದು ಸೇನೆಯ ಮುಖಂಡ ಪ್ರಮೋದ್ ಮುತಾಲಿಕ್ ಪ್ರತಿಕ್ರಿಹಿಸಿದ್ದಾರೆ. ಇದು ಆರ್.ಎಸ್.ಎಸ್ ನವರು ಎಸಗಿದ ಕೃತ್ಯವೆಂದು ಹೇಳುವುದಕ್ಕೆ ನನ್ನಲ್ಲಿ ಬಲವಾದ ಸಾಕ್ಷ್ಯಗಳಿವೆ ಎಂದು ನುಡಿದರು. ಈ ಬಗ್ಗೆ ಜಿಲ್ಲಾಡಳಿತ ಮತ್ತು ಪೋಲೀಸ್ ಇಲಾಖೆಗಳಿಗೆ ಮಾಹಿತಿ ಇದ್ದರೂ ಕೂಡ ರಾಜಕೀಯ ಪ್ರಭಾವದಿಂದ ಶ್ರೀರಾಮ ಸೇನೆಯ ಹೆಸರು ಕೆಡಿಸುವ ಉದ್ದೇಶದಿಂದ ಈ ಕೃತ್ಯ ಎಸಗಲಾಗಿದೆ ಎಂದು ಆರೋಪಿಸಿದರು.
ಜಿಲ್ಲೆಯಾದ್ಯಂತ ಕೋಮುಗಲಭೆ ಸೃಷ್ಟಿಸುವ ಉದ್ದೇಶದಿಂದ ಬಿಜಾಪುರದ ಸಿಂದಗಿಯಲ್ಲಿ ಪಾಕಿಸ್ಥಾನದ ಧ್ವಜ ಹಾರಿಸಲಾಗಿತ್ತು. ಪ್ರಕರಣಕ್ಕೆ ಸಂಬಂದಿಸಿದಂತೆ 6 ಜನರನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದರು.
ವರದಿ : ಎ.ಆರ್,ಹಳೆಯಂಗಡಿ
No comments:
Post a Comment