Sunday, 11 December 2011

೫ ವರ್ಷದ ಸವಿ ಸವಿ ನೆನಪಿನ ಸಂಭ್ರಮವನ್ನು ಆಚರಿಸಿಕೊಂಡ ‘ಮಂಗಳೂರು ಎಸೋಸಿಯೇಶನ್ ಸೌದಿ ಅರೇಬಿಯಾ’ (MASA)


೫ ವರ್ಷದ ಸವಿ ಸವಿ ನೆನಪಿನ ಸಂಭ್ರಮವನ್ನು ಆಚರಿಸಿಕೊಂಡ ‘ಮಂಗಳೂರು ಎಸೋಸಿಯೇಶನ್ ಸೌದಿ ಅರೇಬಿಯಾ’ (MASA)

ಹುಟ್ಟಿದ ನಾಡು,ನಮ್ಮ ಸಂಸ್ಕೃತಿ, ನಮ್ಮ ತನ ಹಾಗು ನಮ್ಮವರು ಅನ್ನೋ ಅಭಿಮಾನ. ನಾವು ಪ್ರಪಂಚದ ಯಾವ ಮೂಲೆಗೂ ಹೋದರು ನಮ್ಮನ್ನ ಹಿಂಬಾಲಿಸಿ ಕೊಂಡು ಬರುತ್ತೆ, ಅದರಲ್ಲೂ ಕರಾವಳಿಯ ಜನರಿಗೆ ನಮ್ಮವರು ಅನ್ನೋ ಪ್ರೀತಿ ಹೆಚ್ಚಾಗಿರುತ್ತೆ … ಅದಕ್ಕೆ ಸಾಕ್ಷಿ ಆಗಿರುವಂತೆ ಸೌದಿ ಅರೇಬಿಯಾ ದಲ್ಲಿ ಹುಟ್ಟಿಕೊಂಡ ಸಂಘ ಮಂಗಳೂರು ಎಸೋಸಿಯೇಶನ್ ಸೌದಿ ಅರೇಬಿಯಾ. ಈ ಸಂಸ್ಥೆಯು ೫ ನೇ ವಾರ್ಷಿಕೋತ್ಸವ ದ “ಸವಿನೆನಪು ” ದಿನಾಂಕ 08/೧೨/೨೦೧೧ ರಂದು ಸಂಜೆ 6 ಘಂಟೆಗೆ ದಮ್ಮಮ್ ಆಡಿಟೋರಿಯಂ ನಲ್ಲಿ ವಿಜೃಂಭಣೆ ಯಿಂದ ನಡೆಯಿತು.ಮಾಸ ಅಧ್ಯಕ್ಷ ರವಿ ಕರ್ಕೇರ ದೀಪ ಬೆಳಗಿಸಿ, ಸಂಘದ ಸದಸ್ಯರ ಸಮೂಹ ಗಾಯನದ ಮೂಲಕ ಉದ್ಘಾಟನೆ ಗೊಂಡಿತು.
ಆ ಬಳಿಕ ಉದ್ಘಾಟನಾ ಬಾಷಣ ಮಾಡಿದ ಅಧ್ಯಕ್ಷ ರವಿ ಕರ್ಕೇರ ಸಂಸ್ಥೆ ೫ ವರುಷಗಳಲ್ಲಿ ಬೆಳೆದು ಬಂದ ಹಾದಿಯನ್ನು ನೆರೆದ ಜನ ಸಮೂಹಕ್ಕೆ ಸವಿವರವಾಗಿ ವಿಸ್ತರಿಸಿದರು ..ಮಾಸ ಪ್ರಧಾನ ಕಾರ್ಯದರ್ಶಿ ವೀರಾಜ್ ಕುಮಾರ್ ಶೆಟ್ಟಿ ವಾರ್ಷಿಕ ಲೆಕ್ಕ ಪತ್ರ ಮಂಡನೆ ಮಾಡಿದರು. ದೀಪಾಲಂಕಾರಗೊಂಡ ವರ್ಣ ರಂಜಿತ ವೆಧಿಕೆಯಲ್ಲಿ ಲ್ಲಿ ಗಣ್ಯ ವ್ಯಕ್ತಿಗಳು ಆಸೀನರಾಗಿ ಸಂಘದ ಸ್ಥಾಪಕಾಧ್ಯಕ್ಷರಿಗೆ ಶಾಲು ಹೊದಿಸಿ ಹೂ ಗುಚ್ಛ ನೀಡಿ ಸನ್ಮಾನಿಸಿದರು.
ಅಲ್ಲದೆ ಸಂಸ್ಥೆಯು ಆಕಾಶದೆತ್ತರಕ್ಕೆ ಬೆಳೆಯಲು ಕಾರಣ ಕರ್ತರಾದ ಸಂಘದ ಎಲ್ಲಾ ಸದಸ್ಯರಿಗೂ ಸಂಸ್ಥೆಯು ಕಿರು ಕಾಣಿಕೆ ನೀಡಿ ಗೌರವಿಸಿದರು .೨೦೦೬ ರಲ್ಲಿ ಅಸ್ತಿತ್ವಕ್ಕೆ ಬಂದ ಈ ಸಂಸ್ಥೆ ಹಲವು ಬಡ ಕುಟುಂಬ , ಬಡ ವಿಧ್ಯಾರ್ಥಿಗಳನ್ನು ಗುರುತಿಸಿ ಆರ್ಥಿಕ ಸಹಾಯ ನೀಡಿ ಪ್ರೋತ್ಸಾಹಿಸಿದ ಹೆಗ್ಗಳಿಕೆ ಈ ಸಂಸ್ಥೆಯದು. ವರ್ಣ ರಂಜಿತ “:ಸವಿ ನೆನಪು ” ವೇದಿಕೆಯಲ್ಲಿ ಆಸಿನರಾಗಿದ ಘನ್ಯಾತಿ ವ್ಯಕ್ತಿಗಳ ಸಮ್ಮುಖದಲ್ಲಿ ಸಂಸ್ಥೆಯ ಕಿರು ಪರಿಚಯದ “ಸ್ಪಂದನ ” ಪುಸ್ತಕವನ್ನು ಅನಾವರಣಗೊಳಿಸಿದರು.
ಮಾಸ ೫ ವರ್ಷಗಳಿಂದ ಇಂದಿನ ವರೆಗೆ ನಡೆದು ಬಂದ ಹಾದಿಯ ವೆಬ್ ಸೈಟನ್ನು ಸಂಘದ ಅಧ್ಯಕ್ಷ ರವೀ ಕರ್ಕೇರ ರೈಟ್ ಕ್ಲಿಕ್ ಒತ್ತುವ ಮೂಲಕ ವಿಶ್ವದೆಲ್ಲೆಡೆ ಇರುವ ಕರಾವಳಿ ಜನತೆಗೆ ಸಮರ್ಪಣೆ ಮಾಡುವುದರಲ್ಲಿ ಯಶಸ್ವಿಯಾದರು.ಸಂಘದ ವತಿಯಿಂದ ನಡೆದ  ಆಟೋಟ ಸ್ಪರ್ಧೆ, ಫುಡ್ ಫೆಸ್ಟ್ ಗಳಲ್ಲಿ ವಿಜೇತರಾದ ತಂಡ ಗಳಿಗೆ ಬಹುಮಾನ ವಿತರಿಸಿದರು. ವರ್ಣ ರಂಜಿತ ಕಾರ್ಯಕ್ರಮಕ್ಕೆ ಆಗಮಿಸಿದ ರಾಜ್ಯದ ಹಾಗು ಹೊರ ರಾಜ್ಯಗಳಿಂದ ಬಂದ ಪ್ರೇಕ್ಷಕರಿಗೆ ಸವಿರುಚಿಯಾದ ಭೋಜನ ವ್ಯವಸ್ತೆಯನ್ನು ಸಂಸ್ಥೆಯು ಆಯೋಜಿಸಿತ್ತು.
ದೀಪಾಲಂಕಾರ ದಿಂದ ಕಂಗೊಲಿಸುತಿದ್ದ ಸವಿ ನೆನಪು ವೇದಿಕೆಯಲ್ಲಿ ಮಾಸ ಪ್ರತಿನಿಧಿಗಳ ಸಾಂಸ್ಕ್ರತಿಕ ಕಾರ್ಯಕ್ರಮ ಜನ ಮನ ಸೆಳೆಯಿತು. ಕಾರ್ಯ ಕ್ರಮದ ಕೊನೆ ಗಟ್ಟದಲ್ಲಿ ಮಾಸ ಸದಸ್ಯರಿಂದ ಕರಾವಳಿಯ ಸಂಸ್ಕೃತಿಯ ನ್ನು ಬಿಂಬಿಸುವ “ಕುಡ್ಲ ದರ್ಶನ ” ಕಾರ್ಯಕ್ರಮ ನೆರೆದ ಸಾವಿರಾರು ಮಂದಿಯನ್ನು ಕರಾವಳಿ ತೀರದ ನೆನಪನ್ನ ತನ್ನ ನೆನಪಿನಂಗಳದಲ್ಲಿ ನೆನಪಿಸುವಂತೆ ಮಾಡಿತು … ಮಾಸ ದ ಈ ಕಾರ್ಯಕ್ರಮ ತನ್ನ ವೇದಿಕೆಯ ಹೆಸರಾದ “ಸವಿ ನೆನಪು ” ರೀತಿಯಲ್ಲೇ ನೆರೆದವರ ಹೃದಯದಲ್ಲಿ ಸವಿ ಸವಿ ನೆನಪಾಗಿ ಉಳಿಯುವಂತೆ ಮಾಡುವಲ್ಲಿ ಯಶಸ್ವಿಯಾಯಿತು.
ಸಂಸ್ಥೆಯ ಸವಿವರವಾದ ವಿವರವನ್ನು ನೋಡಲು ಈ ಲಿಂಕ್ ಕ್ಲಿಕ್  ಮಾಡಿ  http://www.masame.org/

No comments:

Post a Comment