Sunday, 11 December 2011

ಬಂಟ್ವಾಳ ಎಸ್ ಡಿ ಪಿ ಐ ಕಾರ್ಯ ಕರ್ತರಿಗೆ ಹಲ್ಲೆ


ಬಂಟ್ವಾಳ ಎಸ್ ಡಿ ಪಿ ಐ ಕಾರ್ಯ ಕರ್ತರಿಗೆ ಹಲ್ಲೆ

 ಬಂಟ್ವಾಳ : ಇಲ್ಲಿನ ಮಿತ್ತ ಬೈಲ್  ಜುಮ್ಮಾ ಮಸೀದಿಯ ಬಳಿ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ( ಎಸ್ ಡಿ ಪಿ ಐ)  ದ ಕಾರ್ಯಕರ್ತರ ಮೇಲೆ  ಪುರಸಭಾ ಚಲೋ ಪ್ರತಿಭಟನೆಯ ಕರಪತ್ರ ಹಂಚುತ್ತಿದ್ದ ವೇಳೆ ಹಲ್ಲೆ ನಡೆಸಿದ ಘಟನೆ ವರದಿಯಾಗಿದೆ.
ಶುಕ್ರವಾರದ ನಮಾಜು ಮುಗಿಸಿ ಹಿಂತಿರುಗುತ್ತಿದ್ದ ಸ್ಥಳೀಯರಿಗೆ  ಎಸ್ ಡಿ ಪಿ ಐ ಕಾರ್ಯಕರ್ತರು ಪುರಸಭಾ ಚಲೋ ಪ್ರತಿಭಟನೆಯ ಕರ ಪತ್ರ ಹಂಚುತ್ತಿದ್ದರು. ಈ ಬಗ್ಗೆ ತಕರಾರು ಎತ್ತಿದ ಪುರಸಭಾ ಸದಸ್ಯ ಕಾಂಗ್ರೆಸ್ ನ ಇಸ್ಮಾಯಿಲ್ ಎಸ್ ಡಿ ಪಿ ಐ ಕಾರ್ಯಕರ್ತರಾದ  ಅಬ್ದುಲ್ ಖಾದರ್,  ಅಬೂಬಕ್ಕರ್ , ಅನ್ವರ್  ರೊಡನೆ  ಮಾತಿನ ಚಕಮಕಿಗೆ ಇಳಿದು ತಂಡದಿಂದ ಏಕಾಏಕಿ ಹಲ್ಲೆ ನಡೆಸಿದ್ದಾರೆ  ಎಂದು ಖಾದರ್ ಬಂಟ್ವಾಳ  ಪೋಲೀಸ್ ಠಾಣೆಯಲ್ಲಿ ಕೇಸು ದಾಖಲಿಸಿದ್ದಾರೆ.ಹಲ್ಲೆ ಗೊಳಗಾದವರನ್ನು ತುಂಬೆಯ  ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ವರದಿ : ಎ.ಆರ್,ಹಳೆಯಂಗಡಿ.

No comments:

Post a Comment