Sunday, 11 December 2011

ಆಝಾದ್ ರಾವ್ ಖಾನ್ – ಇದು ಸನ್ ಆಫ್ ಅಮೀರ್ ಖಾನ್ ಹೆಸರು


ಆಝಾದ್ ರಾವ್ ಖಾನ್ – ಇದು ಸನ್ ಆಫ್ ಅಮೀರ್ ಖಾನ್ ಹೆಸರು

ಮುಂಬೈ : ಬಾಲಿವುಡ್ ನಟ ಅಮೀರ್ ಖಾನ್ ಮತ್ತು ಕಿರಣ್ ರಾವ್ ದಂಪತಿಗಳು ತಮ್ಮ ಮಗನಿಗೆ ನಾಮಕರಣ ಮಾಡಿದ್ದಾರೆ. ಹೆಸರನ್ನು ಕಿರಣ್ ರಾವ್ ಆಯ್ಕೆ ಮಾಡಿದ್ದು ಮಗುವಿಗೆ ಆಝಾದ್ ರಾವ್ ಖಾನ್  ಎಂದು ಹೆಸರಿಡಲಾಗಿದೆ. ಅಮೀರ್ ಹಿರಿಯ ಅಜ್ಜ ಸ್ವಾತಂತ್ರ್ಯ ಹೋರಾಟಗಾರ ಮೌಲಾನಾ ಅಬ್ದುಲ್ ಕಲಾಂ ಆಝಾದ್ ಅವರ ನೆನಪಿಗಾಗಿ ಕಿರಣ್ ಈ ಹೆಸರು ಆಯ್ಕೆ ಮಾಡಿದ್ದಾಗಿ ಅಮೀರ್ ಸಾಮಾಜಿಕ ತಾಣ ಫೇಸ್ ಬುಕ್ ನಲ್ಲಿ ಬರೆದುಕೊಂಡಿದ್ದಾರೆ.
ಅಮೀರ್ ಖಾನ್ ಮೊದಲ ಪತ್ನಿ ರೀನಾಗೆ  ಇಬ್ಬರು ಮಕ್ಕಳಿದ್ದಾರೆ . ಅನಾರೋಗ್ಯ ಪೀಡಿತಳಾದ ರೀನಾ ಹಾಗೂ ಅಮೀರ್ ೨೦೦೨ ರಲ್ಲಿ ವಿಚ್ಚೇದನ ಪಡೆದುಕೊಂಡಿದ್ದರು . ೨೦೦೫ ರಲ್ಲಿ ಅಶುತೋಷ್ ಗೊವಾರಿಕರ್ ಅವರ ಲಗಾನ್ ಚಿತ್ರದ ಸಂದರ್ಭದಲ್ಲಿ ಪರಿಚಿತರಾಗಿದ್ದ ಸಹಾಯಕ ನಿರ್ದೇಶಕಿ ಕಿರಣ್ ರಾವ್ ಹಾಗೂ ಅಮೀರ್ ಖಾನ್ ಆನಂತರ  ವಿವಾಹವಾಗಿದ್ದರು.

No comments:

Post a Comment