ಮದ್ಯ ದೊರೆಯ ಶೋಕಿಗೆ ಬಲಿಯಾದ “ಕಿಂಗ್ ಫಿಷರ್ “
Posted on December 10, 2011 by ವಿಶ್ವ ಕನ್ನಡಿಗ ನ್ಯೂಸ್
ಮುಂಬೈ : ಒಂದು ಕಾಲದಲ್ಲಿ ಭಾರತದ ಅತೀ ಹೆಚ್ಚು ಗ್ರಾಹಕರನ್ನ ಪಡೆದ ಕಿಂಗ್ ಫಿಷರ್ ಏರ್ಲೈನ್ಸ್ ಇಂದು ತನ್ನ ಮೇಲೆ ಸಾಲದ ಹೊರೆಯನ್ನೇ ಹೊತ್ತುಕೊಂಡು ಹಾರಾಡುತ್ತಿದೆ . ಮದ್ಯ ದೊರೆ ವಿಜಯ್ ಮಲ್ಯ ಅವರ ಕನಸಿನ ಕೂಸಾಗಿದ್ದ ಕಿಂಗ್ ಫಿಷರ್ ಎನ್ನೋ ಹೆಸರನ್ನ ಮಲ್ಯ ಸಾಲದ ಹೊರೆಯನ್ನ ತುಂಬಲು ಅಡವಿಡುವ ತನಕ ತಲುಪಿದ್ದಾರೆ . ಕಿಂಗ್ ಫಿಷರ್ ಬ್ರಾಂಡ್ ಹೆಸರನ್ನ ಮಲ್ಯ ೪೧೧೧ ಕೋಟಿ ರೂ ಗಳಿಗೆ ಅಡವಿಟ್ಟಿದ್ದಾರೆ ಎನ್ನುವ ಸುದ್ದಿಯೂ ಇದೆ.
ಕಿಂಗ್ ಫಿಷರ್ ಏರ್ಲೈನ್ಸ್ ಸಾವಿರಾರು ಕೋಟಿ ರೂಗಳ ಸಾಲವನ್ನು ಹೊಂದಿದ್ದು ಈ ಹಿನ್ನೆಲೆಯಲ್ಲಿ ಪಡೆದುಕೊಂಡ ಸಾಲಕ್ಕೆ ಬದಲಾಗಿ ಮಲ್ಯ ಮುಂಬೈನಲ್ಲಿ ಇರುವ ತನ್ನ ಕಿಂಗ್ ಫಿಷರ್ ಹೌಸ್, ಗೋವಾ ದಲ್ಲಿ ಇರುವ ಕಿಂಗ್ ಫಿಷರ್ ವಿಲ್ಲಾ, ಹಾಗು ತನ್ನ ಬಲಿ ಇರುವ ಹೆಲಿಕಾಫ್ಟರ್ ಗಳನ್ನ ಒತ್ತೆ ಇಟ್ಟಿದ್ದಾರೆ. ಇದು ಸಾಲದೆಂಬಂತೆ ೨೪೮ ರೋ ಕೋಟಿ ಸಾಲಕ್ಕೆ ತಾವೇ ವಯುಕ್ತಿಕವಾಗಿ ಭದ್ರತೆ ನೀಡಿದ್ದಾರೆ . ವಿಜಯ್ ಮಲ್ಯ ಅವರ ಅತಿಯಾದ ಶೋಕಿ ಗೆ ಕಿಂಗ್ ಫಿಷರ್ ಅನ್ನೋ ಹೆಸರು ತನ್ನ ದೊರೆಯ ಸಾಲವನ್ನ ತೀರಿಸಲು ಬ್ಯಾಂಕ್ ಮೆಟ್ಟಿಲು ಹತ್ತೋ ತರ ಆಗಿರೋದು ವಿಪರ್ಯಾಸ ಅನ್ನಿಸಿ ಬಿಡುತ್ತೆ .
ನಿತಿನ್ ರೈ ಕುಕ್ಕುವಳ್ಳಿ ( ವರದಿಗಾರರು .ವಿಕೆ ನ್ಯೂಸ್)
No comments:
Post a Comment