Saturday, 10 December 2011

ಜನಾಕರ್ಷಣೆ ಮೂಲಕ ಅದ್ದೂರಿಯಾಗಿ ನಡೆಯುತ್ತಿರುವ ದುಬೈ ಫಿಲಂ ಫೆಸ್ಟಿವಲ್ ೨೦೧೧


ಜನಾಕರ್ಷಣೆ ಮೂಲಕ ಅದ್ದೂರಿಯಾಗಿ ನಡೆಯುತ್ತಿರುವ ದುಬೈ ಫಿಲಂ ಫೆಸ್ಟಿವಲ್ ೨೦೧೧

 
ದುಬೈ : ಡಿಸೆಂಬರ್ ಏಳರಿಂದ ಆರಂಭಗೊಂಡ ದುಬೈ ಫಿಲಂ ಫೆಸ್ಟಿವಲ್ ವಿಶ್ವದ ಮೂಲೆ ಮೂಲೆಗಳ ಸಿನೆಮಾ ಪ್ರಿಯರನ್ನು ಆಕರ್ಷಿಸುವಲ್ಲಿ ಯಶಸ್ವಿಯಾಗಿದೆ. ಈ ಉತ್ಸವ ಡಿಸೆಂಬರ್ ೧೪ ರ ವರೆಗೆ ನಡೆಯಲಿದೆ. ಹಾಲಿವುಡ್ ನಟ ಟಾಮ್ ಕ್ರೂಸ್ ಮತ್ತು   ಬಾಲಿವುಡ್ ತಾರೆಯರಾದ ಶಾರುಖ್ ಖಾನ್ ಹಾಗೂ ಪ್ರಿಯಾಂಕ ಚೋಪ್ರಾ  ಈ ಚಲನ  ಚಿತ್ರೋತ್ಸವದ ಪ್ರಮುಖ ಆಕರ್ಷಣೆಯಾಗಿದ್ದಾರೆ.
 
Priyanka Chopra (File photo)
 
ಹಾಲಿವುಡ್ , ಬಾಲಿವುಡ್ ಜೊತೆ ಅರೇಬಿಕ್ ಚಿತ್ರ ರಂಗದ ಹಲವು ನಟ ನಟಿಯರು ಈ ಉತ್ಸವದಲ್ಲಿ ಪಾಲ್ಗೊಳ್ಳಲು ದುಬೈ ನಗರಕ್ಕೆ ಬಂದಿದ್ದು ಚಿತ್ರ ರಂಗದ ವಿಶ್ವವೇ ಒಂದು ಕಡೆ ಸೇರಿದಂತಾಗಿದೆ. ಬಾಲಿವುಡ್ ಹಿರಿಯ ನಟ ಅನಿಲ್ ಕಪೂರ್ ಸಹ ಉತ್ಸವದಲ್ಲಿ ಪಾಲ್ಗೊಂಡಿದ್ದಾರೆ .

No comments:

Post a Comment