Saturday, 10 December 2011

೭೦ ಲಕ್ಷ ರೂ ಕಾರು ಉಡುಗೊರೆಯಾಗಿ ಪಡೆದ “ಬಾಡಿಗಾರ್ಡ್”


೭೦ ಲಕ್ಷ ರೂ ಕಾರು ಉಡುಗೊರೆಯಾಗಿ ಪಡೆದ “ಬಾಡಿಗಾರ್ಡ್”

ಮುಂಬೈ : ಗಲ್ಲಾ ಪೆಟ್ಟಿಗೆ  ಲೂಟಿ ಹೊಡೆದ  ಬಾಲಿವುಡ್  ಚಿತ್ರ  “ಬಾಡಿಗಾರ್ಡ್” ಚಿತ್ರದ  ನಾಯಕ  ಸಲ್ಮಾನ್ ಖಾನ್  ಅವರಿಗೆ ಜರ್ಮನಿ  ಕಾರು ತಯಾರಿಕ ಕಂಪೆನಿ  “ಆಡಿ”  ಹೊಚ್ಚ  ಹೊಸತಾದ ಎಸ್ ಯು ವಿ  ಕಾರನ್ನು ಕೊಡುಗೆಯಾಗಿ  ನೀಡಿದೆ . ಈ ಕಾರಿನ  ಬೆಲೆ ೭೦ ಲಕ್ಷ ರೂಪಾಯಿ ಗಳಾಗಿದ್ದು  ಅಧುನಿಕ  ತಂತ್ರಜ್ಞಾನ  ಗಳನ್ನ  ಹೊದಿದೆ . ಸಲ್ಮಾನ್  ತನ್ನ ಚಿತ್ರ  “ಬಾಡಿಗಾರ್ಡ್” ನಲ್ಲಿ ಇದೇ  ಮಾದರಿಯ ಕಾರನ್ನು  ಬಳಸಿಕೊಂಡಿದ್ದರು ಇದನ್ನ ಗಮನಿಸಿದ  ಜರ್ಮನಿ ಕಂಪೆನಿ  ಸಲ್ಮಾನ್ ಗೆ  ಈ ಕಾರನ್ನು ಉಡುಗೊರೆಯಾಗಿ  ನೀಡಿದೆ ..
 
ಮುಂಬೈನ  ಪ್ರತಿಷ್ಟಿತ  ಹೋಟೆಲ್  ತಾಜ್ ಲ್ಯಾಂಡ್  ಎಂಡ್  ನಲ್ಲಿ  ಆಡಿ  ಕಂಪೆನಿ  ಯ ಭಾರತ  ಮುಖ್ಯಸ್ಥ  ಮೈಕೆಲ್ ಪರ್ಚಸ್ಕೆ ಸಲ್ಮಾನ್ ಖಾನ್ ಅವರಿಗೆ  ಕಾರ್ ಅನ್ನು  ಉಡುಗೊರೆ ಯಾಗಿ ನೀಡಿದರು ..ಕಾರ್  ಉಡುಗೊರೆ ಯಾಗಿ ಪಡೆದ  ಸಲ್ಮಾನ್ ಮಾತನಾಡಿ  ಕಾರ್ ಬಹಳ ಸುಂದರವಾಗಿದೆ  ಪ್ರತಿ ಸಿನಿಮಾದಲ್ಲಿ  ನಟಿಸಿದ ಬಳಿಕ ಕಾರ್ ಸಿಗುವಂತಾದರೆ  ತುಂಬಾ ಚೆನ್ನಾಗಿರುತ್ತೆ  ಎಂದು ಹಾಸ್ಯ  ಚಟಾಕಿ  ಹಾರಿಸಿದರು. ಪತ್ರಕರ್ತರೊಬ್ಬರು ಸಲ್ಮಾನ್ ಅವರನ್ನ “ಮುಂಚೆ  ನೀವು ಅನೇಕ  ಬಾರಿ ಕಾರು ಅಪಘಾತ  ಮಾಡಿದ್ದಿರಲ್ಲ  ಎಂಬ ಪ್ರಶ್ನೆ ಕೇಳಿದಾಗ ಸಲ್ಮಾನ್   ವಾಹನ ಓಡಿಸುವ  ಅನುಭವ  ನನಗೆ ಚೆನ್ನಾಗಿದೆ  ಎಂದು ಮುಗುಳ್ನಕ್ಕರು .
ನಿತಿನ್ ರೈ ಕುಕ್ಕುವಳ್ಳಿ ( ವರದಿಗಾರರು .ವಿಕೆ ನ್ಯೂಸ್)

No comments:

Post a Comment