Saturday, 10 December 2011

ಮಂಗಳೂರು ಖಾಝಿ ಸಾವು ಪ್ರಕರಣ ಆತ್ಮಹತ್ಯೆ ಎಂದ ಸಿ.ಬಿ.ಐ


ಮಂಗಳೂರು ಖಾಝಿ ಸಾವು ಪ್ರಕರಣ ಆತ್ಮಹತ್ಯೆ ಎಂದ ಸಿ.ಬಿ.ಐ

ಮಂಗಳೂರು : ಇಲ್ಲಿನ ಖಾಝಿಯಾಗಿದ್ದ ಸಿ.ಎಂ ಅಬ್ದುಲ್ಲಾ ಉಸ್ತಾದರ ನಿಗೂಢ ಸಾವು ಪ್ರಕರಣವನ್ನು ತನಿಖೆ ನಡೆಸಿದ ಸಿ.ಬಿ.ಐ ತಂಡ ಆತ್ಮಹತ್ಯೆ ಎಂದು ವರದಿ ಸಲ್ಲಿಸಿದೆ. ಖಾಝಿಯವರಿಗೆ ವಾಸಿಯಾಗದಂತಹಾ ಕಾಯಿಲೆಗಳಿತ್ತು ಅವುಗಳಿಂದ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಸಿ.ಬಿ.ಐ ವರದಿಯಲ್ಲಿ ವಿವರಿಸಿದೆ.ಖಾಝಿಯವರು ಮಹಾನ್ ಪಂಡಿತರು ಆತ್ಮಹತ್ಯೆ ಮಹಾ ಪಾಪ ಎಂಬ ಅರಿವಿಲ್ಲದವರೆನಲ್ಲ ಅವರು ಆತ್ಮಹತ್ಯೆ ಮಾಡಿಕೊಳ್ಳುವವರಲ್ಲ ಎಂದು ಮೌಲವಿಗಳು ಮತ್ತು ಸಾರ್ವಜನಿಕ ವಲಯದಿಂದ ಕೇಳಿಬರುತ್ತಿವೆ.
ಜನಾಂದೋಲನಕ್ಕೆ ಸಿದ್ದತೆ: ಪ್ರಕರಣವು ಮೊದಲು ಸರಿಯಾದ ಪಥದಲ್ಲೇ ಸಾಗುತ್ತಿತ್ತು ನಂತರ ಯಾರದೋ ಒತ್ತಡಕ್ಕೆ ಮಣಿದು ಒಂದು ಹಂತದ ತನಿಖೆಯನ್ನು ನಡೆಸಿ ಸಿ.ಬಿ.ಐ ಆತ್ಮಹತ್ಯೆಯೆಂದು ಬಿಂಬಿಸುತ್ತಿದೆ ಅಲ್ಲದೆ ಖಾಝಿಯವರ ಆತ್ಮಹತ್ಯೆ ಎಂದು ಹೇಳಿ ಅಪಚಾರ ವೆಸಗಿದೆಯೆಂದು ಕ್ರಿಯಾ ಸಮೀತಿ ಆರೋಪಿಸುತ್ತಿದೆ .ಈತನ್ಮಧ್ಯೆ ಈ ಕೃತ್ಯದ ಹಿಂದಿರುವ ಶಕ್ತಿಗಳನ್ನು ಬಯಲಿಗೆ ಎಳೆಯುವ ಸಲುವಾಗಿ ನಾಳೆ ಕಾಸರಗೋಡಿನಲ್ಲಿ ಜನಾಂದೋಲನ ಹೋರಾಟ ಸಮಾವೇಶ ನಡೆಸಲಾಗುತ್ತಿದ್ದು ನಂತರದ ದಿನಗಳ ಲ್ಲಿ ವಿವಿದ ರೀತಿಯ ಪ್ರತಿಭಟನೆಗಳನ್ನು ಹಮ್ಮಿಕೊಳ್ಳಲಾಗುವುದೆಂದು ಕ್ರಿಯಾ ಸಮೀತಿಯ ಸದಸ್ಯರು ತಿಳಿಸಿದ್ದಾರೆ.
ಈ ಪ್ರಕರಣಕ್ಕೆ ಸಂಭಂದ ಪಟ್ಟಂತೆ ಎಲ್ಲಾ ಪೋಲೀಸ್ ಅಧಿಕಾರಿಗಳನ್ನು ತನಿಖೆ ನಡೆಸಬೇಕು ಮತ್ತು ಖಾಝಿ ಸಾವು ಪ್ರಕರಣವನ್ನು ಮರುತನಿಖೆಗೆ ವಹಿಸಬೇಕೆಂದು ಕ್ರಿಯಾ ಸಮೀತಿ ಒತ್ತಾಯಿಸಿದೆ. ೨೦೧೦ ರ ಪೆಬ್ರವರಿ ೧೫ ರಂದು ಮುಂಜಾನೆ ಕಾಜಿಯವರು ಮೃತ ದೇಹವು ಕೀಯೂರು ಕಡಲ ತೀರದಲ್ಲಿ ಕಂಡು ಬಂದಿತ್ತು.
ವರದಿ :ಎ.ಆರ್,ಹಳೆಯಂಗಡಿ.

No comments:

Post a Comment