Thursday, 8 December 2011

ಹೊಸ ವರುಷದ ಸಂಭ್ರಮಾಚರಣೆಗೆ ಪ್ರವಾಸಿಗರನ್ನ ಕೈ ಬೀಸಿ ಕರೆಯುತ್ತಿರುವ ಗೋವಾ


ಹೊಸ ವರುಷದ ಸಂಭ್ರಮಾಚರಣೆಗೆ ಪ್ರವಾಸಿಗರನ್ನ ಕೈ ಬೀಸಿ ಕರೆಯುತ್ತಿರುವ ಗೋವಾ

ಪಣಜಿ :  ಭಾರತ  ಪ್ರೇಕ್ಷಣಿಯ  ಸ್ಥಳಗಳ ತವರೂರು  . ಕನ್ಯಾಕುಮಾರಿಯಿಂದ  ಕಾಶ್ಮೀರದ ವರೆಗೆ  ಅದೆಷ್ಟೋ  ಮನ ಸೆಳೆಯುವಂತಹ  ಸ್ಥಳಗಳನ್ನು ನಾವು ನೋಡಬಹುದು  . ಅದರಲ್ಲಿ ಅತೀ ಹೆಚ್ಚು ವಿದೇಶಿಯರನ್ನು   ಆಕರ್ಷಿಸುವ   ಸ್ಥಳ  ಅಂದರೆ “ಗೋವಾ “. ಅರಬಿ  ಸಮುದ್ರದ ಅಂಚಿನಲ್ಲಿ ಇರುವ ಗೋವಾ    ಭಾರತದ  ಕಡಲುಗಳ ರಾಜ್ಯ ಎಂದೇ  ಪ್ರಸಿದ್ದಿ ಪಡೆದ ದ್ವೀಪ ರಾಜ್ಯ. ಗೋವಾ ಈಗ  ಹೊಸ ವರುಷದ  ಸಂಭ್ರಮಕ್ಕೋಸ್ಕರ  ಪ್ರವಾಸಿಗರ ಬರುವಿಕೆಗಾಗಿ  ಕಾಯುತ್ತಿದೆ .
ಪೋರ್ಚುಗೀಸರು ಕಂಡು ಹುಡುಕಿದ ಈ ಸುಂದರ ದ್ವೀಪ ರಾಷ್ಟ್ರ  ಭಾರತ  ಸ್ವಾತಂತ್ರ ಪಡೆದ ನಂತರ ಕೂಡ ಪೋರ್ಚುಗೀಸರ ವಶದಲ್ಲಿ ಇತ್ತು.  ೧೯೬೧  ರಲ್ಲಿ ಭಾರತದ ವಶವಾದ  ಗೋವಾ ಭಾರತದಲ್ಲಿ  ಅತಿ ಹೆಚ್ಚು ವಿದೇಶಿಯರನ್ನ ಪ್ರವಾಸಿಗರನ್ನಾಗಿ  ಪಡೆವ  ಪ್ರವಾಸಿ ತಾಣ ಎನ್ನಿಸಿಕೊಂಡಿತು . ಗೋವಾ ದ ವಿಶೇಷತೆ  ಅಂದರೆ “ಬೀಚ್ ” . ಗೋವಾ ದಲ್ಲಿ ಹೊಸ ವರುಷದ ಸಂಭ್ರಮ ದೇಶದ ಎಲ್ಲಾ ಕಡೆ  ನಡೆಯುವ  ಹೊಸ ವರುಷದ ಆಚರಣೆಗಿಂತ ವಿಭಿನ್ನ ಎನ್ನಬಹುದು . ಗೋವಾ  ದಲ್ಲಿ ಅನೇಕ  ಬೀಚ್  ಗಳಿವೆ  ಅಂಜುನಾ   ಬೀಚ್  , ಭಾಗಾ   ಬೀಚ್  , ಕೊಲ್ವಾ   ಬೀಚ್  ಡೋನೋ ಪೌಲ   ಬೀಚ್   ಸೇರಿದಂತೆ  ಅನೇಕ ಸಮುದ್ರ ತೀರಗಳು  ಹೊಸ ವರುಷದ ಸ್ವಾಗತಕ್ಕೆ   ಭರದ  ಸಿದ್ದತೆ ನಡೆಸಿದೆ .
 
ಹೊಸ ವರುಷದ ಆಚರಣೆ  ಸಂದರ್ಭದಲ್ಲಿ   ಇಲ್ಲಿ ಸೇರುವ  ಜನರಲ್ಲಿ   ಶೇಕಡಾ  ೮೦ % ಜನ  ವಿದೇಶಿಯರು . ಪ್ರಪಂಚದ ನಾನಾ ಮೂಲೆಗಳಿಂದ   ಹೊಸ ವರುಷದ  ಸಂಭ್ರಮವನ್ನ ಅದ್ದೂರಿ  ಯಾಗಿ ಆಚರಿಸಲು ಜನ ಇಲ್ಲಿಗೆ  ಬರುತ್ತಾರೆ . ಹಿಂದಿ ಚಿತ್ರ ರಂಗದ  ದಂಡೇ   ಇಲ್ಲಿ ಹೊಸ ವರುಷದ ಪ್ರಯುಕ್ತ ಕಾರ್ಯಕ್ರಮ  ನೀಡಲು ಸೇರಿರುತ್ತೆ  . ಮದ್ಯ  ಮಾರಟಕ್ಕೆ  ಪೂರ್ಣ ತೆರಿಗೆ  ವಿನಾಯಿತಿ ನೀಡಿರುವ ಇಲ್ಲಿನ ಸರಕಾರ  ಪ್ರವಾಸೋದ್ಯಮದಿಂದಾನೆ  ಕೋಟ್ಯಂತರ ರೂಪಾಯಿ  ಆದಾಯ ಪಡೆಯುತ್ತಿದೆ . ಹೊಸವರುಷದ ಅಚರಣ ಸಂದರ್ಬದಲ್ಲಿ  ಇಲ್ಲಿ ವಸತಿಗೃಹ  ಸುಮಾರು  ೨ ತಿಂಗಳ ಮುಂಚೆಯೇ   “ಹೌಸ್  ಫುಲ್ ” ಎನ್ನಿಸಿ  ಕೊಳ್ಳುತ್ತದೆ   .
 
ಈ ಸಂದರ್ಭದಲ್ಲಿ  ಇಲ್ಲಿ ೫ ಸ್ಟಾರ್  ರೂಂ ನ ಬೆಲೆ  ಒಂದು ದಿನಕ್ಕೆ  ಕೇವಲ  ೫೫,೦೦೦  ರೂಪಾಯಿ … ಈ  ದಿನಗಳಲ್ಲಿ ಲಕ್ಷಾಂತರ ಜನ ಸೇರುವುದರಿಂದ   ಕೆಲವೊಮ್ಮೆ ರೂಂ ಸಿಗದೇ  ಬಿಚ್  ಗಳಲ್ಲೇ ಮಲಗೋ ಜನರನ್ನ ನಾವು ಡಿಸೆಂಬರ್  ೩೧ ನೆ ತಾರೀಖು  ರಾತ್ರಿ  ನೋಡಬಹುದು .. ಆ ದಿನ ರಾತ್ರಿ  ಪಬ್  ಡಾನ್ಸ್ , ಡಿಸ್ಕೋ ಥೆಕ್  ಹಾಗು ಕೈಯಲ್ಲೊಂದು  ಬೀರ್  ಹಿಡಿದುಕೊಂಡು  ಈ ಪ್ರಪಂಚವನ್ನೇ ಮರೆಯುವ ಜನ ಹೊಸ ವರುಷದ ಆಚರಣೆ ಯಲ್ಲಿ ತೇಲುತ್ತಿರುತ್ತಾರೆ .  ಒಂದೇ ನಿಮಿಷ ನಾವು ಥಟ್ಟನೆ  ನೋಡುವಾಗ ನಾವು ಭಾರತದಲ್ಲಿ  ಇದ್ದಿವಾ   ಅನ್ನೋ ಅನುಮಾನ ನಮ್ಮ್ಮನ್ನ  ಕಾಡಿದರೂ  ಆಶ್ಚರ್ಯ ಪಡಬೇಕಾಗಿಲ್ಲ  .

ನಿತಿನ್ ರೈ ಕುಕ್ಕುವಳ್ಳಿ
ಹೊಸವರುಷ ದ  ಸಂಭ್ರಮ  ಹೇಗಿರುತ್ತೆ ಅಂದರೆ  ಗೋವಾ  ದ  ಒಂದುವರುಷದ  ಆದಾಯ ಒಂದು ದಿನದಲ್ಲಿ  ಪಡೆಯುತ್ತಾರೆ  ಇಲ್ಲಿನ ವ್ಯಾಪಾರಸ್ಥರು …..  ಇತ್ತೀಚಿನ  ಕೆಲವು ವರ್ಷದಿಂದ   ಇಲ್ಲಿನ  ಸರಕಾರ  ಪ್ರವಾಸಿಗರು ಬಳಸುವ  ಬಟ್ಟೆಗಳ ಬಗ್ಗೆ ನಿಗಾ ವಹಿಸಿದೆ  . ಆದರೆ  ಅದನ್ನ ಪಾಲಿಸುವವರನ್ನ  ನಾವು ನೋಡಲು ಸಾದ್ಯವಿಲ್ಲ  . ಅದರಲ್ಲೂ ವಿದೇಶಿಯರು  ಇದನ್ನ ಕಿಂಚಿತ್ತು ಅನುಸರಿಸುದಿಲ್ಲ  ಕಡಲ ತೀರದಲ್ಲಿ    ಮೈ  ಮರೆತು ತನ್ನಷ್ಟಕ್ಕೆ ತಾನು ಅರಬಿ ಸಮುದ್ರದಿಂದ  ಬೀಸುವ ತಂಪಗಿನ ಗಾಳಿಯನ್ನು ಆಸ್ವಾದಿಸಿದರೆ  ಈ ಪ್ರಪಂಚವನ್ನೇ ಮರೆತು ಬಿಡುತ್ತಾರೆ ..
ಗೋವಾ ದ ಇನ್ನೊಂದು ವಿಶೇಷ ಅಂದರೆ  “ಕಿಂಗ್ಸ್ “  ..   ಅಂದರೆ ಗೋವಾ  ಬೀರ್   ಇದು ಸಿಗುದು  ಗೋವಾ ದಲ್ಲಿ ಮಾತ್ರ . ಅತಿ ಕಡಿಮೆಗೆ  ಸಿಗೋ  ಈ ಬೀರ್  ಹೊಸ ವರುಷದ ಸಮಯದಲ್ಲಿ ಲಕ್ಷಾನು ಗಟ್ಟಲೆ ಮಾರಾಟ ವಾಗುತ್ತದೆ …. ಹೀಗೆ ಗೋವಾ ದಲ್ಲಿ ಅನೇಕ ವಿಶೇಷತೆ ಹೊಸ ವರುಷದ  ಸಂದರ್ಭದಲ್ಲಿ  ನೋಡಬಹುದು  .  ಈ ವರುಷದ  ಸಮೀಕ್ಷೆ ಪ್ರಕಾರ . ಹೊಸವರುಷದ ಸ್ವಾಗತ ಕ್ಕೆ  ಗೋವಾ ದಲ್ಲಿ ಹಿಂದಿನ ಎಲ್ಲ ವರುಷ ಬಾಗವಹಿಸಿದ ಜನರಿಗಿಂತ  ಅತಿ ಹೆಚ್ಚು   ಜನ ಬರಲಿದ್ದಾರೆ ಎನ್ನಲಾಗುತ್ತಿದೆ .ಏನೇ  ಇರಲಿ ಭಾರತದಂತ ಸುಸಂಸ್ಕೃತ  ರಾಷ್ಟ್ರ ದಲ್ಲಿ  ಹೊಸ ವರುಷ  ಆಚರಣೆ  ಯಾವ ರೀತಿ ನಡಯುತ್ತಿದೆ  ಇನ್ನು ಮುಂದಿನ  ದಿನಗಳಲ್ಲಿ  ಯಾವ ರೀತಿ  ನಡೆಯಬಹುದು  ಅನ್ನೋದನ್ನ  ಊಹಿಸಲು  ಮಾತ್ರ ಸಾದ್ಯವಿಲ್ಲ .
ನಿತಿನ್ ರೈ ಕುಕ್ಕುವಳ್ಳಿ ( ವರದಿಗಾರರು. ವಿಕೆ ನ್ಯೂಸ್)

No comments:

Post a Comment