ಮಂಗಳೂರು : ಕಂಕನಾಡಿ ಆಸ್ಪತ್ರೆಯಲ್ಲಿ ನಕಲಿ ಮಹಿಳಾ ಡಾಕ್ಟರ್ ಬಂಧನ
Posted on December 13, 2011 by ಅಶ್ರಫ್ ಮಂಜ್ರಾಬಾದ್, ಸಕಲೇಶಪುರ
ಮಂಗಳೂರು : ಇಲ್ಲಿನ ಫಾದರ್ ಮುಲ್ಲರ್ ಆಸ್ಪತ್ರೆಯಲ್ಲಿ ನಕಲಿ ಮಹಿಳಾ ವೈದ್ಯೆಯನ್ನು ಪೊಲೀಸರು ಬಂಧಿಸಿದ್ದಾರೆ. ಕಳೆದ ಒಂದು ವಾರಗಳಿಂದ ಈಕೆ ಆಸ್ಪತ್ರೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದು ಇದು ಯಾರ ಗಮನಕ್ಕೂ ಬಂದಿರಲಿಲ್ಲ. ಆದರೆ ಇಂದು ರೋಗಿಯೊಬ್ಬರಿಂದ ಐನೂರು ರೂಪಾಯಿ ವಸೂಲಿ ಮಾಡುವಾಗ ಈಕೆಯನ್ನು ಗಮನಿಸಿದ ಸಿಬ್ಬಂದಿ ಕೂಡಲೇ ಭದ್ರತಾ ಸಿಬ್ಬಂದಿಗಳ ಗಮನಕ್ಕೆ ತಂದಿದ್ದಾರೆ. ಆನಂತರ ವಿಚಾರಣೆ ನಡೆಸಿದಾಗ ಈಕೆ ಆಸ್ಪತ್ರೆಯ ವೈದ್ಯೆ ಅಲ್ಲ . ಈಕೆ ನಕಲಿ ವೈದ್ಯೆ ಎಂಬುವುದು ತಿಳಿದು ಬಂತು .
ಆನಂತರ ಈಕೆಯನ್ನು ಪೋಲಿಸ್ ವಶಕ್ಕೆ ಒಪ್ಪಿಸಲಾಗಿದ್ದು ವಿಚಾರಣೆಯ ವೇಳೆಯಲ್ಲಿ ಈಕೆ ತನ್ನ ಹೆಸರು ಐಶ್ವರ್ಯಾ ರೈ ಎಂದು ಹೇಳಿದ್ದಾಳೆ. ವಿಟ್ಲ ನಿವಾಸಿಯಾದ ಈಕೆ ಮುಳ್ಳೇರಿಯಾದಲ್ಲಿ ಪ್ರಥಮ ಪಿಯುಸಿ ವರೆಗೆ ಓದಿದ್ದಾಳೆ . ಡಾಕ್ಟರ್ ಥರ ಬಿಳಿ ಕೋಟು , ಕೊರಳಿಗೆ ಸೇತಸ್ಕೊಪ್ ಧರಿಸಿ ಬಡ ರೋಗಿಗಳನ್ನು ಏಮಾರಿಸಿದ ಈ ನಕಲಿ ಡಾಕ್ಟರ್ ಈಗ ಪೋಲೀಸರ ವಶವಾಗಿದ್ದಾಳೆ .
No comments:
Post a Comment