ಬ್ರಿಡ್ಜುಸ್ಟೋನ್ ರವರಿಂದ ಗಾಳಿಯಿಲ್ಲದ ಗಾಲಿ… ಇದುವೆ ಏರ್ ಲೆಸ್ ಟೈರ್
Posted on December 14, 2011 by ಸಲೀಂ,ಅಮ್ಚಿನಡ್ಕ,ಪುತ್ತೂರು.
ಗಾಳಿ ಇಲ್ಲದೇ ಜೀವಸಂಕುಲ ಬದುಕುವುದಿಲ್ಲ ನಿಜ. ಅದೇ ರೀತಿ ಗಾಲಿಯಲ್ಲಿ ಗಾಳಿ ಇಲ್ಲದಿದ್ದರೆ ವಾಹನ ಸವಾರಿ ಕಷ್ಟ. ಆದರೆ ಜಪಾನಿನ ಜನಪ್ರಿಯ ಟೈರು ಕಂಪನಿ ಬ್ರಿಡ್ಜ್ ಸ್ಟೋನ್ ಗಾಲಿಯ ಗಾಳಿಗೆ ಗೋಲಿ ಹೊಡೆದಿದೆ. ಕಂಪನಿಯು ನೂತನ ಏರ್ ಲೆಸ್ ಟೈರನ್ನು ಪರಿಚಯಿಸಿದೆ. ಟ್ಯೂಬ್ ಲೆಸ್ ಟೈರಿನ ನಂತರ ಅಭಿವೃದ್ಧಿಪಡಿಸಲಾಗಿರುವ ಏರ್ ಲೆಸ್ ಟೈರು ಹಲವು ಅನುಕೂಲಗಳನ್ನು ಹೊಂದಿದೆ. ನೂತನ ಏರ್ ಲೆಸ್ ಕಾನ್ಸೆಪ್ಟ್ ಟೈರ್ ಸಾಂಪ್ರದಾಯಿಕ ಟೈರುಗಳಿಗಿಂತ ಹೆಚ್ಚು ಸುರಕ್ಷಿತ ಮತ್ತು ಪರಿಸರ ಸ್ನೇಹಿ.
ಇದು ಶೇಕಡ 100ರಷ್ಟು ಪುನರ್ ಬಳಕೆ ಮಾಡಬಹುದಾದ ಟೈರ್. ಏರ್ ಪ್ರೆಷರ್ ಇರಬೇಕಾದ ಸ್ಥಳದಲ್ಲಿ ವಿಶೇಷ ಲೇಯರ್ ಇದ್ದು, ಇದು ಗಾಳಿಯಿರುವ ಗಾಲಿಯಂತೆ ಕಾರ್ಯನಿರ್ವಹಿಸುತ್ತದೆ.
ಈ ಟೈರಿನ ಮುಖ್ಯ ಅನುಕೂಲವೆಂದರೆ ಈ ಟೈರು ಪಂಕ್ಚರ್ ಆಗುವುದಿಲ್ಲ. ಟೈರು ಪಂಕ್ಚರ್ ಆಗುವುದು ರಸ್ತೆಯಲ್ಲಿ ಅಪಘಾತ ಹೆಚ್ಚಲು ಪ್ರಮುಖ ಕಾರಣವಾಗಿದೆ. ಏರ್ ಲೆಸ್ ಟೈರಿನಲ್ಲಿ ಗಾಲಿ ಟ್ಯೂಬ್ ಇದ್ದರೆ ತಾನೇ ಪಂಕ್ಚರ್ ಆಗೋದು. ಹೀಗಾಗಿ ಇದು ಹೆಚ್ಚು ಸುರಕ್ಷಿತ.
ಈ ಕಾನ್ಸೆಪ್ಟ್ ಟೈರನ್ನು ಅಳವಡಿಸಲು ವಾಹನಗಳಿಗೆ ವಿಶೇಷ ಚಾಸೀ ಅಥವಾ ಸಸ್ಪೆನ್ಷನ್ ಅಗತ್ಯವಿಲ್ಲ. ಮಾಮೂಲಿ ಟೈರುಗಳಂತೆ ಇದನ್ನು ವಾಹನಗಳಿಗೆ ಅಳವಡಿಸಬಹುದಾಗಿದೆ. ಈ ಟೈರು ಶೀಘ್ರದಲ್ಲಿ ಭಾರತಕ್ಕೆ ಆಗಮಿಸಿದರೆ ಗಾಲಿಗೆ ಗಾಳಿ ಹೊಡೆಯುವ ಕಷ್ಟವಿಲ್ಲ.
No comments:
Post a Comment