ಗ್ಲಾಮರ್ ಕಳೆದುಕೊಳ್ಳುತ್ತಿದ್ದಾಳೆ ಗ್ಲಾಮರಸ್ ಟೆನಿಸ್ ತಾರೆ
Posted on December 13, 2011 by ವಿಶ್ವ ಕನ್ನಡಿಗ ನ್ಯೂಸ್
ಮುಂಬೈ : ಭಾರತದ ಖ್ಯಾತ ಗ್ಲಾಮರಸ್ ಟೆನಿಸ್ ತಾರೆ ಸಾನಿಯಾ ಮಿರ್ಜಾ ತನ್ನ ಗ್ಲಾಮರ್ ಲುಕ್ ಕಳೆದುಕೊಳ್ಳುತ್ತಿದ್ದಾರೆಯೇ ? ಹೀಗೊಂದು ಸಂಶಯ ಮೂಡಿದ್ದು ಮೊನ್ನೆ ನಡೆದ ಪಾರ್ಟಿಯೊಂದರಲ್ಲಿ ! ಈಕೆಯನ್ನು ನೋಡಿದ ಅಭಿಮಾನಿಗಳು ತಮ್ಮನ್ನು ತಾವೇ ಈ ರೀತಿ ಪ್ರಶ್ನಿಸಿ ಕೊಂಡರಂತೆ.
ಪಾರ್ಟಿಯಲ್ಲಿದ್ದ ಕೆಲವರ ಅಭಿಪ್ರಾಯದ ಪ್ರಕಾರ ಮದುವೆಯ ನಂತರ ಸಾನಿಯಾ ಹೆಚ್ಚು ದಪ್ಪಗಾಗಿದ್ದು ಮುಖದಲ್ಲಿ ವಯಸ್ಸಾಗುತ್ತಿರುವ ಲಕ್ಷಣವಾಗಿ ಗೆರೆಗಳು ಕಾಣುತ್ತಿವೆ. ಈಕೆಗಿದ್ದ ಹಿಂದಿನ ಕ್ರೀಡಾ ಬಾಡಿ ಫಿಟ್ನೆಸ್ ಸಹ ಈಗ ಈಕೆಗಿಲ್ಲ. ಈ ರೀತಿ ದಡೂತಿ ದೇಹ ಹೊತ್ತು ಟೆನಿಸ್ ಆಡಲು ಆಕೆಗೆ ಸಾಧ್ಯವಿಲ್ಲ. ಎಂದಿದ್ದಾರೆ.
ಸಾನಿಯಾ ಖಂಡಿತ ತನ್ನ ಫಿಟ್ನೆಸ್ ಕಡೆ ಗಮನ ಹರಿಸಬೇಕಿದೆ ಎಂಬುವುದು ಆಕೆಯ ಅಭಿಮಾನಿಗಳ ಬಯಕೆ ಕೂಡ ಆಗಿದ್ದು ವಿಶ್ವ ಟೆನಿಸ್ ರಂಗದಲ್ಲಿ ಭಾರತದ ಖ್ಯಾತಿಯನ್ನು ಹೆಚ್ಚಿಸಿದ ಸಾನಿಯಾ ತನ್ನ ಮುಂದಿನ ಕ್ರೀಡಾ ಜೀವನವನ್ನು ಯಾವ ರೀತಿಯಲ್ಲಿ ಮುಂದುವರೆಸುತ್ತಾಳೆ ಎಂಬುವುದನ್ನು ಕಾದು ನೋಡಬೇಕಿದೆ.
No comments:
Post a Comment