Tuesday, 29 November 2011

ಸೌದಿ ಅರೇಬಿಯಾದ ಅಲ್ ಖರ್ಜ್ ನಲ್ಲಿ ಭಾರಿ ಮಳೆ , ಜನ ಜೀವನ ಅಸ್ತವ್ಯಸ್ತ


Posted on  by ವಿಶ್ವ ಕನ್ನಡಿಗ ನ್ಯೂಸ್


ಸೌದಿ ಅರೇಬಿಯಾ: ಇಲ್ಲಿನ ಅಲ್ ಖರ್ಜ್ ನಗರದಾದ್ಯಂತ  ಭಾರಿ ಪ್ರಮಾಣದ ಮಳೆಯಾಗಿದ್ದು ಜನ ಜೀವನ ಅಸ್ತವ್ಯಸ್ತಗೊಂಡಿರುವ ಘಟನೆ ನಡೆದಿದೆ.ಬೆಳ್ಳಂ ಬೆಳಿಗ್ಗೆಯೇ ಮಳೆ ಆರಂಭವಾದಿದ್ದು ಕೆಲಸ ಕಾರ್ಯಗಳಿಗೆ ತೆರಳುವ ಜನರು  ತುಂಬಾ ತೊಂದರೆ ಅನುಭವಿಸಬೇಕಾಯಿತು ಎಂದು ಮಂಗಳೂರು ಮೂಲದ ಮೊಹಮ್ಮದ್ ಬಷೀರ್ ಪತ್ರಿಕೆಗೆ ತಿಳಿಸಿದರು. ಭಾರೀ ಮಳೆಯಿಂದಾಗಿ  ಬೆಳಿಗ್ಗಿನ ಸಮಯ ಸುಮಾರು  ೯ ರಿಂದ ೧೧ರ ವರೆಗೆ ಪವರ್ ಕಟ್  ನಡೆದಿದ್ದು ವಾಣಿಜ್ಯ  ಮಳಿಗೆಗಳೆಲ್ಲಾ  ತನ್ನ  ವ್ಯಾಪಾರ ವಹಿವಾಟುಗಳನ್ನು ಮೊಟಕು ಗೊಳಿಸಿದ್ದವು. ದಿನಸಿ,ತರಕಾರಿ, ಅಂಗಡಿ ಮುಂಗಟ್ಟುಗಳು ಬೆಳಿಗ್ಗಿನಿಂದಲೇ ಬಾಗಿಲು ತೆರೆಯದ ಕಾರಣ ಸಾರ್ವಜನಿಕರು ತಮ್ಮ ದಿನ ನಿತ್ಯದ ವಸ್ತು ಗಳಿಗಾಗಿ  ಪರದಾಡುವಂತಾಯಿತು.
ರಸ್ತೆ ಯಿಂದ ಸುಮಾರು ಒಂದು ಒಂದೂವರೆ ಅಡಿಯಷ್ಟು ಎತ್ತರದಲ್ಲಿರುವ ಪೂತ್ ಪಾತ್ ನಲ್ಲೂ ನೀರು ತುಂಬಿ ತುಳುಕುತಿದ್ದ ಕಾರಣ ಪಾದಚಾರಿಗಳ ಬವಣೆ ಹೇಳ ತೀರದ್ದಾಗಿತ್ತು.ನಾವು  ೬ ವರ್ಷಗಳಿಂದ ಇಲ್ಲಿ ವಾಸವಿದ್ದು ಈವರೆಗೆ ಇಂತಹಾ ಮೆಳೆಯಾಗಲಿ ಚಳಿಯಾಗಲಿ ಕಂಡಿರಲಿಲ್ಲಾ ಎಂದು ಸಿರಿಯಾ ಮೂಲದ ಮೊಹಮ್ಮದ್ ಜಲಾಲುದ್ದೀನ್ ನಜಾಯಿ ದಂಪತಿಗಳು ಪತ್ರಿಕೆಗೆ ವಿವರಿಸಿದರು.ಈ ಘಟನೆಯಯಿಂದ ಈ ವರೆಗೆ ಯಾವುದೇ ರೀತಿಯ ನಷ್ಟ ,ಸಾವು-ನೋವಿನಂತಹಾ ಘಟನೆಗಳು ಈವರೆಗೆ ವರದಿಯಾಗಿಲ್ಲ ಎಂದು ಅಲ್ ಖರ್ಜ್ ಪೋಲೀಸ್ ಮೂಲಗಳು ತಿಳಿಸಿವೆ.

ವರದಿ : ಎ.ಆರ್,ಹಳೆಯಂಗಡಿ.

ಒಂದು ವಾರದಲ್ಲಿ ಐದು ಮಿಲಿಯನ್ “ಯೂ ಟ್ಯೂಬ್ ” ವಿಕ್ಷಕರನ್ನು ಪಡೆದ “ಕೊಳವರಿ ಕೊಳವರಿ ಡಿ”


Posted on  by ವಿಶ್ವ ಕನ್ನಡಿಗ ನ್ಯೂಸ್



ಚಿತ್ರ ಜಗತ್ತು ಅಂದರೆ  ವಿಸ್ಮಯಗಳ ದಾಖಲೆಗಳ  ಪ್ರಪಂಚ ಎಂದರೆ  ತಪ್ಪಾಗಲಾರದು . ಇಲ್ಲಿ ದಿನಕ್ಕೊಂದು ಹೊಸ ಹೊಸ  ದಾಖಲೆಗಳು  ಹುಟ್ಟಿಕೊಳ್ಳುತ್ತವೆ . ಇದೀಗ ಇಲ್ಲೊಂದು ಹೊಸ ದಾಖಲೆ ಹೊಸದಾಗಿ ಮೂಡಿ ಬಂದಿದೆ . ತಮಿಳು   ಚಿತ್ರ  “೩ ” ಯ ಹಾಡು  “ಕೊಳವರಿ ಕೊಳವರಿ ಡಿ” ಒಂದೇ ವಾರದಲ್ಲಿ ” ಯೂ ಟ್ಯೂಬ್ ” ನಲ್ಲಿ ಐದು ಮಿಲಿಯನ್ ವಿಕ್ಷಕರನ್ನು ಪಡೆದು ಕೊಂಡಿದೆ. ತಮಿಳು  ಚಿತ್ರ ರಂಗದ  ಸೂಪರ್ ಸ್ಟಾರ್  ರಜನೀಕಾಂತ್  ಅವರ ಅಳಿಯ  ಧನುಶ್  ಸ್ವತಃ  ಹಾಡಿರುವ ಈ ಹಾಡು ಯಾರೂ  ಊಹಿಸದಷ್ಟು ಯಶಸ್ಸನ್ನು   ಪಡೆದು ಕೊಂಡಿದೆ  . ಹಾಡು ಭಾರತದಲ್ಲಿ ಮಾತ್ರವಲ್ಲ ಅಮೇರಿಕಾ , ಕೆನಡಾ , ಮಲೇಶಿಯಾ ಸೇರಿದಂತೆ ಅನೇಕ ದೇಶಗಳಲ್ಲಿ  ಜನಪ್ರಿಯವಾಗಿದೆ .
 ಚಿತ್ರದ ಬಂಡವಾಳ  ಕೇವಲ  ಈ ಹಾಡಿನ ಮೂಲಕ  ಸಿಕ್ಕಿರೋದು ಈ ಹಾಡಿ ನ  ಯಶಸ್ಸನ್ನು  ತೋರಿಸುತ್ತೆ  .  ಈ ಚಿತ್ರ ಇನ್ನೂ ಅನೇಕ  ವಿಶೇಷತೆಗಳನ್ನು ಒಳಗೊಂಡಿದೆ.   ಚಿತ್ರದ ನಿರ್ಮಾಪಕರು ಕಸ್ತೂರಿ  ರಾಜ  . ಚಿತ್ರದ ಸಂಗೀತ ನಿರ್ದೇಶಕ ೨೨ ವಯಸ್ಸಿನ  ಹೊಸ ಪ್ರತಿಭೆ ಅನಿರುಧ್  ,   ಚಿತ್ರದ ನಾಯಕಿ  ಖ್ಯಾತ   ನಟ  ಕಮಲ್ ಹಾಸನ್  ಅವರ ಪುತ್ರಿ  ಪ್ರಿಯ ಹಾಸನ್ , ಚಿತ್ರದ ನಾಯಕ ನಟ  ಧನುಶ್,   ಚಿತ್ರಕ್ಕೆ  ಕಥೆ   ಬರೆದು  ನಿರ್ದೆಶಿಸಿರುವುದು ರಜನಿ ಕಾಂತ್  ಪುತ್ರಿ  ಐಶ್ವರ್ಯ  ಧನುಶ್ .  ನಾಯಕ ನಟನ  ಪತ್ನಿಯೇ   ಈ ಚಿತ್ರದ ನಿರ್ದೇಶಕಿ ಆಗಿರೋದು ಈ ಚಿತ್ರದ ವಿಶೇಷತೆಗಳಲ್ಲೊಂದು .
 ಜನಪ್ರಿಯ ಕೊಳವರಿ  ಕೊಳವರಿ ಡಿ ಹಾಡಿನ ವಿಡಿಯೋ ಇಲ್ಲಿದೆ . ನೀವೊಮ್ಮೆ ಕೇಳಿ 
 
 
ನಿತಿನ್  ರೈ ಕುಕ್ಕುವಳ್ಳಿ ( ವರದಿಗಾರರು . ವಿಕೆ ನ್ಯೂಸ್)

ಹತ್ತನೆ ತರಗತಿಯ ವಿಧ್ಯಾರ್ಥಿನಿಯ ಪ್ರೇಮ ಚಕ್ಕಂದ ಪುರಾಣ


Posted on  by ಸಲೀಂ,ಅಮ್ಚಿನಡ್ಕ,ಪುತ್ತೂರು.


ಪುತ್ತೂರು: ಇಲ್ಲಿನ ಹೃದಯಬಾಗದಲ್ಲಿರುವ ಹೆಣ್ಣುಮಕ್ಕಳ ಪ್ರೌಡಶಾಲಾ ವಿದ್ಯಾರ್ಥಿನಿಯಯ ಪ್ರೇಮ ಚಕ್ಕಂದದ ಕಥೆಯಿದು. ಹತ್ತನೇ ತರಗತಿ ವಿದ್ಯಾರ್ಥಿನಿಯ ಪ್ರೇಮ ಚಕ್ಕಂದ  ಸ್ಥಳೀಯ ಯುವಕನೊಂದಿಗೆ ಸುಮಾರು ದಿನಗಳಿಂದ ನಡೆಯಿತ್ತಾ ಬಂದಿತ್ತು ಈಗ ಅದರ ಕ್ಲೈಮಾಕ್ಸ್ ಹಂತಕ್ಕೆ ತಲುಪಿ ಶಾಲೆಯಿಂದ ಟಿ.ಸಿ ಕೊಟ್ಟು ವಿದ್ಯಾರ್ಥಿನಿಯನ್ನು ಮನೆಗೆ ಕಳುಹಿಸಿದ ಘಟನೆ ಪುತ್ತೂರಿನಲ್ಲಿ ನಡೆದಿದೆ.  ಹೆಣ್ಣು ಮನೆಯಲ್ಲಿದ್ದು ಈಗ ಹೆಣ್ಣಿನ ಭವಿಷ್ಯ  ಕಂಗಾಲಾಗಿದೆ.
ಹೆತ್ತವರು/ ಪೋಷಕರು ಪ್ರೌಡವಸ್ಥೆಯ ವಿದ್ಯಾರ್ಥಿನಿಗಲ ಬಗ್ಗೆ ಹೆಚ್ಚಿನ ನಿಗಾ ವಹಿಸುದಿರುವುದೇ ಇಂತಹ ದುರಂತಗಳಿಗೆ ಕಾರಣ. ಕದ್ದು ಮುಚ್ಚಿ ನಡೆಯುವ ಪ್ರೇಮ ಪುರಾಣ ಕೊನೆಗೆ ದುರಂತದ ಕ್ಲೈಮಾಕ್ಸ್ ಗೆ ತಲುಪುತ್ತದೆ. ಅಲ್ಲದೆ ಈ ಹೆಣ್ಣಿನ ಹೆತ್ತವರ ಅವಸ್ಥೆ ಮಾನಸಿಕ ಪ್ರಲಾಪಗಳನ್ನುಯಾರೆಲ್ಲಿ ಹೇಳಿ ತೀರಿಸಲಿ.. ಯಾರಿಗೂ ಇಂತಹ ಅವಸ್ಥೆ ಬರದಿರಲೆಂದು ನಾವೆಲ್ಲರೂ ಪ್ರಾರ್ಥಿಸೋಣ.. ಇಂತಹ ಘಟನೆಗಳು ಪುನರಾವರ್ತಿಸಲು ಪ್ರತಿ ಹೆತ್ತವರು ಪ್ರಯತ್ನಿಸುವ ಸಂಕಲ್ಪ ಮಾಡಬೇಕಾಗಿದೆ.
ಆಗಿಂದಾಗೆ ಮಕ್ಕಳ ಶಾಲ ಬ್ಯಾಗ್ ಪರಿಶೋಧಿಸುವ ಕೆಲಸ ಹೆತ್ತವರು ಮಾಡಬೇಕಾಗಿದೆ.. ಇಂದಿನ ಪ್ರೇಪ ಪುರಾಣಕ್ಕೆ ಹೆಚ್ಚಿನ ರೆಕ್ಕೆಪುಕ್ಕೆ ಬರಲು ಮೊಬೈಲ್ ‍ವೆಂಬುದು ಪ್ರಾಮುಖ್ಯ ಸಾಧನ. ಈ ಘಟನೆ ನಡೆದ ನಂತರ ಶಾಲಾ ಮುಖ್ಯೋಪಾದ್ಯಾಯರು ಎಲ್ಲಾ ವಿದ್ಯಾರ್ಥಿನಿಗಳ ಬ್ಯಾಗ್ ಪರಿಶೋಧಿಸಿದಾಗ ಕೆಲವರ ಬ್ಯಾಗ್ ನಲ್ಲಿ ಪ್ರೇಪ ಪತ್ರ, ಇನ್ನು ಕೆಲವರ ಬ್ಯಾಗ್ ನಲ್ಲಿ ಮುಚ್ಚಿಟ್ಟಿದ್ದ ಮೊಬೈಲ್ ಪೋನ್‍ಗಳು ಲಭ್ಯವಾಗಿತ್ತು.. ನಮ್ಮ ವಿದ್ಯಾಥಿನಿಗಳು ಎಷ್ಟು ಅಧುನಿಕವಾಗಿ ಚುರುಕಾಗಿದಾರೆಂಬುದು ಇದರಿಂತ ತಿಳಿಯುತ್ತದೆ.
ಆಂಗ್ಲ ಬಾಷೆಯಲ್ಲಿ ಒಂದು ಗಾದೆ ಮಾತಿದೆ “ PRECAUTION IS BETTER THAN CURE”  ದುರಂತ ಬರುವುದೆಕ್ಕೆ ಮುಂಚೆಯೇ ಮುನ್ನುಚ್ಚರಿಕೆ ವಹಿಸುವುದು ಒಳಿತು.

Sunday, 27 November 2011

ಜ 12 ಕ್ಕೆ ರಾಷ್ಟ್ರ ಪತಿ ಪ್ರತಿಭಾ ಪಾಟೀಲ್ ಮಂಗಳೂರಿಗೆ


Posted on  by ವಿಶ್ವ ಕನ್ನಡಿಗ ನ್ಯೂಸ್ 

ಮಂಗಳೂರು : 2012 ರ ಜನವರಿ 12 ರಂದು ಆರಂಭವಾಗಲಿರುವ 17 ನೆ  ರಾಷ್ಟ್ರೀಯ ಯುವಜನೋತ್ಸವವನ್ನು ಉದ್ಘಾಟಿಸುವ ಸಲುವಾಗಿ ರಾಷ್ಟ್ರಾಧ್ಯಕ್ಷೆ ಪ್ರತಿಭಾ ಪಾಟೀಲ್  ಮೊದಲ ಬಾರಿಗೆ ಮಂಗಳೂರಿಗೆ ಆಗಮಿಸಲಿದ್ದಾರೆ ಎಂದು ಕೇಂದ್ರ ಯುವಜನ ವ್ಯವಹಾರ ಮತ್ತು ಕ್ರೀಡಾ ಇಲಾಖೆಯ ಉಪ ಕಾರ್ಯದರ್ಶಿ ಮಂಗಳೂರಿನ ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ
ಜನವರಿ 13 ರಿಂದ 15 ರ ವರೆಗೆ ಭಾರತೀಯ ವಿವಿಧ ಸಾಂಪ್ರದಾಯಿಕ ನೃತ್ಯ ರೂಪಕಗಳು, ಸಾಂಪ್ರದಾಯಿಕ ಸಂಗೀತ ವಾದಕಗಳು ,ಸಾಂಪ್ರದಾಯಿಕ ಗಾನ ರೂಪಕಗಳಸ್ಪರ್ಧೆಗಳು , ಚಿತ್ರ ಕಲೆ ,ಛಾಯಾಗ್ರಾಹಣ,  ಶಿಲ್ಪಕಲೆ ಸಹಿತ ಒಟ್ಟು 18 ಭಾರತೀಯ ಸಾಂಪ್ರದಾಯಿಕ ರಂಗಗಳ ಸ್ಪರ್ಧೆಗಳು ನಡೆಯಲಿವೆ. ತೀರ್ಪುಗಾರರಾಗಿ  ಕೇಂದ್ರದ ಇಬ್ಬರು ಮತ್ತು ರಾಜ್ಯಸರಕಾರದ ಇಬ್ಬರು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.25 ಜನರಿಗೆ ವೈಯಕ್ತಿಕ ಮತ್ತು ಒಂದು ಯುವಜನ ತಂಡಕ್ಕೆ ಪ್ರಶಸ್ತಿ ನೀಡಿ ಗೌರವಿಸಲಾಗುವುದು ಎಂದು ಅವರು ವಿವರಿಸಿದರು.
 
ವರದಿ : ಎ.ಆರ್,ಹಳೆಯಂಗಡಿ.