Posted on November 29, 2011 by ಸಲೀಂ,ಅಮ್ಚಿನಡ್ಕ,ಪುತ್ತೂರು.
ಪುತ್ತೂರು: ಇಲ್ಲಿನ ಹೃದಯಬಾಗದಲ್ಲಿರುವ ಹೆಣ್ಣುಮಕ್ಕಳ ಪ್ರೌಡಶಾಲಾ ವಿದ್ಯಾರ್ಥಿನಿಯಯ ಪ್ರೇಮ ಚಕ್ಕಂದದ ಕಥೆಯಿದು. ಹತ್ತನೇ ತರಗತಿ ವಿದ್ಯಾರ್ಥಿನಿಯ ಪ್ರೇಮ ಚಕ್ಕಂದ ಸ್ಥಳೀಯ ಯುವಕನೊಂದಿಗೆ ಸುಮಾರು ದಿನಗಳಿಂದ ನಡೆಯಿತ್ತಾ ಬಂದಿತ್ತು ಈಗ ಅದರ ಕ್ಲೈಮಾಕ್ಸ್ ಹಂತಕ್ಕೆ ತಲುಪಿ ಶಾಲೆಯಿಂದ ಟಿ.ಸಿ ಕೊಟ್ಟು ವಿದ್ಯಾರ್ಥಿನಿಯನ್ನು ಮನೆಗೆ ಕಳುಹಿಸಿದ ಘಟನೆ ಪುತ್ತೂರಿನಲ್ಲಿ ನಡೆದಿದೆ. ಹೆಣ್ಣು ಮನೆಯಲ್ಲಿದ್ದು ಈಗ ಹೆಣ್ಣಿನ ಭವಿಷ್ಯ ಕಂಗಾಲಾಗಿದೆ.
ಹೆತ್ತವರು/ ಪೋಷಕರು ಪ್ರೌಡವಸ್ಥೆಯ ವಿದ್ಯಾರ್ಥಿನಿಗಲ ಬಗ್ಗೆ ಹೆಚ್ಚಿನ ನಿಗಾ ವಹಿಸುದಿರುವುದೇ ಇಂತಹ ದುರಂತಗಳಿಗೆ ಕಾರಣ. ಕದ್ದು ಮುಚ್ಚಿ ನಡೆಯುವ ಪ್ರೇಮ ಪುರಾಣ ಕೊನೆಗೆ ದುರಂತದ ಕ್ಲೈಮಾಕ್ಸ್ ಗೆ ತಲುಪುತ್ತದೆ. ಅಲ್ಲದೆ ಈ ಹೆಣ್ಣಿನ ಹೆತ್ತವರ ಅವಸ್ಥೆ ಮಾನಸಿಕ ಪ್ರಲಾಪಗಳನ್ನುಯಾರೆಲ್ಲಿ ಹೇಳಿ ತೀರಿಸಲಿ.. ಯಾರಿಗೂ ಇಂತಹ ಅವಸ್ಥೆ ಬರದಿರಲೆಂದು ನಾವೆಲ್ಲರೂ ಪ್ರಾರ್ಥಿಸೋಣ.. ಇಂತಹ ಘಟನೆಗಳು ಪುನರಾವರ್ತಿಸಲು ಪ್ರತಿ ಹೆತ್ತವರು ಪ್ರಯತ್ನಿಸುವ ಸಂಕಲ್ಪ ಮಾಡಬೇಕಾಗಿದೆ.
ಆಗಿಂದಾಗೆ ಮಕ್ಕಳ ಶಾಲ ಬ್ಯಾಗ್ ಪರಿಶೋಧಿಸುವ ಕೆಲಸ ಹೆತ್ತವರು ಮಾಡಬೇಕಾಗಿದೆ.. ಇಂದಿನ ಪ್ರೇಪ ಪುರಾಣಕ್ಕೆ ಹೆಚ್ಚಿನ ರೆಕ್ಕೆಪುಕ್ಕೆ ಬರಲು ಮೊಬೈಲ್ ವೆಂಬುದು ಪ್ರಾಮುಖ್ಯ ಸಾಧನ. ಈ ಘಟನೆ ನಡೆದ ನಂತರ ಶಾಲಾ ಮುಖ್ಯೋಪಾದ್ಯಾಯರು ಎಲ್ಲಾ ವಿದ್ಯಾರ್ಥಿನಿಗಳ ಬ್ಯಾಗ್ ಪರಿಶೋಧಿಸಿದಾಗ ಕೆಲವರ ಬ್ಯಾಗ್ ನಲ್ಲಿ ಪ್ರೇಪ ಪತ್ರ, ಇನ್ನು ಕೆಲವರ ಬ್ಯಾಗ್ ನಲ್ಲಿ ಮುಚ್ಚಿಟ್ಟಿದ್ದ ಮೊಬೈಲ್ ಪೋನ್‍ಗಳು ಲಭ್ಯವಾಗಿತ್ತು.. ನಮ್ಮ ವಿದ್ಯಾಥಿನಿಗಳು ಎಷ್ಟು ಅಧುನಿಕವಾಗಿ ಚುರುಕಾಗಿದಾರೆಂಬುದು ಇದರಿಂತ ತಿಳಿಯುತ್ತದೆ.
ಆಂಗ್ಲ ಬಾಷೆಯಲ್ಲಿ ಒಂದು ಗಾದೆ ಮಾತಿದೆ “ PRECAUTION IS BETTER THAN CURE” ದುರಂತ ಬರುವುದೆಕ್ಕೆ ಮುಂಚೆಯೇ ಮುನ್ನುಚ್ಚರಿಕೆ ವಹಿಸುವುದು ಒಳಿತು.
No comments:
Post a Comment