Posted on November 27, 2011 by ವಿಶ್ವ ಕನ್ನಡಿಗ ನ್ಯೂಸ್
ಮಂಗಳೂರು : 2012 ರ ಜನವರಿ 12 ರಂದು ಆರಂಭವಾಗಲಿರುವ 17 ನೆ ರಾಷ್ಟ್ರೀಯ ಯುವಜನೋತ್ಸವವನ್ನು ಉದ್ಘಾಟಿಸುವ ಸಲುವಾಗಿ ರಾಷ್ಟ್ರಾಧ್ಯಕ್ಷೆ ಪ್ರತಿಭಾ ಪಾಟೀಲ್ ಮೊದಲ ಬಾರಿಗೆ ಮಂಗಳೂರಿಗೆ ಆಗಮಿಸಲಿದ್ದಾರೆ ಎಂದು ಕೇಂದ್ರ ಯುವಜನ ವ್ಯವಹಾರ ಮತ್ತು ಕ್ರೀಡಾ ಇಲಾಖೆಯ ಉಪ ಕಾರ್ಯದರ್ಶಿ ಮಂಗಳೂರಿನ ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ
ಜನವರಿ 13 ರಿಂದ 15 ರ ವರೆಗೆ ಭಾರತೀಯ ವಿವಿಧ ಸಾಂಪ್ರದಾಯಿಕ ನೃತ್ಯ ರೂಪಕಗಳು, ಸಾಂಪ್ರದಾಯಿಕ ಸಂಗೀತ ವಾದಕಗಳು ,ಸಾಂಪ್ರದಾಯಿಕ ಗಾನ ರೂಪಕಗಳಸ್ಪರ್ಧೆಗಳು , ಚಿತ್ರ ಕಲೆ ,ಛಾಯಾಗ್ರಾಹಣ, ಶಿಲ್ಪಕಲೆ ಸಹಿತ ಒಟ್ಟು 18 ಭಾರತೀಯ ಸಾಂಪ್ರದಾಯಿಕ ರಂಗಗಳ ಸ್ಪರ್ಧೆಗಳು ನಡೆಯಲಿವೆ. ತೀರ್ಪುಗಾರರಾಗಿ ಕೇಂದ್ರದ ಇಬ್ಬರು ಮತ್ತು ರಾಜ್ಯಸರಕಾರದ ಇಬ್ಬರು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.25 ಜನರಿಗೆ ವೈಯಕ್ತಿಕ ಮತ್ತು ಒಂದು ಯುವಜನ ತಂಡಕ್ಕೆ ಪ್ರಶಸ್ತಿ ನೀಡಿ ಗೌರವಿಸಲಾಗುವುದು ಎಂದು ಅವರು ವಿವರಿಸಿದರು.
ವರದಿ : ಎ.ಆರ್,ಹಳೆಯಂಗಡಿ.
HI GUYS
ReplyDelete