Posted on November 29, 2011 by ವಿಶ್ವ ಕನ್ನಡಿಗ ನ್ಯೂಸ್
ಸೌದಿ ಅರೇಬಿಯಾ: ಇಲ್ಲಿನ ಅಲ್ ಖರ್ಜ್ ನಗರದಾದ್ಯಂತ ಭಾರಿ ಪ್ರಮಾಣದ ಮಳೆಯಾಗಿದ್ದು ಜನ ಜೀವನ ಅಸ್ತವ್ಯಸ್ತಗೊಂಡಿರುವ ಘಟನೆ ನಡೆದಿದೆ.ಬೆಳ್ಳಂ ಬೆಳಿಗ್ಗೆಯೇ ಮಳೆ ಆರಂಭವಾದಿದ್ದು ಕೆಲಸ ಕಾರ್ಯಗಳಿಗೆ ತೆರಳುವ ಜನರು ತುಂಬಾ ತೊಂದರೆ ಅನುಭವಿಸಬೇಕಾಯಿತು ಎಂದು ಮಂಗಳೂರು ಮೂಲದ ಮೊಹಮ್ಮದ್ ಬಷೀರ್ ಪತ್ರಿಕೆಗೆ ತಿಳಿಸಿದರು. ಭಾರೀ ಮಳೆಯಿಂದಾಗಿ ಬೆಳಿಗ್ಗಿನ ಸಮಯ ಸುಮಾರು ೯ ರಿಂದ ೧೧ರ ವರೆಗೆ ಪವರ್ ಕಟ್ ನಡೆದಿದ್ದು ವಾಣಿಜ್ಯ ಮಳಿಗೆಗಳೆಲ್ಲಾ ತನ್ನ ವ್ಯಾಪಾರ ವಹಿವಾಟುಗಳನ್ನು ಮೊಟಕು ಗೊಳಿಸಿದ್ದವು. ದಿನಸಿ,ತರಕಾರಿ, ಅಂಗಡಿ ಮುಂಗಟ್ಟುಗಳು ಬೆಳಿಗ್ಗಿನಿಂದಲೇ ಬಾಗಿಲು ತೆರೆಯದ ಕಾರಣ ಸಾರ್ವಜನಿಕರು ತಮ್ಮ ದಿನ ನಿತ್ಯದ ವಸ್ತು ಗಳಿಗಾಗಿ ಪರದಾಡುವಂತಾಯಿತು.
ರಸ್ತೆ ಯಿಂದ ಸುಮಾರು ಒಂದು ಒಂದೂವರೆ ಅಡಿಯಷ್ಟು ಎತ್ತರದಲ್ಲಿರುವ ಪೂತ್ ಪಾತ್ ನಲ್ಲೂ ನೀರು ತುಂಬಿ ತುಳುಕುತಿದ್ದ ಕಾರಣ ಪಾದಚಾರಿಗಳ ಬವಣೆ ಹೇಳ ತೀರದ್ದಾಗಿತ್ತು.ನಾವು ೬ ವರ್ಷಗಳಿಂದ ಇಲ್ಲಿ ವಾಸವಿದ್ದು ಈವರೆಗೆ ಇಂತಹಾ ಮೆಳೆಯಾಗಲಿ ಚಳಿಯಾಗಲಿ ಕಂಡಿರಲಿಲ್ಲಾ ಎಂದು ಸಿರಿಯಾ ಮೂಲದ ಮೊಹಮ್ಮದ್ ಜಲಾಲುದ್ದೀನ್ ನಜಾಯಿ ದಂಪತಿಗಳು ಪತ್ರಿಕೆಗೆ ವಿವರಿಸಿದರು.ಈ ಘಟನೆಯಯಿಂದ ಈ ವರೆಗೆ ಯಾವುದೇ ರೀತಿಯ ನಷ್ಟ ,ಸಾವು-ನೋವಿನಂತಹಾ ಘಟನೆಗಳು ಈವರೆಗೆ ವರದಿಯಾಗಿಲ್ಲ ಎಂದು ಅಲ್ ಖರ್ಜ್ ಪೋಲೀಸ್ ಮೂಲಗಳು ತಿಳಿಸಿವೆ.
ವರದಿ : ಎ.ಆರ್,ಹಳೆಯಂಗಡಿ.
ವರದಿ : ಎ.ಆರ್,ಹಳೆಯಂಗಡಿ.
No comments:
Post a Comment