Wednesday, 7 December 2011

ಠಾಕ್ರೆ ಮೊಮ್ಮಗಳು ಇಸ್ಲಾಮ್ ಮತ ಸ್ವೀಕರಿಸಿ ಮೊಅಹಮದ್ ನಬಿ ಜತೆ ನಿಖಾ


ಠಾಕ್ರೆ ಮೊಮ್ಮಗಳು ಇಸ್ಲಾಮ್ ಮತ ಸ್ವೀಕರಿಸಿ ಮೊಅಹಮದ್ ನಬಿ ಜತೆ ನಿಖಾ

ಮುಂಬೈ, ಡಿ.7:   ಶಿವಸೇನ ಮುಖ್ಯಸ್ಥ ಬಾಳಾ ಠಾಕ್ರೆ ಅವರ ಮೊಮ್ಮಗಳು ನೇಹಾ ಅವರು ಇಸ್ಲಾಂ ಮತ ಸ್ವೀಕರಿಸಿ  ಮುಸ್ಲೀಮ್ ಯುವಕನನ್ನು ವರಿಸಿದ್ದಾಳೆಂದು ಸ್ಥಳೀಯ ಮಾಧ್ಯಮಗಳಲ್ಲಿ ವರದಿಯಾಗಿದೆ.
ಡಿ.4ರಂದು ನಿಖಾ ನಡೆದಿದ್ದು, ಹೋಟೆಲ್ ತಾಜ್ ನಡೆದ ಆರತಕ್ಷತೆ ಸಮಾರಂಭಕ್ಕೆ ರಾಜ್ ಠಾಕ್ರೆ ಕೂಡಾ ಪಾಲ್ಗೊಂಡಿದ್ದರು ಎನ್ನಲಾಗಿದೆ.
ಮಹಮ್ಮದ್ ನಬಿ ಕೈ ಹಿಡಿದ ನೇಹಾಳನ್ನು ಆಶೀರ್ವದಿಸಲು ಉದ್ಧವ್ ಠಾಕ್ರೆ ಸಂಸಾರ ಸಮೇತ ಬಂದಿದ್ದರು ಎಂದು ವರದಿ ಮಾಡಲಾಗಿದೆ. ಆದರೆ, ಅಜ್ಜ ಬಾಳಾ ಠಾಕ್ರೆ ಮಾತ್ರ ಎಲ್ಲೂ ಕಾಣಿಸಿಕೊಂಡಿಲ್ಲ.
 ನೇಹಾ ಇಸ್ಲಾಂ ಧರ್ಮವನ್ನು ಒಪ್ಪಿಕೊಂಡು ಮತಾಂತರಗೊಳ್ಳಲಿದ್ದಾರೆ ಎಂಬ ಸುದ್ದಿಯಿದೆ.ಆದರೆ, ನಿಖಾ ಆಗಿ ಆಗಲೇ ಮೂರು ತಿಂಗಳು ಕಳೆದಿದೆ ಆರತಕ್ಷತೆ ನಡೆಸಿ ಮದುವೆಗೆ ಅಧಿಕೃತವಾಗಿ ಮೊಹರು ಹಾಕಲು ಠಾಕ್ರೆ ಕುಟುಂಬ ಒಪ್ಪಿದೆ ಎನ್ನಲಾಗಿದೆ.
ಹಿಂದೂತ್ವ ಎಂದು ಪ್ರತಿಪಾದಿಸುತ್ತಾ ಸದಾ ಪಾಕಿಸ್ತಾನ, ಮುಸ್ಲೀಮರ ವಿರುದ್ಧ ಕತ್ತಿ ಮಸೆಯುವ ಅಜ್ಜ ಬಾಳಾ ಠಾಕ್ರೆ ಈ ಮದುವೆ ಬಗ್ಗೆ  ಯಾವುದೇ ಪ್ರತಿಕ್ರಿಯೆ ನೀಡಿದ್ದಂತಿಲ್ಲ.

No comments:

Post a Comment