Tuesday, 10 January 2012

43,000 ಕೋಟಿ ಆಸ್ತಿಯ ಒಡೆಯ – ಜಗನ್ ಮೋಹನ್ ರೆಡ್ಡಿ


Posted on  by ರಫೀಕ್ ದಲ್ಕಾಜೆ,ಕೋಲ್ಪೆ


ಹೈದರಾಬಾದ್: ಜ.9.ಇದೀಗ ದಿನದಿಂದ ದಿನಕ್ಕೆ ಎಲ್ಲಾ ರಾಜಕೀಯ ನಾಯಕರನ್ನು ಕಾಡ ತೊಡಗಿರುವ ಸಿಬಿಐ ಒಬ್ಬೊಬ್ಬರ ಮೇಲೆ ಗಾಳ ಹಾಕುತ್ತ ವೈ‌ಎಸ್‌ಆರ್ ಕುಟುಂಬವನ್ನು ತೀವ್ರವಾಗಿ ತನಿಖೆ ನಡೆಸುತ್ತಿದೆ. ಸುಮಾರು 43,000 ಕೋಟಿ ಅಕ್ರಮ ಆಸ್ತಿ ಸಂಪಾದಿಸಿದೆ ಎಂದು ವೈ‌ಎಸ್‌ಆರ್ ಕಾಂಗ್ರೆಸ್ ಅಧ್ಯಕ್ಷ ಜಗನ್ ಮೋಹನ್ ರೆಡ್ಡಿಯ ಮೇಲಿನ ತನಿಖೆಯನ್ನು ಮುಂದುವರಿಸಿದೆ. ಲಕ್ಸಂಬರ್ಗ್ ನ ಕಂಪನಿಯೊಂದಿಗೆ ವೈ‌ಎಸ್ ಆರ್ ಕುಟುಂಬ ಸಂಪರ್ಕ ಹೊಂದಿರುವುದು ಖಾತ್ರಿಯಾಗಿದೆ. ಈ ಮುಂಚೆ ಸುಮಾರು 100 ಕೋಟಿ.ರೂ ಲಕ್ಸಂಬರ್ಗ್ ಕಂಪನಿಗೆ ಸಂದಾಯದ ಬಗ್ಗೆ ಬಂಡವಾಳ ಹೂಡಿಕೆದಾರದಿಂದ ಮಾಹಿತಿ ಸಿಕ್ಕಾಗ ನನಗೆ ಏನು ಗೊತ್ತಿಲ್ಲ, ಆ ಕಂಪನಿ ನನ್ನದಲ್ಲ ಎಂದು ವೈ‌ಎಸ್ ಜಗನ್ ನುಣಚಿಕೊಂಡಿದ್ದರು. ದಿವಂಗತ ವೈ‌ಎಸ್ ರಾಜಶೇಖರ ರೆಡ್ಡಿ ಅವರ ಕುಟುಂಬದ ಆಡಿಟರ್ ವಿಜಯ್ ಸಾಯಿ ರೆಡ್ಡಿ ಬಳಿ ಇದ್ದ ಅಮೂಲ್ಯ ದಾಖಲೆಗಳನ್ನು ಸಿಬಿ‌ಐ ವಶಪಡಿಸಿಕೊಂಡಿದ್ದು, ಕೋರ್ಟಿಗೆ ಹಾಜರುಪಡಿಸಲಿದೆ.
ಸುಮಾರು 150 ಕೋಟಿ ಮೌಲ್ಯದ ಬೆಂಗಳೂರು ಮೂಲದ ಸಂಡೂರು ಪವರ್ ಕಂಪನಿ ಲಿಮಿಟೆಡ್ ಎಂಬ ಕಂಪನಿಯನ್ನು 761 ಕೋಟಿ.ರೂಗೆ ಏರಿಸಿದ್ದು ನಿಜ ಎಂದು ವಿಜಯ್ ರೆಡ್ಡಿ ಒಪ್ಪಿಕೊಂಡಿದ್ದಾರೆ. ಅಲ್ಲದೆ ಲಕ್ಸಂಬರ್ಗ್ ನ ಏಷ್ಯಾ ಇನ್ಫ್ರಾಸ್ಟಕ್ಚರ್ ಸಿಕಾರ್ ಕಂಪನಿಯಿಂದ ಹರಿದು ಬಂದ ನಿಧಿ ಸಂಡೂರು ಪವಲ್ ಕಂಪನಿ ಸೇರಿಸಲಾಗುತ್ತಿತ್ತು ಎಂಬ ಮಾಹಿತಿ ಸಿಕ್ಕಿದೆ. ಯಾರು ಒಡೆಯ?: ಲಕ್ಸಂಬರ್ಗ್ ನ ಏಷ್ಯಾ ಇನ್ಫ್ರಾಸ್ಟಕ್ಚರ್ ಕಂಪನಿ ಮಾಲಿಕರು ಯಾರು ಎಂಬುದನ್ನು ಹುಡುಕುತ್ತಾ ಹೋದ ಸಿಬಿ‌ಐಗೆ ವೈಟ್ ಹಾಲ್ ಅಸೋಸಿಯೇಷನ್ ಎಂಬ ಸಂಸ್ಥೆ ಹೆಸರು ಸಿಕ್ಕಿದೆ. ಆದರೆ, ಈ ಕಂಪನಿಯ ನಿಜವಾದ ವಾರಸುದಾರರು ವೈ‌ಎಸ್ ರಾಜಶೇಖರ ರೆಡ್ಡಿ ಹಾಗೂ ವೈ‌ಎಸ್ ಜಗನ್ ಎಂದು ಸಿಬಿ‌ಐ ವಾದಿಸುತ್ತಿದೆ.
ಅದರೆ, ಚಂಚಲಗುಡ ಜೈಲಿನಲ್ಲಿರುವ ವಿಜಯ ಸಾಯಿ ರೆಡ್ಡಿ ಮಾತ್ರ ಈ ಎರಡು ಕಂಪನಿಗಳ ಹಿಂದಿನ ರಹಸ್ಯವನ್ನು ಬಿಟ್ಟು ಕೊಟ್ಟಿಲ್ಲ. ಸಾಕ್ಷಿ ಟಿವಿ, ಜಗತಿ ಪಬ್ಲಿಕೇಷನ್ ಹುಟ್ಟುಕೊಂಡ ಕಥೆ, ಸಂಡೂರು ಪವರ್ ಕಂಪನಿ ಖರೀದಿಸಿ ಜಗನ್ ಸೃಷ್ಟಿಸಿದ ಐದು ಬೇನಾಮಿ ಕಂಪನಿಗಳ ಕಥೆ ಮಾತ್ರ ಸಿಬಿ‌ಐಗೆ ಸಿಕ್ಕಿದೆ. ಲಕ್ಸಂಬರ್ಗ್ ಕಂಪನಿ ಜೊತೆ ಇರುವ ಸಂಬಂಧ ಸಾಬೀತಾದರೆ, ಜಗನ್ ಆಸ್ತಿ ಮೊತ್ತದ ನೈಜತೆ ಬೆಳಕಿಗೆ ಬರಲಿದೆ.
ವರದಿ: ಅಹಮ್ಮದ್ ಜಾಬೀರ್ ಬೆಟ್ಟಂಪಾಡಿ

No comments:

Post a Comment