Saturday, 28 January 2012

ಕ್ರಿಮಿನಲ್ ಆರೋಪಿಯೊಂದಿಗೆ ಮುಖ್ಯಮಂತ್ರಿ


Posted on  by ಅಬ್ದುಲ್ ಹಮೀದ್ ಸಿ.ಹೆಚ್, ಕಾವು, ಪುತ್ತೂರು.

ಬೆಳ್ತಂಗಡಿ : ಇತ್ತೀಚೆಗೆ ಉಪ್ಪಿನಂಗಡಿಯಲ್ಲಿ ನಡೆದ ಹಿಂದೂ ಸಮಾಜೋತ್ಸವದಲ್ಲಿ ಪ್ರಚೋದನಕಾರಿಯಾಗಿ ಭಾಷಣ ಮಾಡಿರುವ ಮಾತ್ರವಲ್ಲ ಜಾಮೀನು ರಹಿತ ಪ್ರಕರಣದಲ್ಲಿ ಆರೋಪಿಯಾಗಿರುವ ಕಲ್ಲಡ್ಕ ಪ್ರಭಾಕರ ಭಟ್‌ರೊಂದಿಗೆ ರಾಜ್ಯದ ೬ಕೋಟಿ ಜನತೆಯ ಓರ್ವ ಪ್ರತಿನಿಧಿಯಾಗಿರುವ ಮುಖ್ಯಮಂತ್ರಿ ಡಿ.ವಿ ಸದಾನಂದ ಗೌಡರವರು ಜೊತೆಯಾಗಿ ಹುಬ್ಬಳ್ಳಿಯ ಸಭೆಯೊಂದರಲ್ಲಿ ಭಾಗವಹಿಸಿರುವ ಘಟನೆಯನ್ನು ಎಸ್.ಡಿ.ಪಿ.ಐ ಬೆಳ್ತಂಗಡಿ ತೀವ್ರವಾಗಿ ಖಂಡಿಸುತ್ತದೆ.
ಈ ರಾಜ್ಯದ ಓರ್ವ ಗೌರವಾನ್ವಿತ ಸ್ಥಾನದಲ್ಲಿದ್ದುಕೊಂಡು ರಾಜ್ಯದ ಜನತೆಗೆ ನ್ಯಾಯವನ್ನು ಮಾತ್ರವಲ್ಲ ನ್ಯಾಯಾಂಗಕ್ಕೆ ಗೌರವ ನೀಡಬೇಕಾದ ಡಿ.ವಿ ಸದಾನಂದ ಗೌಡರು ಉಪ್ಪಿನಂಗಡಿ ಪೋಲೀಸ್ ಠಾಣೆಯಲ್ಲಿ ದಾಖಲಿಸಿರುವ ಸೆಕ್ಷನ್ 153A ಹಾಗೂ ಸೆಕ್ಷನ್ 295A ಪ್ರಕರಣದಡಿಯಲ್ಲಿ ಜಾಮೀನು ರಹಿತ ಆರೋಪಿಯಾದ ಕಲ್ಲಡ್ಕ ಪ್ರಭಾಕರ್ ರನ್ನು ಬಂಧಿಸಿ ನ್ಯಾಯಾಲಯಕ್ಕೆ ಒಪ್ಪಿಸುವುದು ಬಿಟ್ಟು ಅವರೊಂದಿಗೆಯೇ ಹುಬ್ಬಳ್ಳಿಯಲ್ಲಿ ನಡೆಯುತ್ತಿರುವ RSS ನ ಶಿಬಿರದಲ್ಲಿ ಭಾಗವಹಿಸಿರುವುದು ನ್ಯಾಯಾಂಗಕ್ಕೆ ಮಾಡಿರುವ ಅಪಚಾರವಾಗಿರುತ್ತದೆ. ಮಾತ್ರವಲ್ಲ ತಾನು ಕ್ರಿಮಿನಲ್ ಆರೋಪಿಗಳ ಹಿಂಬಾಲಕನೆಂದು ತೋರ್ಪಡಿಸಿರುತ್ತಾರೆ.
ಜಿಲ್ಲೆಯ ಜನತೆ ನ್ಯಾಯದ ಮೇಲೆ ಇನ್ನೂ ಭರವಸೆಯಿಟ್ಟಿದ್ದು ಒಂದು ವೇಳೆ ಆರೋಪಿತ ಪ್ರಭಾಕರ್ ಭಟ್ ರನ್ನು ಬಂಧಿಸಿ ನ್ಯಾಯಾಲಯಕ್ಕೆ ಒಪ್ಪಿಸದೆ ಇದ್ದರೆ ಎಸ್.ಡಿ.ಪಿ.ಐ ವತಿಯಿಂದ ಪ್ರತಿಭಟನೆಯನ್ನು ಆಯೋಜಿಸಲಾಗುವುದು ಎಂದು ಪತ್ರಿಕಾ ಹೇಳಿಕೆಯಲ್ಲಿ ತಾಲೂಕು ಅಧ್ಯಕ್ಷರಾದ ಅಕ್ಬರ್ ಬಿ. ಹಾಗೂ ಕಾರ್ಯದರ್ಶಿ ಅನೀಸ್.ಜಿ ಯವರು ಜಂಟಿ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

No comments:

Post a Comment